ಸುದ್ದಿ 

ರಸ್ತೆ ಕಾಮಗಾರಿಯ ವೇಳೆ ಭೂಗತ ವಿದ್ಯುತ್ ಕೇಬಲ್ ಹಾನಿ – ಆರು ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯ

Taluknewsmedia.com

ಆನೇಕಲ್, ಆಗಸ್ಟ್ 5:
ಆನೇಕಲ್ ತಾಲೂಕಿನ ಕಮ್ಮಸಂದ್ರ ಅಗ್ರಹಾರ ಪ್ರದೇಶದಲ್ಲಿ ನಡೆಯುತ್ತಿದ್ದ ರಸ್ತೆ ಕಾಮಗಾರಿಯ ಸಂದರ್ಭದಲ್ಲಿ ಭೂಗತ ವಿದ್ಯುತ್ ಕೇಬಲ್ ಗೆ ಹಾನಿಯುಂಟಾಗಿ, ಆರು ಗ್ರಾಮಗಳಿಗೆ ವಿದ್ಯುತ್ ಪೂರೈಕೆ ವ್ಯತ್ಯಯಗೊಂಡ ಘಟನೆ ಬೆಳಕಿಗೆ ಬಂದಿದೆ.

ತಕ್ಷಣದ ಪ್ರಕಾರ, ದಿನಾಂಕ 11-06-2025 ರಂದು ಬೆಳಿಗ್ಗೆ 10:44ಕ್ಕೆ ಕಮ್ಮಸಂದ್ರ ಅಗ್ರಹಾರ ವ್ಯಾಪ್ತಿಯ ಆನೇಕಲ್ 110/11 ಕೆವಿ ಉಪ ವಿದ್ಯುತ್ ವಿತರಣಾ ಕೇಂದ್ರದ ಬಳಿಯಲ್ಲಿ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಈ ವೇಳೆ KA-16-M-6201 ನಂಬರ್ ಹೊಂದಿರುವ JCB ಯಂತ್ರದ ಮೂಲಕ ಕೆಲಸ ನಡೆಯುತ್ತಿದ್ದಾಗ F18, F10 ಮತ್ತು F19 ಮಾರ್ಗದ 400 ಸ್ಕ್ವೆರ್ ಎಂ x 3 ಕೋರ್ ಭೂಗತ ಕೇಬಲ್ ಗೆ ಹಾನಿಯಾಗಿದೆ.

ಈ ಘಟನೆಯ ಪರಿಣಾಮವಾಗಿ ಸಂಬಂಧಪಟ್ಟ ಆರು ಗ್ರಾಮಗಳಿಗೆ ವಿದ್ಯುತ್ ಪೂರೈಕೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಸಾರ್ವಜನಿಕರಿಗೆ ಸಮಸ್ಯೆಯುಂಟಾಗಿದೆ. ಘಟನೆಗೆ ಸಂಬಂಧಪಟ್ಟಂತೆ 02-08-2025 ರಂದು ಸಂಜೆ 4 ಗಂಟೆಗೆ ಸಂಬಂಧಿತ ಅಧಿಕಾರಿಗಳು ಠಾಣೆಗೆ ದೂರು ಸಲ್ಲಿಸಿದ್ದು, ಜವಾಬ್ದಾರಿ ಹೊಂದಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ತದನಂತರ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ, ತಡವಾಗಿ ದೂರು ಸಲ್ಲಿಸಲಾಗಿದ್ದು, ವಿದ್ಯುತ್ ಇಲಾಖೆಯು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Related posts