ಸುದ್ದಿ 

ಸವಣೂರಿನಲ್ಲಿ ಎರಡು ಬೈಕ್‌ಗಳ ನಡುವೆ ಡಿಕ್ಕಿ : ಒಬ್ಬರಿಗೆ ಗಾಯ

Taluknewsmedia.com

ಆಗಸ್ಟ್ 9 ನೆಯ ತಾರಿಕಿನಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಸವಣೂರ ಪಟ್ಟಣದ ಹಳೆ ಪುರಸಭೆ ಕಾರ್ಯಾಲಯದ ಎದುರು ಎರಡು ಮೋಟಾರ್‌ಸೈಕಲ್‌ಗಳ ನಡುವೆ ಮಾರಾ ಮಾರಿ ಡಿಕ್ಕಿ ಸಂಭವಿಸಿದೆ. ಮಾಹಿತಿಯ ಪ್ರಕಾರ, ಮೊದಲನೆ ಬೈಕ್ ಸವಾರನಾದ ಮಂಜು ಕಲ್ಲಪ್ಪ ಸದರ್ ತನ್ನ ಕೆಎ-27/ಇಟಿ-6384 ನಂಬರಿನ ಬೈಕ್‌ನ್ನು ಸವಣೂರ ಮಾರುಕಟ್ಟೆಯಿಂದ ಪೊಲೀಸ್ ಠಾಣೆ ಕಡೆಗೆ ನಿರ್ಲಕ್ಷ್ಯವಾಗಿ ಹಾಗೂ ವೇಗವಾಗಿ ಚಲಾಯಿಸುತ್ತಿದ್ದಾನೆ. ಇದೇ ವೇಳೆ, ಎರಡನೇ ಬೈಕ್ ಸವಾರನಾದ ಸಿದ್ದಯ್ಯ ಹಬ್ಬುರ್ಮಟ್ ತನ್ನ ಕೆಎ-27/ವೈ-3811 ನಂಬರಿನ ಬೈಕ್‌ನ್ನು ಹಳೆ ಪುರಸಭೆ ಕಚೇರಿಯಿಂದ ರಸ್ತೆಯತ್ತ ನಿರ್ಲಕ್ಷ್ಯವಾಗಿ ಹಾಗೂ ವೇಗವಾಗಿ ಚಲಾಯಿಸಿಕೊಂಡು ಬಂದಿದ್ದಾನೆ ಇಬ್ಬರು ನಿರ್ಲಕ್ಷ್ಯದಿಂದ ವಾಹನ ಚಲಾಯಿಸುತ್ತಿದ್ದರಿಂದ ರಸ್ತೆಯಲ್ಲಿ ಎರಡೂ ಬೈಕ್‌ಗಳ ನಡುವೆ ಮಾರ ಮಾರಿ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ಸಿದ್ದಯ್ಯ ರಾಚಯ್ಯ ಗಬ್ಬರ್ಮಟ್ ಎನ್ನುವ ವ್ಯಕ್ತಿಗೆ ಗಾಡಿಡಿಕ್ಕಿ ಹೊಡೆದ ರಭಸಕ್ಕೆ ಪೆಟ್ಟುಗಳಾಗಿವೆ
ಈ ಕುರಿತು ಅದನ್ನು ಪ್ರತ್ಯಕ್ಷವಾಗಿ ನೋಡಿದ್ದ ಶಿವಯ್ಯ ಪಕ್ಕಿರಯ್ಯ ಹಿರೇಮಠ್ ಎಂಬುವವರು ಸವಣೂರು ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

: ವರದಿ
ಪ್ರಮೋದ್ ಜನಗೇರಿ
ಹಾನಗಲ್ ತಾಲೂಕ್ ಆಲದಕಟ್ಟಿ
ತಾಲೂಕ್ ನ್ಯೂಸ್ .ಹಾವೇರಿ
6360821691

Related posts