ಅಂಗಡಿಯ ಶಟರ್ ಮುರಿದು ₹82,000 ನಗದು ಹಾಗೂ ವಸ್ತುಗಳ ಕಳವು
ನಗರದ ವ್ಯಾಪ್ತಿಯಲ್ಲಿ ಮತ್ತೊಂದು ಕಳ್ಳತನದ ಘಟನೆ ಬೆಳಕಿಗೆ ಬಂದಿದೆ. ಜನ ಔಷಧಿ ಅಂಗಡಿಗೆ ಸಂಬಂಧಪಟ್ಟ ಈ ಘಟನೆ ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದ್ದು, ಅಂಗಡಿಯಲ್ಲಿ ಶಟರ್ ಮುರಿದು ಒಳ ನುಗ್ಗಿದ ಅಪರಿಚಿತ ಕಳ್ಳರು, ಗಲ್ಲಾ ಪೆಟ್ಟಿಗೆಯಲ್ಲಿದ್ದ ಸುಮಾರು ₹82,000 ನಗದು ಹಾಗೂ ಇತರ ವಸ್ತುಗಳನ್ನು ಕಳವು ಮಾಡಿದ್ದಾರೆ.
ಶ್ರೀ ಶೈಲಕುಮಾರ್ ಅವರು ತಮ್ಮ ಅಂಗಡಿಯನ್ನು ದಿನಾಂಕ 26/07/2025 ರಂದು ರಾತ್ರಿ ಸುಮಾರು 09:30ರ ಹೊತ್ತಿಗೆ ಮುಚ್ಚಿ ಮನೆಗೆ ತೆರಳಿದ್ದರು. ದಿನಾಂಕ 27/07/2025 ರಂದು ಬೆಳಿಗ್ಗೆ 09:00ರ ವೇಳೆಗೆ ಅಂಗಡಿ ತೆರೆಯಲು ಬಂದಾಗ ಶಟರ್ ಮುರಿದ ಸ್ಥಿತಿಯಲ್ಲಿ ಕಂಡುಬಂದಿತು. ಶಂಕಿತ ಸ್ಥಿತಿಯಲ್ಲಿ ಅಂಗಡಿಯ ಒಳಗೆ ಪ್ರವೇಶಿಸಿದ ಶ್ರೀಶೈಲ ಕುಮಾರ್ ಅವರ, ಗಲ್ಲಾ ಪೆಟ್ಟಿಗೆಯ ಹಣ ಮತ್ತು ಕೆಲವು ವಸ್ತುಗಳು ಕಳುವಾಗಿರುವುದನ್ನು ಗಮನಿಸಿದರು.
ತಕ್ಷಣವೇ ಅವರು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ಕಾಮೆರಾ ದೃಶ್ಯಾವಳಿ ಹಾಗೂ ಸುತ್ತಮುತ್ತಲಿನ ಮಾಹಿತಿಯ ಆಧಾರದ ಮೇಲೆ ಕಳ್ಳರ ಗುರುತು ಪತ್ತೆಹಚ್ಚಲು ಕಾರ್ಯಾರಂಭಿಸಲಾಗಿದೆ.
ಸ್ಥಳೀಯ ವ್ಯಾಪಾರಿಗಳು ಈ ಪ್ರಕರಣದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಪೊಲೀಸ್ ಇಲಾಖೆಯು ಪಟುತನದಿಂದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

