ಸುದ್ದಿ 

ಸ್ನೇಹಿತನಿಗೆ ಸಾಲವಾಗಿ ಕೊಟ್ಟ ಹಣ ವಾಪಸಿಲ್ಲ – ಕೇಳಿದಂತೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ, ಜೀವ ಬೆದರಿಕೆ!

Taluknewsmedia.com

ಆನೇಕಲ್, ಜುಲೈ 27:
ಸ್ನೇಹಿತನಿಗೆ ಮಾನವೀಯತೆ ನೆಪದಲ್ಲಿ ಸಾಲವಾಗಿ ಕೊಟ್ಟ ಹಣವನ್ನು ವಾಪಸೆಗೆ ಕೇಳಿದ ಪರಿಣಾಮ, ಆರೋಪಿಗಳು ಹಣ ಕೊಡುವ ಬದಲು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದು, ಪ್ರಾಣಬೆದರಿಕೆ ಹಾಕಿದ ಘಟನೆ ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಲೋಕೇಶ್ ಎಂಬವರು ದಿನಾಂಕ 27-07-2025 ರಂದು ಪೊಲೀಸರಿಗೆ ನೀಡಿದ ದೂರಿನಲ್ಲಿ, “ನನ್ನ ಸ್ನೇಹಿತ ಕರಿಯಲಪ್ಪ ನನ್ನಿಂದ ರೂ. 1,16,000/- ಅನ್ನು ಸಾಲವಾಗಿ ಪಡೆದು, ಕೆಲ ದಿನಗಳಲ್ಲಿ ಹಿಂತಿರುಗಿಸುತ್ತೇನೆಂದು ಭರವಸೆ ನೀಡಿದ್ದನು. ಬಳಿಕ ಚೆಕ್ (ಚೆಕ್ ನಂ. 054816) ನೀಡಿ ಹಣ ಕೊಡಲಿಲ್ಲ. ಮತ್ತೆ ನಾನು ಕೇಳಿದಾಗ ಹಲವು ದಿನಗಳಿಂದ ಹಣ ತಳ್ಳುತ್ತಿದ್ದನು. ಕೊನೆಗೆ ದಿನಾಂಕ 25-07-2025 ರಂದು ಜಿಗಣಿ ಕಡೆಯಿಂದ ಕರೆಸಿಕೊಂಡು, ಸಿಡಿಹೊಸಕೋಟಿ ರಸ್ತೆಯಲ್ಲಿರುವ ಒಂದು ಖಾಲಿ ಪ್ರದೇಶಕ್ಕೆ ಕರೆಯಲು ಮಾಡಿದರು” ಎಂದು ತಿಳಿಸಿದ್ದಾರೆ.

ಅಲ್ಲಿ ಕರಿಯಲಪ್ಪ ಜೊತೆಗಿದ್ದ ಮತ್ತೊಬ್ಬ ವ್ಯಕ್ತಿ ನಾರಾಯಣಸ್ವಾಮಿ, ಮರಸೂರು ನಿವಾಸಿ, ಹಣದ ವಿಚಾರವಾಗಿ ಅವರರೊಂದಿಗೆ ವಾಗ್ವಾದ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದನು. ಆ ಬಳಿಕ ಎಲೆ ಇದ್ದ ಹೇಟ್ ಅನ್ನು ತೆಗೆದುಕೊಂಡು ಹೊಡೆಯಲು ಯತ್ನಿಸಿದಾಗ ಶ್ರೀ ಲೋಕೇಶ್ ರವರ ಕಿವಿಗೆ ಬಡಿದು ಗಾಯವಾಗಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ಇಬ್ಬರು ಸೇರಿ “ನಿನ್ನನ್ನು ಬಿಟ್ಟು ಬಿಡುವುದಿಲ್ಲ, ಕೊಂದು ಹಾಕುತ್ತೇವೆ” ಎಂದು ಬೆದರಿಸಿದ್ದರೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆನೇಕಲ್ ಪೊಲೀಸ್ ಠಾಣೆಯಲ್ಲಿ IPC ಸೆಕ್ಷನ್‌ಗಳು 420 (ವಂಚನೆ), 323 (ಹಲ್ಲೆ), 504 (ಅವಾಚ್ಯ ಶಬ್ದಗಳಿಂದ ನಿಂದನೆ) ಮತ್ತು 506 (ಜೀವ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ ತನಿಖೆ ಆರಂಭಿಸಲಾಗಿದೆ.

ಆನೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಂದನೆಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Related posts