ಸುದ್ದಿ 

ಪಾರ್ಟ್‌ಟೈಮ್ ಕೆಲಸದ ಮೋಸ: ವ್ಯಕ್ತಿಗೆ ₹6.65 ಲಕ್ಷ ನಷ್ಟ

Taluknewsmedia.com

ಬೆಂಗಳೂರು, ಆಗಸ್ಟ್ 6: 2025
ಪಾರ್ಟ್‌ಟೈಮ್ ಕೆಲಸದ ಆಫರ್ ಅನ್ನು ನಂಬಿ ಟೆಲಿಗ್ರಾಂ ಲಿಂಕ್‌ಗಳ ಮೂಲಕ ಹಣ ಹೂಡಿದ ವ್ಯಕ್ತಿಗೆ ಆನ್‌ಲೈನ್ ಮೋಸಗಾರರು ₹6.65 ಲಕ್ಷವರೆಗೆ ನಷ್ಟಮಾಡಿದ ಘಟನೆ ಬೆಳಕಿಗೆ ಬಂದಿದೆ.

ಇಂದೂಷ ಅವರು ಜುಲೈ 28 ರಂದು +91-6265876135 ಎಂಬ ಸಂಖ್ಯೆಯಿಂದ ವಾಟ್ಸಾಪ್‌ನಲ್ಲಿ ಸಂದೇಶ ಬಂದಿದ್ದು, ಪಾರ್ಟ್‌ಟೈಮ್ ಕೆಲಸವಿದೆ ಎಂದು ತಿಳಿಸಲಾಗಿತ್ತು. ನಂತರ ಅವರು ಟೆಲಿಗ್ರಾಂ ಗ್ರೂಪಿಗೆ ಸೇರಿಕೊಂಡು, ಒಂದು ವೆಬ್‌ಸೈಟ್ (https://szqqs.cc) ಮೂಲಕ ತಮ್ಮ ವಿವರಗಳನ್ನು ನೋಂದಾಯಿಸಿದ್ದಾರೆ.

ಮೋಸಗಾರರು “ಬಾಸ್” ಎಂದು ಪರಿಚಯಿಸಿಕೊಂಡು, ಹಂತ ಹಂತವಾಗಿ ಟಾಸ್ಕ್‌ಗಳ ಹೆಸರಿನಲ್ಲಿ ಹಣವನ್ನು ಇನ್ವೆಸ್ಟ್ ಮಾಡಲು ಸೂಚಿಸಿದ್ದರು. ದೂರಿದಾರರು ಕೊಟಕ್ ಮಹೀಂದ್ರಾ ಬ್ಯಾಂಕ್ ಖಾತೆಯಿಂದ ವಿವಿಧ ಖಾತೆಗಳಿಗೆ ಒಟ್ಟು ₹6,65,000/- ಹಣವನ್ನು ವರ್ಗಾಯಿಸಿದ್ದಾರೆ.

ಆದರೆ ಈ ಹಣದ ಪ್ರತಿಫಲವಾಗಿ ಯಾವುದೇ ಹಣವನ್ನು ಅವರು ವಾಪಸ್ ಪಡೆಯದೇ, ಮೋಸದಲ್ಲಿ ಸಿಲುಕಿರುವುದಾಗಿ ದೂರಿದ್ದಾರೆ. ತನಿಖೆ ಆರಂಭಿಸಿದ ವಿದ್ಯಾರಣ್ಯಪುರ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಲು ಕ್ರಮ ಕೈಗೊಂಡಿದ್ದಾರೆ.

Related posts