ಸುದ್ದಿ 

ಫೇಕ್ ಫೋಟೋ ಆಧಾರವಾಗಿ ಬೆದರಿಕೆ – 60 ಲಕ್ಷ ರೂಪಾಯಿ ವಂಚನೆ ಪ್ರಕರಣ ದಾಖಲಾದ್ಮೆ

Taluknewsmedia.com

ಬೆಂಗಳೂರು, ಜುಲೈ 30:
ಯುವಕನ ಮಾರ್ಪಡ್ (Morpped) ಫೋಟೋವನ್ನು ಇನ್‌ಸ್ಟಾಗ್ರಾಂ ಮೂಲಕ ಹರಡಿ, ಅವರ ಪೋಷಕರನ್ನು ಬೆದರಿಸಿ ಸುಮಾರು 60 ಲಕ್ಷ ರೂಪಾಯಿ ವಂಚಿಸಿದ ಗಂಭೀರ ಪ್ರಕರಣ ಬೆಂಗಳೂರಿನ ಯಲಹಂಕ ಉಪನಗರ ಠಾಣೆಯಲ್ಲಿ ದಾಖಲಾಗಿದೆ.

ಲವಿಕ್‌ ಅವರ ಸ್ನೇಹಿತ ದೇವರಾಜ್ ಮೂಲಕ, ಚಿನ್ಮಯ್ ಎಂಬಾತನು ಲವಿಕ್‌ನ ಮಾರ್ಪಡ್ ಫೋಟೋವನ್ನು ಇನ್‌ಸ್ಟಾಗ್ರಾಂ ಖಾತೆಗೆ ಕಳುಹಿಸಿದ್ದಾನೆ. ಈ ಕುರಿತು ಸ್ಪಷ್ಟನೆ ಪಡೆಯಲು ಪಿರ್ಯಾದಿದಾರರು ಚಿನ್ಮಯ್‌ನ್ನು ವಿಚಾರಿಸಿದಾಗ, ಚಿನ್ಮಯ್‌ನ ಅಣ್ಣ ಜಗದೀಶ್ ಮತ್ತು ದೇವರಾಜ್‌ ಅವರು ಪಿರ್ಯಾದಿದಾರರ ಮೇಲೆ ಬಲ ಹಾಕಿ ಹಲವಾರು ಬಾರಿ ಮಾತುಕತೆ ನಡೆಸಿದರೆಂದು ದೂರಿನಲ್ಲಿ ತಿಳಿಸಲಾಗಿದೆ.

ಜಗದೀಶ್‌ ಅವರು ವಕೀಲರ ಮೂಲಕ ಪ್ರಕರಣ ಬಗೆಹರಿಸಿಕೊಡುತ್ತೇನೆ ಎಂದು ಹೇಳಿ, 20 ಲಕ್ಷ ರೂ. ವಕೀಲರ ಪೀಸಾಗಿ ಕೇಳಿದ್ದಾರೆ. ಬಳಿಕ ಫೋಟೋ ಪ್ರಕರಣವನ್ನು NDPS (ಮಾದಕ ವಸ್ತು ನಿರೋಧಕ ಕಾಯಿದೆ) ಪ್ರಕರಣವನ್ನಾಗಿ ಬದಲಾಯಿಸುವುದಾಗಿ ಬೆದರಿಸಿ, “ನಿನ್ನ ಮಗನನ್ನು ಜೈಲಿಗೆ ಕಳುಹಿಸುತ್ತೇನೆ” ಎಂಬ ಭೀತಿಯ ಮೂಲಕ ಹರೀಶ್‌ ಎಂಬ ವ್ಯಕ್ತಿಯ ಸಹಕಾರದಿಂದ ಇನ್ನಷ್ಟು ಹಣ ಬೇಡಿಕೆ ಹಾಕಿದ್ದಾರೆ.

ಹೀಗೆ ಫೆಬ್ರವರಿ, ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಹಲವು ಮೊಬೈಲ್ ಸಂಖ್ಯೆಗಳ ಮೂಲಕ ಕರೆ ಮಾಡಿ ಹಣಕ್ಕಾಗಿ ತೊಂದರೆ ನೀಡಲಾಗಿದ್ದು, ಒಟ್ಟು 60 ಲಕ್ಷ ರೂಪಾಯಿ ಹಣ ವಸೂಲಾಗಿ ಮೋಸ ಮಾಡಲಾಗಿದೆ ಎಂಬುದು ದೂರಿನ ಆಶಯ.

ಅಲ್ಲದೆ, ಜಗದೀಶ್‌ ನು ವಾರುವಾರು ಪಿರ್ಯಾದಿದಾರರ ಮನೆಗೆ ಬಂದು ಅವರ ಮಗನಿಗೆ ಹಲ್ಲೆ ನಡೆಸಿ, ತೀವ್ರ ಬೆದರಿಕೆ ನೀಡಿದ್ದಾನೆ ಎನ್ನಲಾಗಿದೆ.
ಯಲಹಂಕ ಉಪನಗರ ಪೋಲಿಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ತನಿಖೆ ಆರಂಭಿಸಿದ್ದಾರೆ.

Related posts