ಸುದ್ದಿ 

ಮರಿಯಣ್ಯನಪಾಳ್ಯದಲ್ಲಿ ಅಪಘಾತ: ತಾಯಿ-ಮಗ ಸವಾರಿಗೆ ಡಿಕ್ಕಿ ಹೊಡೆದ ಕಾರು ಚಾಲಕ ಪರಾರಿಯಾಗಿ ತಲೆಮರೆಸಿಕೊಂಡ ಘಟನೆ

Taluknewsmedia.com

ಬೆಂಗಳೂರು
ನಗರದ ಮರಿಯಣ್ಯನಪಾಳ್ಯ ಪ್ರದೇಶದಲ್ಲಿ ದಿನಾಂಕ 22.07.2025 ರಂದು ಮಧ್ಯಾಹ್ನ ಸುಮಾರು 03:40 ಗಂಟೆಯ ಸಮಯದಲ್ಲಿ ತಾಯಿ ಮತ್ತು ಮಗ ಸವಾರರಾಗಿದ್ದ ಸ್ಕೂಟರ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ.

ಇಫಾತ್ ಫಾತಿಮ್ ಕೊಂ ಮುಶೌದ್ ಉಲಾ ಶರೀಫ್ (44) ರವರು ತಮ್ಮ ಸ್ಕೂಟರ್ (ನಂ. KA-04-KT-3703) ನ ಹಿಂಭಾಗದಲ್ಲಿ ತಮ್ಮ ಮಗ ಫರಾಹ ಅಬ್ದುಲ್ ಶರೀಫ್ ರವರನ್ನು ಕೂರಿಸಿಕೊಂಡು ಕೆನಶ್ರೀ ಶಾಲೆ, ಮರಿಯಣ್ಯನಪಾಳ್ಯ ಹತ್ತಿರ ಸವಾರಿಯಾಗಿದ್ದರು. ಆ ಸಮಯದಲ್ಲಿ KA-01-MN-2752 ಸಂಖ್ಯೆಯ ಕಾರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅವರ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ಪರಿಣಾಮವಾಗಿ ತಾಯಿ ಮತ್ತು ಮಗ ಇಬ್ಬರೂ ರಸ್ತೆ ಮೇಲೆ ಬಿದ್ದು ಗಾಯಗೊಂಡಿದ್ದಾರೆ. ಭುಜ ಮತ್ತು ಮೊಣಕಾಲಿಗೆ ಪೆಟ್ಟಾಗಿದ್ದು, ಮಗನಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಸಾರ್ವಜನಿಕರ ಸಹಾಯದಿಂದ ಆಂಬುಲೆನ್ಸ್ ಮೂಲಕ ಗಾಯಾಳುಗಳನ್ನು ತಕ್ಷಣವೇ ಮಹಾವೀರ ಜೈನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ನಂತರ ಕಾರು ಚಾಲಕ ಸ್ಥಳದಿಂದ ವಾಹನ ಸಮೇತ ಪರಾರಿಯಾಗಿದ್ದಾನೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, KA-01-MN-2752 ವಾಹನದ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಲು ಕ್ರಮ ಕೈಗೊಳ್ಳಲಾಗಿದೆ.

Related posts