ಸುದ್ದಿ 

ಸವಣೂರಿನ ಬಳಿ ಬೈಕ್ ವ್ಯಕ್ತಿಗೆ ಡಿಕ್ಕಿ ಆಕ್ಸಿಡೆಂಟ್ :

Taluknewsmedia.com

ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ತೆವರಮೆಳಹಳ್ಳಿ ಕ್ರಾಸ್ ನ ಬಳಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಮೇಲೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಬೈಕ್ ಸವಾರ ಡಿಕ್ಕಿ ಹೊಡೆದಿರುವ ಘಟನೆ.

ದಿನಾಂಕ: 16-08-2025 ರಂದು ಸಂಜೆ 6-30 ಗಂಟೆ ಸುಮಾರಿಗೆ ತೆವರಮೆಳಹಳ್ಳಿ ಕ್ರಾಸ್ ಕಡೆಯಿಂಧ ತೆವರಮೆಳಹಳ್ಳಿ ಗ್ರಾಮದ ಕಡೆಗೆ ಹೋಗಿರುವ ರಸ್ತೆಯಲ್ಲಿ ಮೋಟರ್ ಸೈಕಲ್ ನಂಬರ ಕೆ.ಎ. 27 ಇಎಸ್ 3282 ನೇದ್ದರ ಸವಾರ ಪ್ರಶಾಂತ ಶೇಖಪ್ಪ ದೇಸಾಯಿ ಸಾ|| ತೆವರಮೆಳಹಳ್ಳಿ ಈತನು ತನ್ನ ಮೋಟಾ‌ರ್ ಸೈಕಲ್ ನ್ನು ತೆವರಮೆಳಹಳ್ಳಿ ಕ್ರಾಸ್ ಕಡೆಯಿಂಧ ತೆವರಮೆಳಹಳ್ಳಿ ಗ್ರಾಮದ ಕಡೆಗೆ ವೇಗವಾಗಿ ಅಜಾಗರೂಕತೆಯಿಂದ ನಡೆಸಿಕೊಂಡು ಹೋಗಿ ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಗಿರೀಶ ಕಿತ್ತೂರಮಠ ಎನ್ನುವ ವ್ಯಕ್ತಿಗೆ ಹಿಂದಿನಿಂದ ಡಿಕ್ಕಿ ಮಾಡಿದ್ದು ಡಿಕ್ಕಿ ಮಾಡಿದ ಪರಿಣಾಮ ಗಿರೀಶನಿಗೆ ತಲೆಗೆ, ಮುಖಕ್ಕೆ, ಹಣೆಗೆ ಗಾಯಗಳು ಆಗಿದ್ದು ಜೊತೆಗೆ ಬೈಕ್ ಸವಾರನಾದ ಪ್ರಶಾಂತ ದೇಸಾಯಿ ಈತನಿಗೂ ಸಹಿತ ತಲೆಗೆ, ಮುಖಕ್ಕೆ ಗಾಯಪಡಿಸಿಕೊಂಡಿರುತ್ತಾನೆ ಈ ಘಟನೆಯನ್ನು ನೋಡಿದ ವ್ಯಕ್ತಿ ಮತ್ತು ಗಿರೀಶ್ ಗೆ ಆಪ್ತರು ಆದ ಅರುಣ್ ಶಿವಪ್ಪ ಕೊಪ್ಪದ ಎನ್ನುವವರು ಸವಣೂರು ಪೊಲೀಸರಿಗೆ ನಡೆದ ಸಂಪೂರ್ಣ ಮಾಹಿತಿ ತಿಳಿಸಿ ಠಾಣೆಯಲ್ಲಿ ದೂರು ನೀಡಿದ್ದಾರೆ ಇದರ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಜೊತೆಗೆ ಅಜಾಗರೂಕತೆಯಿಂದ ಮದ್ಯ ಸೇವನೆ ಮಾಡಿ ಗಾಡಿ ಓಡಿಸುವವರ ಸಂಖ್ಯೆ ಹೆಚ್ಚಾಗಿದ್ದು ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಜನರಲ್ಲಿ ಭರವಸೆ ಮೂಡಿಸಿದ್ದಾರೆ

: ವರದಿ
ಪ್ರಮೋದ್ ಜನಗೇರಿ
ಹಾನಗಲ್ ತಾಲೂಕ್ ಆಲದಕಟ್ಟಿ
ತಾಲೂಕ್ ನ್ಯೂಸ್ .ಹಾವೇರಿ
6360821691

Related posts