ಜೇಬಿನಿಂದ ಐಫೋನ್ ಕಳವು: ₹1.4 ಲಕ್ಷ ಬೆಲೆಯ ಮೊಬೈಲ್ ಕಳ್ಳತನ
ಬೆಂಗಳೂರು, ಜುಲೈ 28:2025
ಯಲಹಂಕ ಉಪನಗರದ ಡೈರಿ ಸರ್ಕಲ್ ಬಳಿ ನಡೆದ ಘಟನೆಕೆಯಲ್ಲಿ, ಉದ್ಯೋಗಿಯಾಗಿರುವ ರಾಘವೇಂದ್ರ ಎಂಬವರು ತಮ್ಮ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಅವರ ಜೇಬಿನಲ್ಲಿದ್ದ ₹1.4 ಲಕ್ಷ ಮೌಲ್ಯದ ಐಫೋನ್ 16 ಮಾದರಿಯ ಮೊಬೈಲ್ ಫೋನ್ ಕಳ್ಳತನವಾಗಿದೆ.
ಮಾಲೀಕನ ಪ್ರಕಾರ, ಫೋನಿನಲ್ಲಿ ಎರಡು ಸಿಮ್‌ಗಳು ಮತ್ತು ಒಂದು ಇ-ಸಿಮ್ ಅಳವಡಿಸಲಾಗಿತ್ತು. ಘಟನೆ ಸಂಬಂಧಿತವಾಗಿ ಯಲಹಂಕ ಉಪನಗರ ಠಾಣೆಗೆ ದೂರು ನೀಡಿದ್ದು, ಪೊಲೀಸರು ಕಳ್ಳನ ಪತ್ತೆ ಹಚ್ಚಲು ತನಿಖೆ ಪ್ರಾರಂಭಿಸಿದ್ದಾರೆ.
ಪೀಡಿತರು ತಮ್ಮ ಮೊಬೈಲ್ ವಾಪಸ್ ದೊರಕಲಿ ಮತ್ತು ಕಳ್ಳನ ಮೇಲೆ ಕಾನೂನು ಕ್ರಮ ಕೈಗೊಳ್ಳಲೆಂದು ಬೇಡಿಕೆ ಇಟ್ಟಿದ್ದಾರೆ.

