ಬಿ.ಕಾಂ ವಿದ್ಯಾರ್ಥಿ ನಾಪತ್ತೆ – ಹುಡುಕಾಟ ಜೋರಾಗಿದೆ
ಬೆಂಗಳೂರು, – ನಗರದ ಸರ್ಮಾಪುರದಲ್ಲಿರುವ ಎಸ್.ವಿ.ಪಿ. ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿ ಕೆ. ಮಂಜುನಾಥ್ (ವಯಸ್ಸು ಅಂದಾಜು 21) ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಮಾತೃ ಫೌಂಡೇಷನ್‌ನಲ್ಲಿ ಸುಮಾರು 7 ವರ್ಷಗಳಿಂದ ವಾಸಿಸುತ್ತಿದ್ದ ಮಂಜುನಾಥ್‌ರನ್ನು, ಜು. 6 ರಂದು ಬೆಳಿಗ್ಗೆ ಸುಮಾರು 9 ಗಂಟೆಗೆ ಸಂಸ್ಥೆಯ ಚಾಲಕರಾದ ಕುಮಾರಸ್ವಾಮಿ ಕಾಲೇಜಿಗೆ ಬಿಟ್ಟಿದ್ದರು. ಆದರೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಾಲೇಜಿನ ಪ್ರಾಂಶುಪಾಲರು ಕರೆ ಮಾಡಿ, ವಿದ್ಯಾರ್ಥಿ ಕಾಣೆಯಾಗಿರುವುದಾಗಿ ಫೌಂಡೇಷನ್‌ಗೆ ತಿಳಿಸಿದ್ದಾರೆ.
ಘಟನೆಯ ನಂತರ ಕಾಲೇಜು ಆವರಣ, ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಬೆಂಗಳೂರು ಮೆಜೆಸ್ಟಿಕ್ ಭಾಗಗಳಲ್ಲಿ ಹುಡುಕಾಟ ನಡೆಸಿದರೂ, ಮಂಜುನಾಥ್ ಪತ್ತೆಯಾಗಿಲ್ಲ. ಹುಡುಗನ ತಂದೆ-ತಾಯಿಗೆ ವಿಷಯ ತಿಳಿಸಲಾಗಿದ್ದು, ಮಂಜುನಾಥ್ ಪತ್ತೆಗೆ ಪೊಲೀಸರು ತೀವ್ರ ಹುಡುಕಾಟ ಆರಂಭಿಸಿದ್ದಾರೆ.

