ಹೆಬ್ಬಾಳ ರಿಂಗ್ ರಸ್ತೆಯಲ್ಲಿ ಎರಡು ವಾಹನಗಳ ನಡುವೆ ಅಪಘಾತ – ವಾಹನ ನಷ್ಟ, ಯಾರಿಗೂ ಗಾಯಗಳಿಲ್ಲ
ನಗರದ ಹೆಬ್ಬಾಳ ರಿಂಗ್ ರಸ್ತೆಯಲ್ಲಿ (27.07.2025) ರಾತ್ರಿ ಸುಮಾರು 10.50 ಗಂಟೆಯ ವೇಳೆಗೆ ಎರಡು ವಾಹನಗಳ ನಡುವೆ ಸಂಭವಿಸಿದ ಅಪಘಾತದಿಂದ ಕಾರುಗೆ ಹಾನಿಯಾದರೂ, ಯಾರಿಗೂ ಪ್ರಾಣಾಪಾಯವಾಗಿಲ್ಲ.
ತಮ್ಮ ಕಾರು ನಂ. KA-01-MH-5510 ಅನ್ನು ನಾಗವಾರ ಕಡೆಯಿಂದ ಏರ್‌ಪೋರ್ಟ್ ದಾರಿಗೆ ತೆರಳುತ್ತಿದ್ದ ವೇಳೆ, ವೆಂಕಟಂ ಕೇಫೆ ಹತ್ತಿರ ವಿರುದ್ಧ ದಿಕ್ಕಿನಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಸಂಚರಿಸುತ್ತಿದ್ದ KA-04-AB-8535 ನಂ. ಗೂಡ್ಸ್ ವಾಹನವು ರಸ್ತೆಯಲ್ಲಿನ ಬ್ಯಾರಿಕೇಡ್ಗೆ ಡಿಕ್ಕಿಯಾಗಿ, ನಂತರ ಕಾರಿಗೆ ಡಿಕ್ಕಿ ಹೊಡೆದಿದೆ.
ಈ ಅಪಘಾತದ ಪರಿಣಾಮವಾಗಿ ಕಾರಿನ ಬಲಭಾಗದ ಹೆಡ್ಲೈಟ್, ಚಾಸಿ, ಫೆಂಡರ್, ಡೋರ್ ಮತ್ತು ಇಂಜಿನ್ ಭಾಗಗಳಲ್ಲಿ ಗಂಭೀರ ಹಾನಿ ಸಂಭವಿಸಿದೆ. ಆದಾಗ್ಯೂ ಅಪಘಾತದಲ್ಲಿ ಯಾವುದೇ ವ್ಯಕ್ತಿಗೆ ಗಾಯವಾಗಿಲ್ಲ ಎನ್ನಲಾಗಿದೆ.
ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಮುಂದುವರೆದಿದೆ.

