ಸುದ್ದಿ 

ಹೆಬ್ಬಾಳ ಸೇತುವೆ ಬಳಿ ಕಂಟೈನರ್ ಲಾರಿ ಡಿಕ್ಕಿ – ತಾಯಿ-ಮಗನಿಗೆ ಗಂಭೀರ ಗಾಯ

Taluknewsmedia.com

ಬೆಂಗಳೂರು: ಅಕ್ಕಿಪೇಟೆಯಿಂದ ಕೋಡಿಗೆಹಳ್ಳಿಯಲ್ಲಿರುವ ಬಂಧುವಿನ ಮನೆಗೆ ತೆರಳುತ್ತಿದ್ದ ತಾಯಿ-ಮಗನ ಸ್ಕೂಟರ್‌ಗೆ ಮಧ್ಯರಾತ್ರಿ ಕಂಟೈನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಗಂಭೀರವಾಗಿ ಗಾಯಗೊಂಡ ಘಟನೆ ಆಗಸ್ಟ್ 6ರ ಮಧ್ಯರಾತ್ರಿ ನಡೆದಿದೆ.

ಪೊಲೀಸರ ಪ್ರಕಾರ, ಗಾಯಗೊಂಡವರು ರಾಜೇಶ್ ಎ. (ಮಗ) ಮತ್ತು ಶಾಂತಿ (ತಾಯಿ). ಇಬ್ಬರೂ ಸ್ಕೂಟರ್ (KA-01-JC-6720) ನಲ್ಲಿ ಬಿಬಿ ರಸ್ತೆ ಮಾರ್ಗವಾಗಿ ಹೆಬ್ಬಾಳ ನ್ಯಾರೋ ಬ್ರಿಡ್ಜ್ ಹತ್ತಿರ ಕೋಡಿಗೆಹಳ್ಳಿಯ ಕಡೆಗೆ ತೆರಳುತ್ತಿದ್ದಾಗ, ಸುಮಾರು 1 ಗಂಟೆಗೆ ಹಿಂಬದಿಯಿಂದ ಬಂದ ಕಂಟೈನರ್ ಲಾರಿ (RJ-14-GG-8561) ಅತಿವೇಗ ಹಾಗೂ ಅಜಾಗರೂಕತೆಯಿಂದ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ಪರಿಣಾಮ, ಸ್ಕೂಟರ್ ಸವಾರರು ರಸ್ತೆ ಮೇಲೆ ಬಿದ್ದು, ಲಾರಿಯ ಚಕ್ರ ಕಾಲುಗಳ ಮೇಲೆ ಹರಿದ ಪರಿಣಾಮ ರಾಜೇಶ್ ಎ. ಅವರಿಗೆ ಎರಡೂ ಕಾಲು, ಎಡ ಕೈ ಹಾಗೂ ಹೊಟ್ಟೆ ಭಾಗಕ್ಕೆ ತೀವ್ರ ಗಾಯಗಳಾಗಿದ್ದು, ಎಡ ಕಾಲಿನ ಮಂಡಿಯ ಕೆಳಭಾಗವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಲಾಗಿದೆ. ಶಾಂತಿ ಅವರಿಗೆ ಎಡ ಕಾಲು, ಹೊಟ್ಟೆ ಹಾಗೂ ಕೈಗಳಿಗೆ ತೀವ್ರ ಪೆಟ್ಟು ಬಿದ್ದಿದೆ.

ಅಪಘಾತದ ನಂತರ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಸಾರ್ವಜನಿಕರ ಸಹಾಯದಿಂದ ಇಬ್ಬರನ್ನು ಮಣಿಪಾಲ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ನಂತರ ಹೆಚ್ಚಿನ ಚಿಕಿತ್ಸೆಗೆ ಯಲಹಂಕ ಕೆಕೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸರು ಅಪಘಾತಕ್ಕೆ ಕಾರಣವಾದ ಲಾರಿ ಚಾಲಕನ ಪತ್ತೆಹಚ್ಚಿ ಬಂಧಿಸಲು ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.

Related posts