ಹಾನಗಲ್ ಹತ್ತಿರದ ಡೊಳ್ಳೇಶ್ವರ ವ್ಯಕ್ತಿ ಕಾಣೆ
ಆಗಸ್ಟ್ 18 ನೇ ತಾರೀಕು ಹಾನಗಲ್ ಸಮೀಪದ ಡೊಳ್ಳೇಶ್ವರ ಗ್ರಾಮದ 60 ವರ್ಷದ ಹುಲ್ಲಪ್ಪ ನಿಂಗಪ್ಪ ಡೊಳ್ಳೇಶ್ವರ ಎನ್ನುವ ವ್ಯಕ್ತಿ ಕಾಣೆಯಾದ ಪ್ರಕರಣ
ಕಾಣೆಯಾದ ಹುಲ್ಲಪ್ಪ ನಿಂಗಪ್ಪ ಡೊಳ್ಳೇಶ್ವರ ಅವರು ಗುತ್ತೆವ್ವಾ ನಿಂಗಪ್ಪ ಕಚಾವೇರ ಎನ್ನುವ ವರದಿಗಾರರ ಅಣ್ಣ ಹುಲ್ಲಪ್ಪ ನಿಂಗಪ್ಪ ಡೊಳ್ಳೇಶ್ವರ ವಯಾ: 60 ವರ್ಷ. ಜಾತಿ: ಹಿಂದೂ ಗಂಗಾಮತ, ಉದ್ಯೋಗ: ಬಿಕ್ಷೆ ಬೇಡುವುದು, ಸಾ: ಗೊಂದಿ. ತಾ: ಹಾನಗಲ್ಲ ಇವನು ದಿನಾಂಕ: 18-07-2025 ರಂದು ಮುಂಜಾನೆ 10-00 ಘಂಟೆಯ ಸುಮಾರಿಗೆ ತನ್ನ ವಾಸದ ಮನೆಯಿಂದ ಹಾನಗಲ್ ಗೆ ಬಿಕ್ಷೆ ಮಾಡಿಕೊಂಡು ಬರುತ್ತೇನೆ ಅಂತಾ ಹೇಳಿ ಹೋಗಿ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇವನು ಈವರೆಗೂ ಹುಡುಕಾಡಲಾಗಿ ಸಿಕ್ಕಿರುವದಿಲ್ಲ ಕಾರಣ ತನ್ನ ಅಣ್ಣ ಹುಲ್ಲಪ್ಪ ಈತನನ್ನು ಹುಡುಕಿ ಕೊಡುವಂತೆ ವರದಿಗಾರರು ಆಡುರು ಪೊಲೀಸ ಠಾಣೆಗೆ ದೂರನ್ನು ನೀಡಿದ್ದು ಪೊಲೀಸರು ವ್ಯಕ್ತಿಯನ್ನು ಹುಡುಕಲು ಕಾರ್ಯನಿರತರಾಗಿದ್ದಾರೆ.
: ವರದಿ
ಪ್ರಮೋದ್ ಜನಗೇರಿ
ಹಾನಗಲ್ ತಾಲೂಕ್ ಆಲದಕಟ್ಟಿ
ತಾಲೂಕ್ ನ್ಯೂಸ್ .ಹಾವೇರಿ
6360821691

