ಸುದ್ದಿ 

ಮಟನ್ ಅಂಗಡಿಗೆ ಕಳ್ಳರು ನುಗ್ಗಿ ₹20,000 ನಗದು ಹಾಗೂ ಸ್ಟವ್ ಕಳ್ಳತನ

Taluknewsmedia.com

ಆನೇಕಲ್, ಜುಲೈ 31:
ಆನೇಕಲ್ ಚಂದಾಪುರ ಮುಖ್ಯರಸ್ತೆಯ ಜೈಭೀಮ್ ಪೆಟ್ರೋಲ್ ಬಂಕ್ ಪಕ್ಕದಲ್ಲಿರುವ ಮಟನ್ ಅಂಗಡಿಗೆ ಕಳ್ಳರು ನುಗ್ಗಿ ₹20,000 ನಗದು ಹಾಗೂ ಒಂದು ಗ್ಯಾಸ್ ಸ್ಟವ್ ಸ್ಟವ್ ಅನ್ನು ಕದ್ದಿಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.

ಅಂಗಡಿಯ ಮಾಲೀಕರಾದ ಕೆ. ಸಾದೀಕ್ ಪಾಷ್ ಅವರು ದಿನಾಂಕ 31/07/2025 ರಂದು ಬೆಳಿಗ್ಗೆ 11 ಗಂಟೆಗೆ ಠಾಣೆಗೆ ಹಾಜರಾಗಿ ದೂರು ನೀಡಿದವರಾಗಿದ್ದು, ಅವರು ತಮ್ಮ ಅಂಗಡಿಯನ್ನು 30ನೇ ತಾರೀಕಿನ ರಾತ್ರಿ ಸುಮಾರು 8.30ಕ್ಕೆ ಮುಚ್ಚಿ ಮನೆಗೆ ತೆರಳಿದ್ದರು. ಆದರ ದಿನ ಬೆಳಗ್ಗೆ 5.40ರ ಸುಮಾರಿಗೆ ಅಂಗಡಿ ತೆರೆಯಲು ಬಂದಾಗ ಮುಂಭಾಗದ ಬಾಗಿಲು ಒಡೆದು ಹಾಕಿರುವುದು ಗಮನಕ್ಕೆ ಬಂತು.

ಅಂಗಡಿಯಲ್ಲಿ ಪರಿಶೀಲನೆ ನಡೆಸಿದಾಗ ಕ್ಯಾಶ್ ಬಾಕ್ಸ್‌ನಲ್ಲಿಟ್ಟಿದ್ದ ₹20,000 ನಗದು ಹಾಗೂ ಗ್ಯಾಸ್ ಸ್ಟವ್ ಕಳ್ಳತನವಾಗಿರುವುದು ತಿಳಿದುಬಂದಿದೆ. ಅನಾಮಿಕ ಕಿಡಿಗೇಡಿಗಳು ಅಂಗಡಿಯೊಳಗೆ ನುಗ್ಗಿ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.

ಸಂದರ್ಭಕ್ಕೆ ಸಂಬಂಧಿಸಿದಂತೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ಕುರಿತು ತನಿಖೆ ಆರಂಭಿಸಲಾಗಿದೆ. ಅಂಗಡಿಯ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆಗೆ ಪೊಲೀಸರು ಮುಂದಾಗಿದ್ದಾರೆ.

Related posts