ಸೀರಸಂದ್ರ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಧ್ಯಪಾನ – ವ್ಯಕ್ತಿ ವಶಕ್ಕೆ
ಬೆಂಗಳೂರು, ಆಗಸ್ಟ್ 5, 2025:
ಹೆಸರಘಟ್ಟ ಹೋಬಳಿ ಯಲಹಂಕ ತಾಲ್ಲೂಕಿನ ಸೀರಸಂದ್ರ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಧ್ಯಪಾನಕ್ಕೆ ಅವಕಾಶ ನೀಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಕುರಿತು ರಾಜನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಅಗಸ್ಟ್ 1ರಂದು ಸಂಜೆ 4 ಗಂಟೆಗೆ ಗಸ್ತಿನಲ್ಲಿ ಇದ್ದ ಪೊಲೀಸರಿಗೆ ಸ್ಥಳೀಯರಿಂದ ಸೀರಸಂದ್ರ ಗ್ರಾಮದ ನಿವಾಸಿ ನಾಗರಾಜು ಬಿನ್ ಸಿದ್ದಲಿಂಗಪ್ಪ ಎಂಬವರು ತಮ್ಮ ಮನೆಯ ಮುಂಭಾಗದಲ್ಲೇ ಕೆಲವು ಆಸಾಮಿಗಳಿಗೆ ಮಧ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಈ ಮೂಲಕ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟಾಗುತ್ತಿದೆ ಎಂಬ ಮಾಹಿತಿ ಲಭಿಸಿತು.
ಈ ಮಾಹಿತಿ ಹಿನ್ನೆಲೆಯಲ್ಲಿ ರಾಜನಕುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗ್ರಾಮ ಪಂಚಾಯತ್ ಸದಸ್ಯರನ್ನು ಕರೆದುಕೊಂಡು ನಾಗರಾಜರ ಮನೆ ಬಳಿ ಪರಿಶೀಲನೆ ನಡೆಸಿದರು. ಸಂಜೆ 4:45ರ ವೇಳೆಗೆ ನಾಗರಾಜರ ಮನೆಯ ಮುಂಭಾಗದಲ್ಲಿ ಕೆಲವರು ಮಧ್ಯಪಾನ ಮಾಡುತ್ತಿರುವುದು ದೃಷ್ಟಿಗೋಚರವಾಯಿತು. ಪೊಲೀಸರು ಧಾಳಿ ನಡೆಸಿದಾಗ, ಹಲವು ಆಸಾಮಿಗಳು ಓಡಿ ಹೋಗಿದರು.
ಸ್ಥಳ ಪರಿಶೀಲನೆ ವೇಳೆ “ಒರಿಜಿನಲ್ ಚಾಯ್” ಎಂಬ ಮದ್ಯದ ಎರಡು ಖಾಲಿ ಟೆಟ್ರಾ ಪ್ಯಾಕ್‌ಗಳು, “ಡ್ರೈವರ್ಸ್ ಪಂಚ್” ಹೆಸರಿನ ಇನ್ನೂ ಎರಡು ಖಾಲಿ ಪ್ಯಾಕ್‌ಗಳು ಹಾಗೂ ನಾಲ್ಕು ಖಾಲಿ ನೀರಿನ ಬಾಟಲಿಗಳು ದೊರೆತಿವೆ. ಅಲ್ಲಿದ್ದ ನಾಗರಾಜು ಅವರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ, ಅವರು ತಮ್ಮ ಮನೆಯ ಮುಂಭಾಗದಲ್ಲಿ ಜನರಿಗೆ ಮದ್ಯಪಾನ ಮಾಡಲು ಅವಕಾಶ ನೀಡಿ ಹಣ ಸಂಪಾದನೆ ಮಾಡುತ್ತಿದ್ದಂತೆ ಒಪ್ಪಿಕೊಂಡಿದ್ದಾರೆ.
ರಾಜನಕುಂಟೆ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು, ಸ್ಥಳದಲ್ಲಿ ಸಿಕ್ಕ ವಸ್ತುಗಳೊಂದಿಗೆ ಠಾಣೆಗೆ ಹಾಜರಾಗಿ, ಕರ್ನಾಟಕ ಎಕ್ಸ್‌ಸೈಸ್ ಆಕ್ಟ್ 1965ರ ಸೆಕ್ಷನ್ 15(A) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ತನಿಖೆ ಮುಂದುವರಿಯುತ್ತಿದೆ.

