ಸುದ್ದಿ 

ಚಿನ್ನಾಭರಣ ಕಳವು: ಮನೆಗೆ ಬೀಗ ಹಾಕಿದ ವೇಳೆ ಕಳ್ಳತನ

Taluknewsmedia.com

ಬೆಂಗಳೂರು, ಜುಲೈ 30, 2025:

ಬೆಂಗಳೂರು ನಗರ ಯಲಹಂಕ ಓಲ್ಡ್ ಟೌನ್ ವ್ಯಾಪ್ತಿಯ ಸಿಂಗನಾಯಕನಹಳ್ಳಿಯಲ್ಲಿ ಮನೆಯ ಬಾಗಿಲು ಬೀಗ ಮುರಿದು ನಡೆದಿರುವ ಚಿನ್ನಾಭರಣ ಮತ್ತು ನಗದು ಕಳ್ಳತನ ಪ್ರಕರಣವನ್ನು ರಾಜನಕುಂಟೆ ಪೊಲೀಸರು ದಾಖಲಿಸಿದ್ದಾರೆ.

ಆಕ್ಸಿಸ್ ಬ್ಯಾಂಕ್‌ನಲ್ಲಿ ಶಾಖಾ ನಿರ್ವಾಹಕರಾಗಿರುವ ದೂರುದಾರರು 25ನೇ ತಾರಿಖು ಸಂಜೆ 6 ಗಂಟೆ ಸುಮಾರಿಗೆ ತಮ್ಮ ಹೆಂಡತಿ ಹಾಗೂ ಮಗುವಿನೊಂದಿಗೆ ತಮ್ಮ ಸ್ವಂತ ಊರಿಗೆ ತೆರಳಿದ್ದರು. ಅವರು ತೆರಳುವ ಮುನ್ನ ಬಾಡಿಗೆ ಮನೆಯ ಬಾಗಿಲಿಗೆ ಬೀಗ ಹಾಕಿದ್ದರು.

ಮರುದಿನ 28ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಅವರು ಮನೆಗೆ ಮರಳಿದಾಗ, ಬಾಗಿಲು ತೆರೆದಿದ್ದು, ಒಳಗೆ ಪರಿಶೀಲಿಸಿದಾಗ ಹಿಂಬಾಗದ ಡೋರ್ ಲಾಕ್ ಬೆಂಡಾಗಿದ್ದು, ಬೆಡ್ ರೂಮ್‌ನಲ್ಲಿನ ಬೀರುವಿನ ಲಾಕರ್ ಮುರಿಯಲ್ಪಟ್ಟಿತ್ತು. ಲಾಕರ್‌ನೊಳಗೆ ಇಡಲಾಗಿದ್ದ ಸುಮಾರು 18 ಗ್ರಾಂ ಚಿನ್ನದ ಸರ, 7 ಗ್ರಾಂ ಚಿನ್ನದ ಓಲೆ, ಮಗುವಿನ ಉಡದಾರ, ಚೈನು, ಕೈ/ಕಾಲು ಬಳೆಗಳು ಹಾಗೂ ನಗದು ಹಣ ಕಳವಾಗಿದ್ದವು.

ಕಳ್ಳರು ಮನೆಯ ಲಾಕ್ ಮೀಟು ಒಳಗೆ ಪ್ರವೇಶಿಸಿ ಎಲ್ಲಾ ವಸ್ತುಗಳನ್ನು ಚೆಲ್ಲಾಪಿಲ್ಲೆ ಮಾಡಿಕೊಂಡು ಕಳವು ನಡೆಸಿರುವ ಶಂಕೆಯಿದೆ.

ಈ ಸಂಬಂಧ ರಾಜನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 218/2025 ಕಾನೂನು ಸೆಕ್ಷನ್ 331(1), 331(2), ಮತ್ತು 305 BNS ಅಡಿಯಲ್ಲಿ ದಾಖಲಿಸಲಾಗಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಕಳ್ಳರನ್ನು ಶೀಘ್ರದಲ್ಲಿಯೇ ಪತ್ತೆಹಚ್ಚುವಲ್ಲಿ ನಿರೀಕ್ಷೆಯು ವ್ಯಕ್ತವಾಗಿದೆ.

Related posts