ಸುದ್ದಿ 

ಬೈಕ್ ಕಳವು: ಆರೋಪಿ ಬಂಧನ, ವಾಹನ ಪತ್ತೆ

Taluknewsmedia.com

ಬೆಂಗಳೂರು, ಆಗಸ್ಟ್ 5: 2025
ಬಾಗಲೂರು ಕ್ರಾಸ್ ಬಳಿ ನಿಲ್ಲಿಸಿದ್ದ ಬೈಕ್ ಕಳವಾಗಿರುವ ಘಟನೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದೂರುದಾರರು ತಮ್ಮ Hero Honda Splendor Plus ಬೈಕ್ (ನಂ: TN 45 AX 6960) ಅನ್ನು 28 ಜುಲೈ 2025ರಂದು ಬೆಳಿಗ್ಗೆ ಕೆಲಸಕ್ಕೆ ಹೋಗುವಾಗ ಬಿಟ್ಟು ಹೋಗಿದ್ದರು.

ಮರುದಿನ ಬೈಕ್ ಕಾಣೆಯಾಗಿದ್ದು ಎಲ್ಲೆಡೆ ಹುಡುಕಿದರೂ ಸಿಕ್ಕಿಲ್ಲ. ಇದರ ನಂತರ ಅವರು ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದರು.

ಪೊಲೀಸರು ತನಿಖೆ ನಡೆಸಿ ಪಂಜಾಬ್ ಮೂಲದ ಹರ್ಮಿತ್ ಸಿಂಗ್ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿ ಬೈಕ್ ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರು ಕಳವಾದ ಬೈಕ್ ಅನ್ನು ವಶಕ್ಕೆ ಪಡೆದಿದ್ದಾರೆ.

ವಾಹನದ ಎಲ್ಲಾ ವಿವರಗಳು ದೂರುದಾರರದ್ದೇ ಎಂಬುದು ದೃಢಪಟ್ಟಿದೆ. ಪೊಲೀಸರು ಹರ್ಮಿತ್ ಸಿಂಗ್ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ.

Related posts