ಒಂದೇ ಚಕ್ರದ ಮೇಲೆ ಬೈಕ್ ಓಡಿಸಿದ ಯುವಕನ ವಿರುದ್ಧ ಪ್ರಕರಣ
ಯಲಹಂಕ, ಜುಲೈ 28:2025
ಯಲಹಂಕ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಅನ್ನು ಒಂದೇ ಚಕ್ರದ ಮೇಲೆ ಅತಿವೇಗವಾಗಿ ಹಾಗೂ ಅಜಾಗರೂಕತೆಯಿಂದ ಓಡಿಸುತ್ತಿದ್ದ 25 ವರ್ಷದ ಸಮೀರ್ ಎಂಬ ಯುವಕನನ್ನು ಪೊಲೀಸರು ಹಿಡಿದಿದ್ದಾರೆ.
ದಿನಾಂಕ 27-07-2025 ರಂದು ಬೆಳಿಗ್ಗೆ 10:20ರ ಸಮಯದಲ್ಲಿ ಮುಖ್ಯರಸ್ತೆಯಲ್ಲಿ ಸಾರ್ವಜನಿಕರಿಗೆ ಅಪಾಯವಾಗುವ ರೀತಿಯಲ್ಲಿ ಬೈಕ್ ಓಡಿಸುತ್ತಿರುವುದನ್ನು ಗಮನಿಸಿದ ಪೊಲೀಸರು, ಆತನನ್ನು ತಡೆಯುತ್ತಿದ್ದಾರೆ. ಸಮೀರ್ ಯಲಹಂಕದ ವಿನಾಯಕನಗರ ನಿವಾಸಿಯಾಗಿದ್ದಾನೆ.
ಆತನ ವಿರುದ್ಧ ಸರಿಯಾದ ಕಾನೂನು ಕ್ರಮ ಕೈಗೊಳ್ಳಲಾಗಿದೆ.

