ಜಮೀನು ವ್ಯವಹಾರದ ಹೆಸರಿನಲ್ಲಿ ₹1 ಕೋಟಿಯ ಮೋಸ: ಹಣ ಕೇಳಿದ ಕಛೇರಿಗೆ ನುಗ್ಗಿ ಗಲಾಟೆ, ಜೀವ ಬೆದರಿಕೆ
ಬೆಂಗಳೂರು, ಜುಲೈ 21:2025
ಜಮೀನು ಮಾರಾಟದ ಹೆಸರಿನಲ್ಲಿ ₹1 ಕೋಟಿ ಮೊತ್ತದ ಹಣ ಪಡೆದುಕೊಂಡು, ನಂತರ ನಕಲಿ ದಾಖಲೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರದಲ್ಲಿ ಮೋಸದ ಪ್ರಕರಣ ಬೆಳಕಿಗೆ ಬಂದಿದೆ. ಹಣ ವಾಪಸ್ ಕೇಳಿದ ಹೊತ್ತಿನಲ್ಲಿ, ಆರೋಪಿತರು ಕಛೇರಿಗೆ ನುಗ್ಗಿ ಗಲಾಟೆ ಮಾಡಿದ ಘಟನೆ 07 ಜುಲೈ 2025 ರಂದು ನಡೆದಿದೆ.
ದೂರುದಾರರ ಪ್ರಕಾರ, 2025ರ ಜೂನ್ ತಿಂಗಳಲ್ಲಿ ಆರೋಪಿತರು ತಮಗೆ ಬಡಿದ ಕಟ್ಟಿಹೊಸಹಳ್ಳಿ ಗ್ರಾಮದ ಜಮೀನನ್ನು ಮಾರಾಟ ಮಾಡಲು ಪ್ರಸ್ತಾಪಿಸಿದರು. ಜಮೀನನ್ನು ಪರಿಶೀಲಿಸಿದ ನಂತರ, 24 ಜೂನ್ 2025 ರಂದು ₹1 ಕೋಟಿಯ ವ್ಯವಹಾರದ ಭಾಗವಾಗಿ ಮೊದಲ ಹಂತದಲ್ಲಿ ₹68 ಲಕ್ಷ ಹಣವನ್ನು ಪಾವತಿಸಿದರು. ಉಳಿದ ಹಣವನ್ನು ಮೂಲ ದಾಖಲೆಗಳೊಂದಿಗೆ ನಂತರ ನೀಡುವಂತೆ ಒಪ್ಪಂದವಾಯಿತು.
ಆದರೆ, ಆರೋಪಿತರು ನಕಲಿ ದಾಖಲೆಗಳ ಜೆರಾಕ್ಸ್ ನಕಲನ್ನು ನೀಡಿದ ಬಳಿಕ, ದೂರುದಾರರು ಹಣ ವಾಪಸ್ ಕೇಳಿದಾಗ 6-7 ಅಪರಿಚಿತ ವ್ಯಕ್ತಿಗಳೊಂದಿಗೆ ಕಛೇರಿಗೆ ನುಗ್ಗಿದರು. ಕಿಟಕಿ ಒಡೆದು, ಸಿಬ್ಬಂದಿಗೆ ಹಲ್ಲೆ ಮಾಡಲು ಮುಂದಾದರು. ಕಂಪನಿಯ ನಿರ್ದೇಶಕರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು, “ನಾನು ಲಾಯರ್, ನಾನೇನು ಮಾಡಬಹುದು ನೋಡಿ!” ಎಂದು ಜೀವ ಬೆದರಿಕೆ ಹಾಕಿದರು.
ದೂರುದಾರರು ಮೊದಲು ಆರೋಪಿತರಿಗೆ ನಂಬಿಕೆವಿಟ್ಟು ಕಾಯುತ್ತಿದ್ದರೂ, ನಂತರ ಆರೋಪಿತರು ಅವರ ವಿರುದ್ಧವೇ ಪೊಲೀಸ್ ದೂರು ದಾಖಲಿಸಿದುದು ಬೆಳಕಿಗೆ ಬಂದಿದೆ. ಇದೀಗ ದೂರುದಾರರು ಸೂಕ್ತ ಕಾನೂನು ಕ್ರಮಕ್ಕಾಗಿ ಅಮೃತಳ್ಳಿ ಪೋಲಿಸ್ ಠಾಣೆಯಲ್ಲಿ ನ್ಯಾಯದ ಮೊರೆ ಹೋಗಿದ್ದಾರೆ.

