ಸುದ್ದಿ 

ಬೆಂಗಳೂರು ಅವಿನ್ಯೂ ರಸ್ತೆಯಲ್ಲಿ ಸ್ಕೂಟರ್ ಅಪಘಾತ – ಇಬ್ಬರು ಗಾಯಾಳು

Taluknewsmedia.com

ಬೆಂಗಳೂರು
ನಗರದ ಬಿಬಿ ರಸ್ತೆಯ ಐಸಿರಿ ಹೋಟೆಲ್ ಎದುರು ನಡೆದ ಸ್ಕೂಟರ್ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು, ಅಪಘಾತಕ್ಕೆ ಕಾರಣರಾದ ಮಹಿಳಾ ಸವಾರಿಣಿಯ ವಿರುದ್ಧ ಕಾನೂನು ಕ್ರಮಕ್ಕೆ ಪಿರ್ಯಾದು ದಾಖಲಾಗಿದೆ.

ತಮ್ಮ ಭಾವ ಆರ್.ಬಿ. ನಾಗಾರ್ಜುನ್ ರೆಡ್ಡಿ (36) ಜೊತೆ ಮದುವೆ ಸಂಬಂಧಿತ ವಸ್ತುಗಳಿಗಾಗಿ ಜಕ್ಕೂರುನಿಂದ ಅವಿನ್ಯೂ ರಸ್ತೆಯತ್ತ KA-50-EB-7191 ನಂ. ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಬೆಳಗ್ಗೆ 10:30ರ ಸುಮಾರಿಗೆ, ಐಸಿರಿ ಹೋಟೆಲ್ ಬಳಿ ಸಾಗುತ್ತಿದ್ದಾಗ, ಮುಂದೆ ಬಲಭಾಗದಲ್ಲಿ ಹೋಗುತ್ತಿದ್ದ KA-50-ES-0335 ನಂ. ಸ್ಕೂಟರ್‌ನ ಮಹಿಳಾ ಸವಾರಿಣಿ ಮುನ್ಸೂಚನೆ ನೀಡದೆ ಏಕಾಏಕಿ ಎಡಕ್ಕೆ ತಿರುಗಿದ್ದರಿಂದ ಡಿಕ್ಕಿ ಸಂಭವಿಸಿದೆ.

ಅಪಘಾತದಲ್ಲಿ ಇಬ್ಬರೂ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಮನೋಜ್ ಕುಮಾರ್ ರವರಿಗೆ ಬಲಗೈ ಮತ್ತು ಕಾಲಿಗೆ ಗಾಯವಾಗಿದ್ದು, ನಾಗಾರ್ಜುನ್ ರೆಡ್ಡಿ ಅವರಿಗೆ ಬಲಕಾಲಿಗೆ ಪೆಟ್ಟಾಗಿದೆ. ಸಾರ್ವಜನಿಕರು ಮತ್ತು ಟ್ರಾಫಿಕ್ ಪೊಲೀಸರ ನೆರವಿನಿಂದ ಅವರನ್ನು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಗಾರ್ಜುನ್ ರೆಡ್ಡಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಅಪಘಾತಕ್ಕೆ ಕಾರಣರಾದ ಮಹಿಳಾ ಸವಾರಿಣಿಯ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Related posts