ಸವಣೂರಿನ, ಹೆಸರೂರು ಗ್ರಾಮದಲ್ಲಿ ವ್ಯಕ್ತಿ ಮೇಲೆ ಕೊಲೆ ಬೆದರಿಕೆ ಏಫ್ ಐ ಆರ್ ದಾಖಲು
ಸವಣೂರಿನ, ಹೆಸರೂರು ಗ್ರಾಮದಲ್ಲಿ ವ್ಯಕ್ತಿ ಮೇಲೆ ಕೊಲೆ ಬೆದರಿಕೆ ಏಫ್ ಐ ಆರ್ ದಾಖಲು
ಹಾವೇರಿ ಜಿಲ್ಲೆ ಸವಣೂರು ತಾಲೂಕ್ ಹೆಸರು ಗ್ರಾಮದಲ್ಲಿ ಎರಡು ಗುಂಪುಗಳ ಮದ್ಯ ಜಗಳವಾಗಿ ಕೊಲೆ ಬೆದರಿಕೆ ಹಾಕಿರುವ ಘಟನೆ ಸಂಭವಿಸಿದೆ.
ಪೊಲೀಸರಿಗೆ ಕಂಪ್ಲೇಂಟ್ ನೀಡಿದ ಸಿದ್ದಾರೂಢ ಅಯ್ಯಪ್ಪ ಸುಣಗಾರ ಎನ್ನುವ ವ್ಯಕ್ತಿಯೂ ದಿನಾಂಕ 07-09-2025 ರಂದು ಹೆಸರೂರ ಗ್ರಾಮದ ಗೋಮಾಳ(ಖಾಲಿ) ಜಮೀನಿನಲ್ಲಿ ಇರುವ ಮಣ್ಣನ್ನು ಹೇರಲು ಹೋದಾಗ ಆ ಸಮಯದಲ್ಲಿ ಅದೇ ಊರಿನ ಇನ್ನೊಂದು ಗ್ಯಾಂಗ್ ಜೊತೆ ಜಗಳವಾಗಿದ್ದು ನಂತರ ಅದೇ ವಿಷಯಕ್ಕೆ ಸಂಬಂದಪಟ್ಟಂತೆ ದಿನಾಂಕಃ 07-09-2025 ರಂದು ಬೆಳಿಗೆ 9-40 ಗಂಟೆಯ ಸುಮಾರಿಗೆ ಹೆಸರೂರ ಗ್ರಾಮದ ಅರಳಿಮರದ ಚಹ ಅಂಗಡಿ ಹತ್ತಿರ ಇದರಲ್ಲಿ ನಮೂದ ಮಾಡಿದ ಆರೋಪಿತರಾದ ಪ್ರಕಾಶ್ ಲಮಾಣಿ,ಚಂದ್ರ ಲಮಾಣಿ,ಲಾಚಪ್ಪ ಲಮಾಣಿ ಇವರು ಸಿದ್ದಾರೂಢ ಅಯ್ಯಪ್ಪ ಸುಣಗಾರ ಹಾಗೂ ಅವರ ಕೆಲ ಸಹೋದರರಿಗೆ ಅವಾಚ್ಯವಾಗಿ ಲೆ ಬೊಸಡಿಮಕ್ಕಳ ನಿಮ್ಮ ಸುಣಗಾರ ಜಾತಿಯ ಹಡಾ ನಿಮ್ಮ ಕೊಂದ ಬಿಡ್ತೀವಿ ನಿಮ್ಮ ಮನೆಯಲ್ಲಿ ಯಾರನರ ಒಬ್ಬರನ್ನ ಕೊಂದ ತೀರುತ್ತೇವಿ ನಿಮ್ಮನ್ನು ಜೀವಂತ ಬಿಡಲ್ಲಾ ಅಂತಾ ಅಂದು ಮನೋಜ ಸಿದ್ದಾರೂಢ ಸುಣಗಾರ, ನಾಗಪ್ಪ ವೀರಬಸಪ್ಪ ಸುಣಗಾರ, ವಿಕಾಸ ತಾಯಿ ಲಕ್ಷ್ಮವ್ವ ಸುಣಗಾರ, ಕೃಷ್ಣಪ್ಪ ಅಯ್ಯಪ್ಪ ಸುಣಗಾರ ಇವರಿಗೆ ಬಡಿಗೆ, ತೆಂಗಿನಕಾಯಿ, ಕಲ್ಲಿನಿಂದ ಹೊಡಿ, ಬಡಿ ಮಾಡಿದ್ದು ಅಲ್ಲದೇ ಅದೇ ದಿವಸ 10-20 ಗಂಟೆ ಸುಮಾರಿಗೆ ನಮೂದ ಮಾಡಿದ ಆರೋಪಿತರು ತಮ್ಮ ತಮ್ಮ ಕೈಯಲ್ಲಿ ಚಪ್ಪಲಿ, ಕೋಲು, ಬಡಿಗೆ ಹಿಡಿದುಕೊಂಡು ದೂರುದಾರನ ಮನೆಯನ್ನು ಅಕ್ರಮವಾಗಿ ಪ್ರವೇಶಿಸಿ ಹಲ್ಲೆ ಮಾಡಿ, ಅವಾಚ್ಯವಾಗಿ ಬೈದಾಡಿ, ಜೀವಬೆದರಿಕೆ ಹಾಕಿದ್ದಾರೆ ಇದನ್ನು ಸಿದ್ದಾರೂಢ ಅಯ್ಯಪ್ಪ ಸುಣಗಾರ ಇವರು ಸವಣೂರು ಪೊಲೀಸರಿಗೆ ಮಾಹಿತಿ ತಿಳಿಸಿ ಸವಣೂರು ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದಾರೆ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ.
: ವರದಿ
ಪ್ರಮೋದ್ ಜನಗೇರಿ
ಹಾನಗಲ್ ತಾಲೂಕ್ ಆಲದಕಟ್ಟಿ
ತಾಲೂಕ್ ನ್ಯೂಸ್ .ಹಾವೇರಿ
6360821691
https://taluknewsmedia.com/PRAMODJANAGERI.html

