ಸುದ್ದಿ 

ಮದುವೆ ರದ್ದಾದ ನಿರಾಶೆಯಲ್ಲಿ ಯುವತಿ ಕಾಣೆಯಾದ ಪ್ರಕರಣ

Taluknewsmedia.com

ಆನೇಕಲ್, ಜುಲೈ 30:
ಮದುವೆ ರದ್ದಾದ ಘಟನೆಗೆ ಮನನೊಂದು ಯುವತಿ ಮನೆ ಬಿಟ್ಟು ಕಾಣೆಯಾಗಿರುವ ಘಟನೆ ಆನೇಕಲ್ ಟೌನ್‌ನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಆನೇಕಲ್ ಟೌನ್‌ ಪೊಲೀಸ್ ಠಾಣೆಯಲ್ಲಿ ಪತ್ತೆಹಚ್ಚುವಿಕೆಗೆ ದೂರು ದಾಖಲಾಗಿದೆ.

ಕೆ.ಎಸ್.ಆರ್.ಟಿ.ಸಿ ಕಾಲೋನಿಯ ಸ್ವಪ್ನ ಮಾರ್ಕೆಟ್ ಬಳಿಯ ನಿವಾಸಿಯಾದ ಮಹದೇವ ಬಿನ್ ನಾಗರಾಜು ಅವರು ನೀಡಿದ ದೂರಿನ ಪ್ರಕಾರ, ತನ್ನ ಅಕ್ಕ ಮಹಾದೇವಿ (ವಯಸ್ಸು: 29) ಕಳೆದ ನಾಲ್ಕು ತಿಂಗಳ ಹಿಂದೆ ತಮ್ಮ ಪೋಷಕರ ಸಮ್ಮುಖದಲ್ಲಿ ಆನೇಕಲ್ ನಿವಾಸಿಯೊಬ್ಬರೊಂದಿಗೆ ನಿಶ್ಚಿತಾರ್ಥಗೊಂಡಿದ್ದರು. ಆದರೆ ಹಲವಾರು ಕಾರಣಗಳಿಂದಾಗಿ ದಿನಾಂಕ 25-07-2025 ರಂದು ಮದುವೆ ರದ್ದಾಗಿತ್ತು. ಈ ವಿಚಾರದಿಂದ ಮಾನಸಿಕವಾಗಿ ಬೇಸತ್ತಿದ್ದ ಅವರು 27-07-2025 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಮನೆಯವರಿಲ್ಲದ ಸಮಯದಲ್ಲಿ ತನ್ನ ಬಟ್ಟೆಗಳನ್ನು ಬ್ಯಾಗಿನಲ್ಲಿ ಹಾಕಿಕೊಂಡು, ಮನೆ ಬಿಟ್ಟು ಹೊರಟಿದ್ದಾರೆ.

ಆಕೆ ಕೆಎ-51 ಹೆಚ್ ಕೆ-8915 ಸಂಖ್ಯೆಯ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೋಗಿದ್ದು, ಒಂದು ಹಾಳೆಯಲ್ಲಿ ಬರೆದಿಟ್ಟು ಪುಸ್ತಕದಲ್ಲಿ ಯಾರಿಗೆ ಎಷ್ಟು ಹಣ ಕೊಡಬೇಕೆಂಬ ವಿವರಗಳನ್ನು ಬರೆದು ಬಿಟ್ಟುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಂಜೆ ಮನೆಗೆ ವಾಪಸ್ಸಾದ ಅಣ್ಣನಿಗೆ ಈ ಬಗ್ಗೆ ಮಾಹಿತಿ ಲಭಿಸಿದ್ದು, ತಕ್ಷಣವೇ ಹುಡುಕಾಟ ಆರಂಭಿಸಿದರೂ ಅವರು ಪತ್ತೆಯಾಗಿಲ್ಲ.

ಕಾಣೆಯಾದ ಮಹಾದೇವಿಯ ವಿವರಣೆ: ಎತ್ತರ ಸುಮಾರು 4.7 ರಿಂದ 4.8 ಅಡಿ, ಗುಂಡುಮುಖ, ತೆಳ್ಳನೆಯ ಶರೀರ, ಗೋಧಿ ಮೈಬಣ್ಣ, ಬಲ ಕಿವಿಗೆ ಆಪರೇಷನ್ ಆಗಿದ್ದು, ತಲೆಗೆ ದುಪ್ಪಟ್ಟ ಕಟ್ಟುತ್ತಿದ್ದಳು. ಎಡ ಕೈ ಮೇಲ್ಭಾಗದಲ್ಲಿ ಇಂಗ್ಲಿಷ್‌ನಲ್ಲಿ ‘G M’ ಎಂಬ ಟ್ಯಾಟೂ ಇದೆ. ತಲೆದಿಂಬಾಗಿ ಜೀನ್ಸ್ ಪ್ಯಾಂಟ್ ಹಾಗೂ ಟೀ ಶರ್ಟ್ ಧರಿಸಿಕೊಂಡಿದ್ದರು. ಕನ್ನಡ ಭಾಷೆಯಲ್ಲಿ ಮಾತನಾಡುತ್ತಾರೆ.

ಮಹದೇವಿ ಈವರೆಗೆ ಪತ್ತೆಯಾಗದ ಹಿನ್ನೆಲೆ ಕುಟುಂಬಸ್ಥರು ಆತಂಕದಲ್ಲಿ ಇದ್ದು, ಸಾರ್ವಜನಿಕರು ಯಾರಾದರೂ ಈಕೆ ಬಗ್ಗೆ ಮಾಹಿತಿ ಹೊಂದಿದ್ದರೆ 9900849176 ಎಂಬ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಲು ಅಥವಾ ಆನೇಕಲ್ ಟೌನ್‌ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಕೋರಿದ್ದಾರೆ.

Related posts