ಹೆಬ್ಬಾಳ ರಿಂಗ್‌ರಸ್ತೆಯಲ್ಲಿ ಸ್ಕೂಟರ್ ನಿಯಂತ್ರಣ ತಪ್ಪಿ ಮಹಿಳೆ ಗಂಭೀರ ಗಾಯ
ಬೆಂಗಳೂರು, ಆ.08 – ಬೆಳಗಿನ ಜಾವ ಹೆಬ್ಬಾಳ ರಿಂಗ್‌ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಯುವತಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಪೊಲೀಸರ ಮಾಹಿತಿಯಂತೆ, ಪರಶುರಾಮ್ ಅವರ ಮಗಳಾದ ನೇಹಾ ಪಿ. ಗಡ್ಕರಿ (30) ಅವರು ಶುಕ್ರವಾರ ಬೆಳಿಗ್ಗೆ ಸುಮಾರು 6.30 ರಿಂದ 6.40ರ ವೇಳೆಗೆ ತಮ್ಮ ಸ್ಕೂಟರ್ (ನಂಬರ KA-04-KW-0201) ನಲ್ಲಿ ಮನೆಯಿಂದ ಆಫೀಸ್‌ಗೆ ತೆರಳುತ್ತಿದ್ದರು. ಲುಂಬಿನಿ ಗಾರ್ಡನ್ ವೀರಣ್ಯಪಾಳ್ಯ ಅಪ್‌ರ್ಯಾಂಪ್ ಹತ್ತಿರ ವೇಗ ಹಾಗೂ ನಿರ್ಲಕ್ಷ್ಯದಿಂದ ಸವಾರಿ ಮಾಡುವ ವೇಳೆ ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದು ತಲೆಗೆ ಪೆಟ್ಟಾಗಿದ್ದಾಳೆ.
ಸಾರ್ವಜನಿಕರ ನೆರವಿನಿಂದ ಪ್ರೈವೇಟ್ ಆಂಬ್ಯುಲೆನ್ಸ್ ಮೂಲಕ ಅವರನ್ನು ತಕ್ಷಣವೇ ಆಸ್ಟರ್ CMI ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ತಮ್ಮ ಮಗಳ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿದ್ದರಿಂದ ದೂರುವನ್ನು ತಡವಾಗಿ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.

