ಸುದ್ದಿ 

ಸವಣೂರಿನ ಬಳಿ ಬಿಕರ ಲಾರಿ ಡಿಕ್ಕಿ ಗಂಭೀರ ಅಪಘಾತ

Taluknewsmedia.com

ಹಾವೇರಿ ಜಿಲ್ಲೆ ಸವಣೂರಿನ ರಾಷ್ಟ್ರೀಯ ಹೆದ್ದಾರಿ (NH 48)ನಲ್ಲಿ ಆಗಸ್ಟ್ 13ರಂದು ಬೆಳಿಗ್ಗೆ ಸುಮಾರು 6.30 ಗಂಟೆಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪೊಲೀಸರ ವರದಿ ಪ್ರಕಾರ ಲಾರಿ ಓಡಿಸುತ್ತಿದ್ದವರು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹೊಸರು ಗ್ರಾಮದ ಮೂಲದ ಮುತ್ತಪ್ಪ ಹನುಮಂತಪ್ಪ ಹುಲ್ಯಾಳ ಎಂಬ ಲಾರಿ ಚಾಲಕ (KA 19 ED 9396, ಟಾಟಾ ಇಂಟಾ ಲಾರಿ) ಮತ್ತು ಇನ್ನಿತರ ಇಬ್ಬರೂ ಕಿನ್ನರಗಳು ಇದ್ದರು ಹಾವೇರಿಯಿಂದ ಹುಬ್ಬಳ್ಳಿಯ ದಿಕ್ಕಿನಲ್ಲಿ ಈ ವಾಹನ ಬರುತ್ತಿದ್ದಾಗ ಸವಣೂರಿನ ಸಮೀಪದಲ್ಲಿ ನಿರ್ಲಕ್ಷ್ಯದಿಂದ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಸಿಮೆಂಟ್ ಬ್ಲಾಕ್ ಗಳ ಸಾಲಿಗೆ ತುಂಬಾ ವೇಗವಾಗಿ ಡಿಕ್ಕಿ ಹೊಡೆದಿದ್ದಾರೆ ಡಿಕ್ಕಿ ಹೊಡೆದ ರಭಸಕ್ಕೆ ಲಾರಿ ಚಾಲಕನ ಕಿವಿಗೆ ಹೊಡೆತ ಬಿದ್ದು ಅಸ್ತವೆಸ್ತವಾಗಿದ್ದಾನೆ ಜೊತೆಗೆ ಅವನ ಜೊತೆಗೆ ಕಿರಣ ಹಾಗು ಸಿದ್ದರಾಮ ಎಂಬ ಇಬ್ಬರು ಸಹಾಯಕರು ಇದ್ದರೂ ಅವರಿಗೂ ತೀವ್ರಗಾಯಗಳಾಗಿವೆ ಗಾಯಾಳುಗಳಿಗೆ ತಲೆ, ಕೈ,ಕಿವಿ ಹಾಗೂ ಎದೆ ಭಾಗದಲ್ಲಿ ಗಂಭೀರಗಾಯಗಳಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ.
ಈ ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದ್ದ ಬಸವರಾಜ ಆಸೆಂಗಪ್ಪ ಹುಳ್ಯಲ್ ಎಂಬುವ ವ್ಯಕ್ತಿ ಸವಣೂರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿ
ನ ತನಿಖೆ ನಡೆಸುತ್ತಿದ್ದಾರೆ.

: ವರದಿ
ಪ್ರಮೋದ್ ಜನಗೇರಿ
ಹಾನಗಲ್ ತಾಲೂಕ್ ಆಲದಕಟ್ಟಿ
ತಾಲೂಕ್ ನ್ಯೂಸ್ .ಹಾವೇರಿ
6360821691

Related posts