ಸುದ್ದಿ 

ಮನೆ ಬೀಗ ಹಾಕಿ ಚಿನ್ನದ ಚೈನ್ ಕಳವು – ಕಳ್ಳತನ ಪ್ರಕರಣ ದಾಖಲು

Taluknewsmedia.com

ಬೆಂಗಳೂರು, ಜುಲೈ 30 – ಆನೇಕಲ್ ಪ್ರದೇಶದಲ್ಲಿ ಮನೆ ಬೀಗ ಹಾಕಿ ಒಳನುಗ್ಗಿದ ದುಷ್ಕರ್ಮಿಗಳು, ಗಾದ್ರೇಜ್ ಬೀರುವಿನಲ್ಲಿ ಇಡಲಾಗಿದ್ದ ಚಿನ್ನದ ಸರವನ್ನು ಕಳವು ಮಾಡಿರುವ ಘಟನೆ ವರದಿಯಾಗಿದೆ. ಪ್ರಕರಣ ಸಂಬಂಧ ಸ್ಥಳೀಯ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ಮಹಿಳೆ ಶ್ರೀಮತಿ ರಮಾ ಕೊಂ ರಾಮು ಅವರು, ತಾವು ಗಂಡ ಹಾಗೂ ಮಕ್ಕಳೊಂದಿಗೆ ವಾಸವಿದ್ದು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಅವರು ನೀಡಿದ ಮಾಹಿತಿಯಂತೆ, ದಿನಾಂಕ 30-07-2025 ರಂದು ಬೆಳಗ್ಗೆ 7:30 ಗಂಟೆಗೆ ಅವರ ಮಕ್ಕಳು ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿದ್ದು, ನಂತರ ಬೆಳಗ್ಗೆ 9:00 ಗಂಟೆಗೆ ರಮಾ ದೆಯೂ ಸಹ ತನ್ನ ಕೆಲಸಕ್ಕೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಗಂಡನು ಮನೆಯಲ್ಲೇ ಇದ್ದನು.

ಸಂಜೆ 6:30ರ ಸುಮಾರಿಗೆ ಮನೆಗೆ ಹಿಂತಿರುಗಿದಾಗ ಬಾಗಿಲಿಗೆ ಬೀಗ ಹಾಕಿರುವುದನ್ನು ಅವರು ಗಮನಿಸಿದರು. ತಕ್ಷಣ ಮನೆ ಮಾಲೀಕರ ಸಹಾಯದಿಂದ ಬೀಗ ತೆಗೆಯಲಾಯಿತು. ಮನೆಯೊಳಗೆ ಪ್ರವೇಶಿಸಿದಾಗ ಗಾದ್ರೇಜ್ ಬೀರುವಿನಲ್ಲಿ ಇಡಲಾಗಿದ್ದ 10 ಗ್ರಾಂ ತೂಕದ ಚಿನ್ನದ ಚೈನ್ ಕಳವಾಗಿರುವುದು ಬೆಳಕಿಗೆ ಬಂದಿತು.

ಕಳ್ಳರು ಮನೆಯ ಬೀಗದ ಕೀ ತೆಗೆದುಕೊಂಡು, ಕಳವು ಮಾಡಿ ಮತ್ತೆ ಬೀಗ ಹಾಕಿ ಹೋಗಿರುವ ಸಾಧ್ಯತೆ ಇದೆ. ಪ್ರಕರಣ ಕುರಿತು ಗಂಡನಿಗೆ ವಿಚಾರಿಸಿದಾಗ, ಅವರು ಬೆಳಗ್ಗೆ 11:00 ಗಂಟೆಗೆ ಕೆಲಸಕ್ಕೆ ತೆರಳಿದ್ದೆನೆಂದು ತಿಳಿಸಿದ್ದಾರೆ. ಕಳವಾದ ಚೈನ್‌ನ್ನು ರಮಾ ಅವರ ಮಗ ಉದಯಕುಮಾರ್ ಹೆಸರಿನಲ್ಲಿ ದಿನಾಂಕ 29-10-2023 ರಂದು ಖರೀದಿಸಲಾಗಿತ್ತೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಳವಾದ ಚಿನ್ನದ ಸರವನ್ನು ವಾಪಸು ಪಡೆಯಲು ಹಾಗೂ ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related posts