ಗ್ರಾಮ ಭಾರತಿ ಟ್ರಸ್ಟ್ ವತಿಯಿಂದ ವಿಶ್ವ ಆತ್ಮ ಹತ್ಯ ತಡೆ ದಿನ
ಗ್ರಾಮ ಭಾರತಿ ಟ್ರಸ್ಟ್ ವತಿಯಿಂದ ವಿಶ್ವ ಆತ್ಮ ಹತ್ಯ ತಡೆ ದಿನ
ನಗರದ ಗುರುಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ತಾಲೂಕು ಆಡಳಿತ ಸಹಕಾರದೊಂದಿಗೆ ಗ್ರಾಮಭಾರತಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನ್ಯಾ. ಶ್ರೀ ನಟೇಶ್ ಜಿಲ್ಲಾ ಸದಸ್ಯ ಕಾರ್ಯದರ್ಶಿಗಳು ಕಾನೂನು ಸೇವೆಗಳ ಪ್ರಾಧಿಕಾರ ಕೋಲಾರ ಪ್ರತಿ ವರ್ಷ ಸುಮಾರು 9 ಲಕ್ಷ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿದ್ದು ಇದೊಂದು ಆತಂಕಕಾರಿ ವಿಷಯ ಇದನ್ನು ತಡೆಗಟ್ಟಲು ಪ್ರತಿಯೊಬ್ಬ ನಾಗರಿಕನು ಸಂವಿಧಾನ ಬದ್ಧ ಕರ್ತವ್ಯಗಳಲ್ಲೂ ಒಂದಾಗಿದ್ದು ಇದಕ್ಕೆ ಪ್ರತಿಯೊಬ್ಬನಾಗರಿಕನು ಕೈಜೋಡಿಸಬೇಕೆಂದು ತಿಳಿಸಿದರು.
ತಮ್ಮ ಸುತ್ತು ಮುತ್ತಲ ಪ್ರದೇಶದಲ್ಲಿ ನಡೆಯುವ ಕಾನೂನುಬಾಹಿರ ಚಟುವಟಿಕೆಗಳು, ಮಾದಕ ವಸ್ತುಗಳು ಸಂಗ್ರಹಣೆ ಮತ್ತು ಮಾರಾಟ, ಪರಿಸರದ ಮೇಲೆ ಆಗುತ್ತಿರುವ ಅಕ್ರಮಗಳ ಬಗ್ಗೆ ಜಾಗೃತಿ ವಹಿಸಿ ಆರೋಗ್ಯವಂತ ಸಮಾಜ ನಿರ್ಮಾಣದ ರೂವಾರಿಗಳಾಗಬೇಕು ಆಗಲೇ ಸುಸಂಸ್ಕೃತ ಸಮಾಜ ತಲೆಯೆತ್ತಲು ಸಾಧ್ಯವಾಗಲಿದ್ದು ಈ ಬಗ್ಗೆ ಯುವಜನರು, ವಿದ್ಯಾರ್ಥಿಗಳು ಇಡೀ ಸಮಾಜವನ್ನು ಜಾಗೃತಗೊಳಿಸಬೇಕು ಎಂದು ಕರೆ ನೀಡಿದರು.
ಭಾರತ ಸರಕಾರ ಸಂಕಲ್ಪಸಿರುವಂತೆ ಪ್ರತಿ ವ್ಯಕ್ತಿ ತನ್ನ ತಾಯಿ ಹೆಸರಿನಲ್ಲಿ ಈ ತಿಂಗಳಾಂತ್ಯಕ್ಕೆ 80 ಕೋಟಿ, ಮಾರ್ಚ್ ಅಂತ್ಯಕ್ಕೆ 140 ಕೋಟಿ ಸಸಿ ನೆಟ್ಟು ಬೆಳೆಸುವ ಜವಾಬ್ದಾರಿಯನ್ನು ನೀಡಿದ್ದು ಈ ಅಭಿಯಾನದಲ್ಲಿ ದೇಶದ ಪ್ರತಿ ನಾಗರಿಕನು ಪಾಲ್ಗೊಳ್ಳಬೇಕಾದ ಜವಾಬ್ದಾರಿ ಇದೆ, ಅದೇ ರೀತಿಹುಟ್ಟುಹಬ್ಬಕ್ಕೆ ಒಂದು ಸಸಿಯನ್ನು ನೆಟ್ಟು ಹೆಮ್ಮರವಾಗಿ ಬೆಳೆಸುವ ಸಂಕಲ್ಪವನ್ನು ವಿದ್ಯಾರ್ಥಿಗಳು ಸ್ವೀಕರಿಸಬೇಕೆಂದು ತಿಳಿಸಿದರು.
ತಾಲೂಕು ದಂಡಾಧಿಕಾರಿಗಳು ವಿ. ಗೀತಾ ರವರು ಮಾತನಾಡಿ, ವಿದ್ಯಾರ್ಥಿಗಳಿಗೆ ಹಲವಾರು ವಿಷಯಗಳು ದುಶ್ಚಟ್ಟಗಳಿಗೆ ಬಲಿಯಾಗಬಾರದು, ಅಂಕಗಳಿಸುವುದೇ ಮಾನದಂಡವಾಗಬಾರದು, ಸಜ್ಜನ ಪ್ರಜೆಗಳಾಗಿ ಸಮಾಜದಲ್ಲಿ ಬಾಳಿ ಬದುಕುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ಉನ್ನತ ಶಿಕ್ಷಣ ಪದವಿ ಪಡೆದವರೇ ದೇಶದ್ರೋಹ ಪ್ರಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಪ್ರತಿ ವರ್ಷ ಸುಮಾರು 9 ಲಕ್ಷ ಆತ್ಮಹತ್ಯೆ ಪ್ರಕರಣಗಳು ವರದಿ, ಆತಂಕಕಾರಿ ರಾಗಿರುವುದು ದುರ್ದೈವದ ಸಂಗತಿ ಈ ಬಗ್ಗೆ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಗಳು ಆಗಬೇಕಾಗಿದೆ. ಅಂಕವೇ ಮೌಲ್ಯವಾಗಬಾರದು. ಮಕ್ಕಳು ಪಾಲಕರಿಗೆ ಮತ್ತು ಸಮಾಜಕ್ಕೆ ಶ್ರೇಷ್ಟರಾಗಬೇಕು ಎಂದು ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ಆನಂದ್ ತಿಳಿಸಿದರು.
ಗ್ರಾಮ ಭಾರತಿ ಟ್ರಸ್ಟ್ ಅಧ್ಯಕ್ಷರು ಎಂ ಬಿ. ಕೃಷ್ಣಮೂರ್ತಿ ಮಾಲೂರು ಫುಡ್ ಬ್ಯಾಂಕ್ ಸಂ ಯೋಜಕ ಪ್ರದೀಪ್, ಸಿಗೆನಹಳ್ಳಿ ಗಂಗಾಧರ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಉಪನ್ಯಾಸಕರು ಜೆಜೆ. ನಾಗರಾಜ್ ಮತ್ತು ಸಿಬ್ಬಂದಿ ಇದ್ದರು.

