ಸುದ್ದಿ 

ಜಮೀನಿನ ಕಬಳಿಕೆ, ನಕಲಿ ದಾಖಲೆ, ಕೊಲೆ ಬೆದರಿಕೆ ಮತ್ತು ಜಾತಿ ನಿಂದನೆ ಆರೋಪ – ಆನೇಕಲ್ ತಾಲ್ಲೂಕಿನಲ್ಲಿ ಗಂಭೀರ ಆರೋಪ

Taluknewsmedia.com

ಆನೇಕಲ್, 5 ಜುಲೈ 2025:
ಆನೇಕಲ್ ತಾಲ್ಲೂಕು, ಕಸಬಾ ಹೋಬಳಿ, ಹಾಲೇನಹಳ್ಳಿ ಗ್ರಾಮದ ನಿವಾಸಿ ಟಿ. ಪಿಳ್ಳಪ್ಪ ಅವರು ದಿನಾಂಕ 04-08-2025 ರಂದು ಮಧ್ಯಾಹ್ನ 2 ಗಂಟೆಗೆ ಆನೇಕಲ್ ಪೊಲೀಸ್ ಠಾಣೆಗೆ ಹಾಜರಾಗಿ ಗಂಭೀರ ಆರೋಪಗಳ ನೊಳಗೊಂಡು ದೂರು ಸಲ್ಲಿಸಿದ್ದಾರೆ.

ದೂರಿನ ಪ್ರಕಾರ, ಪಿಳ್ಳಪ್ಪ ಅವರು ಹಾಗೂ ಅವರ ಕುಟುಂಬಕ್ಕೆ ಬಗ್ಗನದೊಡ್ಡಿ ಗ್ರಾಮದ ಹಳೇ ಸರ್ವೆ ನಂ. 96 (ಹೊಸ ಸರ್ವೆ ನಂ. 116 ಮತ್ತು 117) ರಲ್ಲಿರುವ 8 ಎಕರೆ ಜಮೀನು ಆದಿಕರ್ಣಾಟಕ ಜನಾಂಗಕ್ಕೆ ಸೇರಿದ PTCL ಕಾಯ್ದೆ ವ್ಯಾಪ್ತಿಗೆ ಒಳಪಟ್ಟ ಜಮೀನಾಗಿದೆ. ಈ ಜಮೀನಿಗೆ ಸಂಬಂಧಿಸಿದಂತೆ ಅವರು ಚಂದ್ರಶೇಖರ್.ಸಿ ಎಂಬುವವರಿಗೆ ದಿನಾಂಕ 17-03-2020-21 ರಂದು GPA ಮೂಲಕ ನಂಬಿಕೆ ಇಟ್ಟು ನಿಯೋಜಿಸಿದರೂ, ಅವರು ದಾಖಲೆಗಳನ್ನು ತಪ್ಪಾಗಿ ಉಪಯೋಗಿಸಿದ ಬಗ್ಗೆ ದೂರುದಲ್ಲಿದೆ.

ಮೂರು ಬಾರಿ ನೋಟಿಸ್ ನೀಡಿದರೂ ಯಾವುದೇ ಪ್ರತಿಕ್ರಿಯೆ ಬರದ ಹಿನ್ನೆಲೆ, GPA ರದ್ದತಿ ಮಾಡಿ, ಆನೇಕಲ್ ನೊಂದಣಿ ಕಛೇರಿಯಲ್ಲಿ 15-03-2023 ರಂದು ಅಧಿಕೃತವಾಗಿ GPA ವಜಾ ಮಾಡಲಾಗಿದೆ. ಆದರೆ ಚಂದ್ರಶೇಖರ್.ಸಿ ಅವರು GPA ರದ್ದು ಮಾಡಿರುವ ಪ್ರಮಾಣಪತ್ರವಿದ್ದರೂ ಸಹ, ರಾಮ್ ಮೋಹನ್ ರಾಜ್ ಎಂಬವರ ಸಹಾಯದಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಜಮೀನನ್ನು ಬೇರೆ ವ್ಯಕ್ತಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಲಾಗಿದೆ.

ದಿನಾಂಕ 07-07-2025 ರಂದು ಸಂಜೆ 5 ಗಂಟೆಯ ವೇಳೆಗೆ, ಪಿಳ್ಳಪ್ಪ ಅವರು ತಮ್ಮ ಸ್ನೇಹಿತರು ಸುರೇಶ್ ಮತ್ತು ಮುನಿರಾಜು ರವರೊಂದಿಗೆ ಜಮೀನು ಸ್ಥಳಕ್ಕೆ ತೆರಳಿದ್ದಾಗ, ಚಂದ್ರಶೇಖರ್ ಮತ್ತು ರಾಮ್ ಮೋಹನ್ ರಾಜ್ ತಮ್ಮ ಸಹಚರರೊಂದಿಗೆ ಅಲ್ಲಿ ಬಂದು, ಹಾನಿಕಾರಕ ಮತ್ತು ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ, ಜಾತಿ ನಿಂದನೆ ಮತ್ತು ಮಾನಸಿಕ ಹಿಂಸೆ ನೀಡಿದರೆಂದು ದೂರಿನಲ್ಲಿ ವಿವರಿಸಲಾಗಿದೆ.

ಈ ಹಿಂದೆಯೂ ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ FIR ಸಂಖ್ಯೆ 92/2025 ರಂತೆ ಬಿ.ಎನ್.ಎಸ್. ಸೆಕ್ಷನ್‌ಗಳ 336(2), 338, 310(2), 318(1), 352, 351(2), 351(3) ಮತ್ತು SC/ST (ಪೂರ್ವಾನುಮತಿ) ಕಾಯ್ದೆಯ ಸೆಕ್ಷನ್ 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಪಿಳ್ಳಪ್ಪ ಅವರು ಅವರು ಮತ್ತು ಕುಟುಂಬದವರು ಭಯಭೀತರಾಗಿದ್ದು, ಪೊಲೀಸ್ ಇಲಾಖೆ ಹಾ

Related posts