ಸಾಯಿ ಸಿಟಿ ಫೇಸ್-2 ಆಸ್ತಿ ವಂಚನೆ ಪ್ರಕರಣ: ನಿವೇಶನ ಮಾಲಕಿ ನ್ಯಾಯಕ್ಕಾಗಿ ಹೋರಾಟ
ಆನೇಕಲ್, ಆಗಸ್ಟ್ 5, 2025:
ಆನೇಕಲ್ ತಾಲೂಕು, ಕಸಬಾ ಹೋಬಳಿ, ಅಗಸತಿಮ್ಮನಹಳ್ಳಿ ಗ್ರಾಮದ ಸಾಯಿ ಸಿಟಿ ಫೇಸ್-2 ಪ್ರದೇಶದಲ್ಲಿ ಆಸ್ತಿ ವಂಚನೆ ಸಂಬಂಧಿಸಿದ ಗಂಭೀರ ಆರೋಪವೊಂದು ಬೆಳಕಿಗೆ ಬಂದಿದೆ. ಬೆಂಗಳೂರಿನ ನಿವಾಸಿ ಶ್ರೀಮತಿ ಶೃತಿ ಅವರು 2017ರಲ್ಲಿ ಸಾಯಿ ಸಿಟಿ ಫೇಸ್-2 ರಲ್ಲಿ ಹೌಸ್ ನಂಬರ್ 641, ಖಾತೆ ನಂಬರ್ 06, ಅಳತೆ 40×30 ಅಡಿ (ಒಟ್ಟು 1200 ಚದರ ಅಡಿ) ಇದ್ದ ಖಾಲಿ ನಿವೇಶನವನ್ನು ಆರ್. ಪ್ರಭಾಕರ್ ರೆಡ್ಡಿ ಮತ್ತು ಬಿ. ಕೇಶವ ರೆಡ್ಡಿಯಿಂದ ಖರೀದಿಸಿದ್ದರು. ಈ ಖರೀದಿ ಚಾಮರಾಜಪೇಟೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ದಾಖಲಾಗಿತ್ತು.
ನಿವೇಶನ ಖರೀದಿಯ ನಂತರ ಅವರು ತಮ್ಮ ಹೆಸರಿಗೆ ಕಂದಾಯ ಖಾತೆ ತೆರಿದಿದ್ದು, ಎಲ್ಲ ದಾಖಲೆಗಳು ಸಹ ಸುಸ್ಪಷ್ಟವಾಗಿವೆ. ಆದರೆ, 2020 ರಲ್ಲಿ ಕೊರೋನಾ ನಂತರ ಅವರು ಸ್ಥಳಕ್ಕೆ ಹೋಗದೆ ಇದ್ದ ಸಂದರ್ಭದಲ್ಲಿ, 2022ರಲ್ಲಿ ಹೋದಾಗ ನಿವೇಶನವೇ ಅಲ್ಲಿಲ್ಲದೆ ರಸ್ತೆ ಅಗಮ ಭೂಮಿ ಮತ್ತು ಕೃಷಿಯೋಗ ಭೂಮಿಯಾಗಿ ಮಾರ್ಪಟ್ಟಿದ್ದೆಂದು ತಿಳಿದು ಬಂದಿದೆ. ರಸ್ತೆಯೂ ಇಲ್ಲದಂತಾಗಿ, ಜನರು ಅಲ್ಲಿ ಪ್ರವೇಶಿಸದಂತೆ ಅಡೆತಡೆಯೂ ಉಂಟಾಗಿದೆ.
ಶ್ರೀಮತಿ ಶೃತಿ ಅವರ ಸಂಬಂಧಿಯಾದ ಎಸ್. ಶೈಲಾ ಅವರು ದಿನಾಂಕ 06-09-2022 ರಂದು ಆರ್.ಪಿ.ಎ.ಡಿ ಮೂಲಕ ಆರ್. ಪ್ರಭಾಕರ್ ರೆಡ್ಡಿಗೆ ಪತ್ರ ಕಳುಹಿಸಿದರೂ ಅವರು ಯಾವುದೇ ಪ್ರತಿಕ್ರಿಯೆ ನೀಡದೆ, ನಂತರ ಕಳುಹಿಸಿದ ಲೀಗಲ್ ನೋಟಿಸ್‌ಗಳನ್ನೂ ತಿರಸ್ಕರಿಸಿದ್ದಾರೆ. ಮೊಬೈಲ್ ಸಂಖ್ಯೆಗಳನ್ನೂ ಬ್ಲಾಕ್ ಮಾಡಿ ಸಂಪರ್ಕ ತಪ್ಪಿಸಿದ್ದಾರೆ ಎಂಬ ಆರೋಪವೂ ಇದೆ.
ಈ ಕುರಿತು ಶ್ರೀಮತಿ ಶೃತಿ ಅವರು ಆನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, NCR ಸಂಖ್ಯೆ 838/2024 (ದಿನಾಂಕ 05-08-2024) ಅಡಿಯಲ್ಲಿ ದಾಖಲಾಗಿದೆ. ಈಗ ಅವರು ಪೂರ್ಣ ಪ್ರಮಾಣದ FIR ದಾಖಲಿಸುವಂತೆ ಹಾಗೂ ಆರೋಪಿಗಳಾದ ಆರ್. ಪ್ರಭಾಕರ್ ರೆಡ್ಡಿ, ಬಿ. ಕೇಶವ್ ರೆಡ್ಡಿ ಜೊತೆಗೆ ಸಂಬಂಧಿಕರಾದ ಎಸ್. ಶೈಲಾ ಮತ್ತು ಸರಸ್ವತಿ ಜಗದೀಶ್ ಇವರನ್ನೂ ತನಿಖೆಗೆ ಒಳಪಡಿಸಬೇಕು ಎಂದು ಪ್ರಸ್ತಾಪಿಸಿದ್ದಾರೆ.
ಅಲ್ಲದೆ, ‘ಅಸೋಸಿಯೇಷನ್ ಸದಸ್ಯರನ್ನಾಗಿ ಮಾಡುತ್ತೇವೆ’ ಎಂದು ಹೇಳಿ ಹಣ ಪಡೆದು ಯಾವುದೇ ಸೌಲಭ್ಯ ನೀಡದಿರುವ ಬಗ್ಗೆ ಕೂಡ ಅಳಲು ಹೊರಹಾಕಿದ್ದಾರೆ. ಹಣವನ್ನು ವಾಪಸ್ ಕೊಡದೆ, ಮೋಸ ಮಾಡಲಾಗಿದೆ ಎಂಬ ಆರೋಪವು ಗ�

