ಸುದ್ದಿ 

ಆರ್.ಟಿ ನಗರದಲ್ಲಿ ಪೀಕ್ ಅವರ್ಸ್ ವೇಳೆ ರಸ್ತೆ ತಡೆ ಮಾಡಿದ ವಾಹನ ಚಾಲಕನ ವಿರುದ್ಧ ಪ್ರಕರಣ ದಾಖಲು

Taluknewsmedia.com

ಬೆಂಗಳೂರು
ನಗರದ ಆರ್.ಟಿ.ನಗರ ಮುಖ್ಯರಸ್ತೆಯಲ್ಲಿ ಪೀಕ್ ಅವರ್ಸ್ ಸಮಯದಲ್ಲಿ ಸಾರ್ವಜನಿಕ ವಾಹನ ಸಂಚಾರಕ್ಕೆ ತೊಂದರೆ ಉಂಟುಮಾಡಿದ ಪ್ರಕರಣದಲ್ಲಿ ಒಬ್ಬ ವಾಹನ ಚಾಲಕನ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.

ದಿನಾಂಕ 16.07.2025 ರಂದು ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿ, ಬೆಳಗ್ಗೆ ಸುಮಾರು 9:42ರ ಸಮಯದಲ್ಲಿ ಆರ್.ಟಿ ನಗರ ಮುಖ್ಯರಸ್ತೆಯ ಕಡಾಯಿ ಹೋಟೆಲ್ ಹತ್ತಿರ ಪೀಕ್ ಅವರ್ಸ್ ವೇಳೆ ಟ್ರಾಫಿಕ್ ವ್ಯತ್ಯಯ ಉಂಟುಮಾಡುತ್ತಿದ್ದ ಗೂಡ್ಸ್ ವಾಹನ (ನಂ. KA-03-AN-2903) ಅನ್ನು ಗಮನಿಸಿದ್ದರು.

ವಾಹನವನ್ನು ಸಾರ್ವಜನಿಕರ ಸಂಚಾರದ ಮಧ್ಯದಲ್ಲಿಯೇ ನಿಲ್ಲಿಸಲಾಗಿದ್ದು, ಇತರೆ ವಾಹನಗಳ ಸುಗಮ ಓಡಾಟಕ್ಕೆ ತೊಂದರೆಯಾಯಿತು. ಪೊಲೀಸರ ವಿಚಾರಣೆಯಲ್ಲಿ ಚಾಲಕನನ್ನು ಶ್ರೀನಿವಾಸ್ ಬಿನ್ ಶಾಮಣ (42 ವರ್ಷ), ಗಂಗಾದರ ಪುರ, ಸೋಮೇಶ್ವರ ಬಡಾವಣೆ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ನಿವಾಸಿಯಾಗಿ ಗುರುತಿಸಲಾಗಿದೆ.

ಈ ಸಂಬಂಧ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Related posts