ಸುದ್ದಿ 

ಬೆಂಗಳೂರು: ಲಾರಿ ಡಿಕ್ಕಿಯಿಂದ ಬೈಕ್ ಸವಾರ ಗಂಭೀರ ಗಾಯ

Taluknewsmedia.com

ಬೆಂಗಳೂರು, ಜುಲೈ 20:2025
ನಗರದ ಕೋಗಿಲು ಸರ್ಕಲ್ ಬಳಿ ಇಂದು ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಬೈಕ್ ಸವಾರ ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆ ಇಂದು ಸಂಜೆ 4:10ರ ಸುಮಾರಿಗೆ ಬಿಬಿ ಮುಖ್ಯ ರಸ್ತೆ ಬಳಿ ನಡೆದಿದೆ.

ವಿವರದ ಪ್ರಕಾರ, ದಿನೇಶ ಕುಮಾರ್ ಅವರು ನಂಬರ್ 6ಎ.01 ಇಬಿರಾ.3305 ಸಂಖ್ಯೆಯ ಬೈಕ್‌ನಲ್ಲಿ ಸಾಗುತ್ತಿದ್ದರು. ಇದೇ ವೇಳೆ ಲಾರಿ ಚಾಲಕನ ನಿರ್ಲಕ್ಷ್ಯದಿಂದಾಗಿ ಲಾರಿ ಬಲಕ್ಕೆ ತಿರುಗಿ ಬೈಕ್ ಎಡಭಾಗಕ್ಕೆ ಡಿಕ್ಕಿಯಾಗಿ, ದಿನೇಶ್ ಕುಮಾರ್ ಅವರ ಎಡಕೈ ಹಾಗೂ ಶರೀರದ ಅನೇಕ ಭಾಗಗಳಿಗೆ ಗಂಭೀರ ಗಾಯಗಳು ಸಂಭವಿಸಿವೆ.

ಅಪಘಾತದ ನಂತರ ಸ್ಥಳೀಯರು ಕೂಡಲೇ ಗಾಯಾಳುವನ್ನು ಕೆ.ಕೆ ಆಸ್ಪತ್ರೆಯ ಲೈಫ್ ಕೇರ್ ಯುನಿಟ್‌ಗೆ ದಾಖಲಿಸಿದ್ದಾರೆ. ಪ್ರಸ್ತುತ ಚಿಕಿತ್ಸೆ ನಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಯಲಹಂಕ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಲಾರಿ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. ಘಟನೆಗೆ ಕಾರಣವಾದ ಲಾರಿ ಹಾಗೂ ಚಾಲಕನ ಕುರಿತು ತನಿಖೆ ಮುಂದುವರೆದಿದೆ.

Related posts