ಸೋಂಪುರ ಗೇಟ್ ಬಳಿ ಶಶಿಕಲಾ ಮತ್ತು ಮಗ ಕಾಣೆಯಾಗಿದೆ – ಪತ್ತೆಹಚ್ಚುವಂತೆ ಕುಟುಂಬದ ಮನವಿ
ಸರ್ಜಾಪುರ, ಜುಲೈ1, 2025
ಆನೇಕಲ್ ತಾಲ್ಲೂಕು ಸರ್ಜಾಪುರ ಹೋಬಳಿಯ ಸೋಂಪುರ ಗೇಟ್ ನಲ್ಲಿ ವಾಸವಾಗಿದ್ದ ಶಶಿಕಲಾ ಮತ್ತು ಅವರ ಮಗ ವಿನಯ್ ಕುಮಾರ್ ಕಳೆದ ನಾಲ್ಕು ದಿನಗಳಿಂದ ಕಾಣೆಯಾಗಿದ್ದು, ಈ ಕುರಿತು ಅವರ ಪತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ರಾಯಚೂರು ಜಿಲ್ಲೆಯ ಉಟಕನೂರು ಗ್ರಾಮ ಮೂಲದ ಕುಟುಂಬವು ಕಳೆದ 18 ವರ್ಷಗಳಿಂದ ಬೆಂಗಳೂರು ನಗರದಲ್ಲಿ ವಾಸವಿದ್ದು, ಬಸವಲಿಂಗಪ್ಪ ರವರು ವಿದ್ಯುತ್ ತಜ್ಞನಾಗಿ ಕೆಲಸ ಮಾಡುತ್ತಿದ್ದಾರೆ. ದಿನಾಂಕ 26-07-2025 ರಂದು ಬೆಳಿಗ್ಗೆ ಸುಮಾರು 11 ಗಂಟೆಗೆ ಶಶಿಕಲಾ ಅವರು ತಮ್ಮ ಮಗನೊಂದಿಗೆ ಮನೆಯಿಂದ ಹೊರಟ್ಟಿದ ಬಳಿಕ ವಾಪಸ್ ಬಂದಿಲ್ಲ.
ಸಂಬಂಧಿಕರು ಹಾಗೂ ಆತ್ಮೀಯರ ಮನೆಗಳಲ್ಲಿ ಹುಡುಕಿದರೂ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಯಾವುದೇ ವಿಳಾಸ ಪತ್ತೆಯಾಗದ ಹಿನ್ನೆಲೆಯಲ್ಲಿ ಅವರು 30-07-2025 ರಂದು ಸಂಜೆ 7 ಗಂಟೆಗೆ ಠಾಣೆಗೆ ಹಾಜರಾಗಿ ದೂರು ದಾಖಲಿಸಿದ್ದಾರೆ.
ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶೋಧ ಕಾರ್ಯ ಆರಂಭಿಸಿದ್ದು, ಶಶಿಕಲಾ ಹಾಗೂ ಮಗನ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಸರ್ಜಾಪುರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕೆಂದು ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.

