ಸ್ವತ್ತಿನಲ್ಲಿ ಬೋರ್ಡ್ ಹಾಕಿ, ಬೆದರಿಕೆ ಹಾಕಿದ ಆರೋಪಿಗಳ ವಿರುದ್ಧ ಪೊಲೀಸ್ ದೂರು
ಬೆಂಗಳೂರು, ಜುಲೈ 21:2025
ಮೂಲತಃ ನಗರದ ನಿವಾಸಿಯಾಗಿರುವ ಲಕ್ಷ್ಮಮ್ಮ ಅವರು ತಮ್ಮ ಮಗಳು ಶ್ರೀಮತಿ ನಂದಿನಿಯಿಂದ ದಿನಾಂಕ 30/05/2023 ರಂದು ಉಡುಗೊರೆಯ ಮುಖಾಂತರ ಪಡೆದಿದ್ದ, ಸುಮಾರು 2000 ಚದರ ಅಡಿಯುಳ ವಿಸ್ತೀರ್ಣದ ನಿವೇಶನವನ್ನು ನಿಯಮಿತವಾಗಿ ನೋಡಲು ಆಗಾಗ ಸ್ಥಳಕ್ಕೆ ಹೋಗುತ್ತಿದ್ದರು. ಆದರೆ 2024ರಿಂದ, ಯಾರೋ ಅಪರಿಚಿತರು “ಲೋಕಾಯುಕ್ತದಲ್ಲಿ ಪ್ರಕರಣ ಬಾಕಿಯಿದೆ” ಎಂಬ ಬೋರ್ಡ್‌ಗಳನ್ನು ಸದರಿ ಸ್ಥಳದಲ್ಲಿ ಹಾಕಿದ್ದಾರೆಂದು ತಿಳಿದು ಬಂದಿದೆ.
ಇದಾದಂತೆ, ದೂರುದಾರರು ದಿನಾಂಕ 21/04/2025ರಂದು ಸ್ಥಳಕ್ಕೆ ಭೇಟಿ ನೀಡಿದಾಗ, ಹರೀಶ್ ಕುಮಾರ್, ರವಿ ಮತ್ತು ನಾರಾಯಣ ಎಂಬವರು ಅವರಿಗೆ ಎದುರಾಗಿದ್ದು, “ನೀವು ನಮ್ಮ ಸ್ಥಳದಲ್ಲಿ ಬೋರ್ಡ್ ಏಕೆ ಹಾಕಿದ್ದೀರಿ? ಅದನ್ನು ತೆಗೆದು ಹಾಕಿ” ಎಂದು ಕೇಳಿ ನಂತರ “ಚಿಕ್ಕಜಾಲ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರೆ ನಿಮ್ಮನ್ನು ಕತ್ತಿಯಿಂದ ಕತ್ತರಿಸಿ ಕೊಲ್ಲುತ್ತೇವೆ” ಎಂಬದ್ದಾಗಿ ಬೆದರಿಕೆಯುಡಿಸಿದ್ದಾರೆ.
ಮತ್ತೆ ದಿನಾಂಕ 10/05/2025 ರಂದು, ದೂರುದಾರರು ತಮ್ಮ ಮಗಳ ಆದೇಶದಂತೆ ನಿಕಟಪಾಲು ಮಾರಾಟದ ಸಲುವಾಗಿ ಸ್ಥಳಕ್ಕೆ ಹೋದಾಗ, ಆರೋಪಿಗಳು ಮತ್ತೆ ಬೆದರಿಕೆ ಹಾಕಿದ್ದು, “ಸ್ವತ್ತು ಮಾರಬಾರದು, ಮಾರಿದರೆ ಕೊಲ್ಲುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ. ಇದಲ್ಲದೆ, ಖರೀದಿದಾರರಿಗೆ “ಈ ಸ್ವತ್ತಿನ ಮೇಲೆ ಲೋಕಾಯುಕ್ತದಲ್ಲಿ ಪ್ರಕರಣವಿದ್ದು, ಇದನ್ನು ಖರೀದಿ ಮಾಡಿದರೆ ತೀವ್ರ ಪರಿಣಾಮ ಎದುರಾಗಬಹುದು, ಇಲ್ಲವೇ ನಮಗೆ ಕಮಿಷನ್ ರೂಪದಲ್ಲಿ ಹಣ ನೀಡಬೇಕು” ಎಂಬ ರೀತಿಯಲ್ಲಿ ಬೆದರಿಕೆಯುಡಿಸಿದ್ದಾರೆ.
ಈ ಎಲ್ಲಾ ಹಿನ್ನಲೆಯಲ್ಲಿ ದೂರುದಾರರು ಕಾನೂನು ಸಹಾಯಕ್ಕಾಗಿ ಮಾನ್ಯ ನ್ಯಾಯಾಲಯವನ್ನು ಸಂಪರ್ಕಿಸಿದ್ದು, ಸ್ಥಳೀಯ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ.

