ಸುದ್ದಿ 

ಸೇಲಂ ಕೈದಿ ಪತ್ನಿಯಿಂದ ಗಂಭೀರ ಆರೋಪ – ಅಪಹರಣ, ಕೊಲೆ ಪ್ರಕರಣದಲ್ಲಿ ಗಂಡನಿಗೆ ಸುಳ್ಳು ಆರೋಪ?

Taluknewsmedia.com

ಬೆಂಗಳೂರು, ಆಗಸ್ಟ್ 9:
ಸೇಲಂ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶ್ರೀನಿವಾಸ್ ಎಂಬುವವರ ಪತ್ನಿ ಯಲ್ಲಮ್ಮ ಅವರು ತಮ್ಮ ಗಂಡನ ವಿರುದ್ಧ ದಾಖಲಾಗಿರುವ ಪ್ರಕರಣ ಸುಳ್ಳು ಎಂದು ಆರೋಪಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಯಲ್ಲಮ್ಮ ಅವರು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ ಖಾಸಗಿ ದೂರು (ಪಿ.ಸಿ.ಆರ್ 265/2025) ಪ್ರಕಾರ, 17-09-2024ರ ರಾತ್ರಿ ಸರ್ಜಾಪುರ ರಸ್ತೆ ಚಂಬೇನಹಳ್ಳಿ ಗೇಟ್ ಬಳಿ ಶ್ರೀನಿವಾಸ್ ಅವರ ಟಾಟಾ ಏಸ್ ವಾಹನಕ್ಕೆ ಮತ್ತೊಂದು ಟಾಟಾ ಏಸ್ ಡಿಕ್ಕಿ ಹೊಡೆಸಲಾಗಿದ್ದು, ನಂತರ 4–5 ಜನರು ಅವರನ್ನು ಬಲವಂತವಾಗಿ ಕಾರಿನಲ್ಲಿ ಹತ್ತಿಸಿ ಚಿಕ್ಕ ತಿರುಪತಿ ರಸ್ತೆಯ ವಿಲ್ಲಾಕ್ಕೆ ಕರೆದೊಯ್ದಿದ್ದಾರೆ.

ಆರೋಪಿಯರಲ್ಲೊಬ್ಬನಾದ ರೇವ (ರೋಹಿತ್ ಕುಮಾರ್) ಅವರು, “ನಿನ್ನ ಚಿಕ್ಕ ಮಗ ಮನು ನಮ್ಮ ಹಿಡಿತದಲ್ಲಿದ್ದಾನೆ, ನಾನು ಹೇಳಿದಂತೆ ಕೇಳಬೇಕು” ಎಂದು ಬೆದರಿಕೆ ಹಾಕಿ, ಮುಂದಿನ ದಿನ ದೇವಸ್ಥಾನದ ಬಳಿ ಮಾತುಕತೆಯ ವೇಳೆ ರೇವಂತ್ ಎಂಬ ಯುವಕನನ್ನು ಸಹ ಅಪಹರಿಸಿದ್ದಾರೆ. ಆರೋಪಿಗಳ ಗುಂಪು ರೇವಂತ್ ಮೇಲೆ ಹಲ್ಲೆ ನಡೆಸಿ, ಕೊಮ್ಮಸಂದ್ರ ಮತ್ತು ಸೋಂಪುರ ಮಾರ್ಗವಾಗಿ ಕರೆದೊಯ್ದು, ಹಳ್ಳಿ ರಸ್ತೆಯಲ್ಲಿ ಕೊಲೆಗೈದಿರುವುದಾಗಿ ದೂರಿನಲ್ಲಿ ಹೇಳಲಾಗಿದೆ.

ಶ್ರೀನಿವಾಸ್ ಅವರನ್ನು ವಿಲ್ಲಾದೊಳಗೆ ಬಂಧಿಸಿ, ವಿಷಯವನ್ನು ಯಾರಿಗೂ ಹೇಳಬಾರದು ಎಂದು ಬೆದರಿಕೆ ಹಾಕಿ 20-09-2024ರಂದು ಸಂಜೆ ಬಿಡುಗಡೆ ಮಾಡಲಾಗಿದ್ದು, ನಂತರ ಅವರು ಸ್ನೇಹಿತರ ಸಹಾಯದಿಂದ ಮನೆಗೆ ಮರಳಿದ್ದಾರೆ. ತದನಂತರ ಅವರು ಹೊಸೂರು ಎಎಸ್ಪಿ ಕಚೇರಿಗೆ ತೆರಳಿ ಸರೆಂಡರ್ ಆಗಿ ಘಟನೆ ವಿವರಿಸಿದ್ದಾರೆ.

ಯಲ್ಲಮ್ಮ ಅವರ ಪ್ರಕಾರ, ಈ ಪ್ರಕರಣದಲ್ಲಿ ನಿಜವಾದ ತಪ್ಪಿತಸ್ಥರು ಇನ್ನೂ ಬಂಧಿತರಾಗಿಲ್ಲ, ಆದರೆ ಅವರ ಗಂಡ ನಿರಪರಾಧಿಯಾಗಿದ್ದರೂ ಶಿಕ್ಷೆ ಅನುಭವಿಸುತ್ತಿದ್ದಾರೆ. ನ್ಯಾಯಾಲಯವು ದೂರು ದಾಖಲಿಸಿಕೊಂಡಿದ್ದು, ವಿಚಾರಣೆ ಮುಂದುವರಿಯುತ್ತಿದೆ.

Related posts