ಪರಿಶ್ರಮಿ ವಿದ್ಯಾರ್ಥಿ ನಾಪತ್ತೆ: ಮಗನ ಪತ್ತೆಗೆ ಅತಂಕದಲ್ಲಿ ತಂದೆ-ತಾಯಿ
ನಗರದ ನಿವಾಸಿ ಎ.ಎಲ್. ಚರಣ್ (17 ವರ್ಷ) ಎಂಬ ಯುವಕ ಕಳೆದ ಒಂದು ತಿಂಗಳಿಂದ ನಾಪತ್ತೆಯಾಗಿದ್ದು, ಪೋಷಕರಲ್ಲಿ ತೀವ್ರ ಆತಂಕ ಮತ್ತು ಆಕ್ರೋಶ ಉಂಟಾಗಿದೆ.
ಪೋಷಕರ ಮಾಹಿತಿ ಪ್ರಕಾರ, ಚರಣ್ ದಿನಾಂಕ 16/06/2025 ರಂದು ಮಧ್ಯಾಹ್ನ 2 ಗಂಟೆ ವೇಳೆಗೆ ಮನೆಯ ಹೊರಗಡೆ ತೆರಳಿದ ನಂತರ ವಾಪಸ್ಸು ಬಾರದಿದ್ದಾನೆ. ಪ್ರಾರಂಭದಲ್ಲಿ ಅವರು ಆತನು ಸ್ನೇಹಿತರ ಮನೆಯಲ್ಲಿರಬಹುದು ಎಂಬ ನಂಬಿಕೆಯಲ್ಲಿ ಕಾಯುತ್ತಿದ್ದರು. ಆದರೆ ಹಲವಾರು ಪ್ರಯತ್ನಗಳ ನಂತರವೂ ಯಾವುದೇ ಸಂಪರ್ಕ ಸಾಧ್ಯವಾಗದ ಕಾರಣ, ತಡವಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಚರಣ್ ನೊಂದಿಗೆ ಮೊಬೈಲ್ (ನಂ: 7204313661) ಇದ್ದು, ಮೊದಲಿಗೆ ತನ್ನ ಸಹೋದರಿಯ ಜತೆ ಸಂಪರ್ಕದಲ್ಲಿದ್ದ. ಆದರೆ ಕೆಲವೇ ಸಮಯದ ನಂತರ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ನಂತರದಿಂದ ಸಂಪರ್ಕ ಕಡಿದಿದೆ. ಕುಟುಂಬದವರು ಆತನು ಹತ್ತಿರದ ಸಂಬಂಧಿಗಳ ಮನೆ, ಸ್ನೇಹಿತರು ಮತ್ತು ಚರಚಿತ ಸ್ಥಳಗಳಲ್ಲಿ ಹುಡುಕಿದರೂ ಯಾವುದೇ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.
ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದು, ಹುಡುಕಾಟ ಆರಂಭಿಸಲಾಗಿದೆ. ಚರಣ್ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಜನತೆ ಪೊಲೀಸ್ ಠಾಣೆಗೆ ಸಂಪರ್ಕಿಸಲು ಮನವಿ ಮಾಡಲಾಗಿದೆ.

