ಸುದ್ದಿ 

ಹೆಬ್ಬಾಳ ಪ್ರೈಓವರ್‌ನಲ್ಲಿ ಲಾರಿ ನಿಲ್ಲಿಸಿದ ಚಾಲಕನ ವಿರುದ್ಧ ಕ್ರಮ

Taluknewsmedia.com

ಬೆಂಗಳೂರು, ಜುಲೈ 29:
ನಗರದ ಹೆಬ್ಬಾಳ ಪ್ರದೇಶದ ಪ್ರೈಓವರ್ ಮೇಲೆ ಈ ಬೆಳಗ್ಗೆ ಸಂಚಾರಕ್ಕೆ ಅಡಚಣೆ ಉಂಟುಮಾಡಿದ ಲಾರಿ ಚಾಲಕನ ವಿರುದ್ಧ ಪೊಲೀಸರು ಕ್ರಮ ಜರುಗಿಸಿದ್ದಾರೆ.

ದಿನಾಂಕ 28.07.2025 ರಂದು ಬೆಳಗ್ಗೆ 7.00 ಗಂಟೆಯ ವೇಳೆಗೆ, ಕೋಬ್ರಾ ಕರ್ತವ್ಯದಲ್ಲಿ ಗಸ್ತು ಮಾಡುತ್ತಿದ್ದ ಠಾಣಾ ಸಿಬ್ಬಂದಿ ಹೆಬ್ಬಾಳ ಪ್ರೈಓವರ್ ಕಡೆಗೆ ಸಾಗುತ್ತಿದ್ದ ಸಂದರ್ಭ, ಲಾರಿ ವಾಹನ ಸಂಖ್ಯೆ HR-55-AG-1073 ಅನ್ನು ಮಧ್ಯ ರಸ್ತೆಯಲ್ಲಿ ನಿಲ್ಲಿಸಲಾಗಿದ್ದು, ಇದರಿಂದ ವಾಹನಗಳ ಸಂಚಾರಕ್ಕೂ ಹಾಗೂ ಸಾರ್ವಜನಿಕರ ಓಡಾಟಕ್ಕೂ ತೀವ್ರ ತೊಂದರೆಯುಂಟಾಗಿತ್ತು.

ಘಟನಾ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ಲಾರಿ ಚಾಲಕನನ್ನು ವಿಚಾರಿಸಿದಾಗ, ತನ್ನ ಹೆಸರು ತಾಹೀರ್ ಬಿನ್ ಜಲೇಬ್ ಖಾನ್ (34) ಎಂದು ತಿಳಿಸಿದ್ದು, ಹರಿಯಾಣದ ಪಾಲ್ಮಾಲ್ ಜಿಲ್ಲೆಯ ರಾಮಗಂಜ್ ಬಜಾರ್ ನ ನಿವಾಸಿಯಾಗಿದ್ದಾನೆ.

ಚಾಲಕನ ವರ್ತನೆಯಿಂದ ಸಾರ್ವಜನಿಕರಿಗೆ ತೊಂದರೆ ಉಂಟಾದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳದಲ್ಲಿಯೇ ಲಾರಿಗೆ ದಂಡ ವಿಧಿಸಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ಚಾಲಕನ ವಿರುದ್ಧ ದೂರು ದಾಖಲಿಸಲಾಗಿದೆ.

Related posts