ಸುದ್ದಿ 

ಆಸ್ತಿ ಪ್ರಕರಣದಲ್ಲಿ ಹಲ್ಲೆ: ನ್ಯಾಯಾಲಯ ಆದೇಶದ ಬಳಿಕ ತೀವ್ರ ವಾಗ್ಮಿತೆ

Taluknewsmedia.com

ಬೆಂಗಳೂರು, ಜುಲೈ 30, 2025:
ನಗರದ ಮಾನ್ಯ ಪೊಲೀಸ್ ಮೇಲಾಧಿಕಾರಿಗಳ ಕಚೇರಿಗೆ ಸಲ್ಲಿಸಲಾದ ಅರ್ಜಿಯ ಆಧಾರದ ಮೇಲೆ, ಶ್ರೀ ಜಯಪ್ರಕಾಶ್, ಸೌಮ್ಮ, ಮತ್ತು ವಿಷ್ಣು ವೈಷ್ಣವ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಶಿವು ವಿ ಆರ್ ಅವರು ನೀಡಿದ ಮಾಹಿತಿಯಂತೆ, ಈ ಮೂವರು ಸಂಬಂಧಿತ ಖಾತೆ ಸಂಖ್ಯೆಯ ಮೂಲಕ ಲಕ್ಷಾಂತರ ರೂಪಾಯಿಗಳ ಆಸ್ತಿ ವ್ಯವಹಾರ ನಡೆಸಿದ್ದು, ಇದನ್ನು ಸಂಬಂಧಪಟ್ಟ ನ್ಯಾಯಾಲಯವು ಪರಿಶೀಲಿಸಿ, ಅಂತಿಮ ಆದೇಶವನ್ನು 27 ಜೂನ್ 2025 ರಂದು ಹೊರಡಿಸಿತ್ತು.

ನ್ಯಾಯಾಲಯದ ಆದೇಶದಂತೆ, ಯಲಹಂಕ ಪೊಲೀಸ್ ಸಹಾಯದಿಂದ ವಿವಾದಿತ ಆಸ್ತಿ ವಶಪಡಿಸಿಕೊಳ್ಳಲಾಯಿತು. ಆದರೆ, 5 ಜುಲೈ 2025 ರಂದು ಬೆಳಗ್ಗೆ 11 ಗಂಟೆಗೆ, ಜಯಪ್ರಕಾಶ್, ವೆಂಕಟಪ್ಪ, ರತ್ನಮ್ಮ, ಸೌಮ್ಮ ಮತ್ತು ವಿಷ್ಣು ವೈಷ್ಣವ್ ಆಸ್ತಿಗೆ ಬಂದು, ಸೆಕ್ಯುರಿಟಿ ಗಾರ್ಡ್ನ ಮೇಲೆ ಹಲ್ಲೆ ನಡೆಸಿದ್ದು, ಅವಾಚ್ಯ ಶಬ್ದಗಳಿಂದ ಬೈದು, ದೂರುದಾರರಿಗೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ, ದೂರುದಾರರು ನ್ಯಾಯಕ್ಕಾಗಿ ಹೋರಾಟ ಮುಂದುವರೆಸಿದ್ದು ಯಲಹಂಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಆರಂಭಿಸಿದ್ದಾರೆ.

Related posts