ಸುದ್ದಿ 

ಟ್ರ್ಯಾಕ್ಟರ್ ಗೆ ಲಾರಿ ಡಿಕ್ಕಿ ಓರ್ವ ವ್ಯಕ್ತಿ ಸಾವು

Taluknewsmedia.com

ಟ್ರ್ಯಾಕ್ಟರ್ ಗೆ ಲಾರಿ ಡಿಕ್ಕಿ ಓರ್ವ ವ್ಯಕ್ತಿ ಸಾವು

ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಏನ್ ಹೆಚ್ ಹೈವೆ ಬಿಸನಹಳ್ಳಿ ಲ್ಲಿ ಹೋಗುತ್ತಿರುವ ಟ್ರ್ಯಾಕ್ಟರ್ ಗೆ ಲಾರಿ ಡಿಕ್ಕಿ ಹೊಡೆದ ದುರಂತ ಘಟನೆ ನಡೆದಿದೆ

ಇದರಲ್ಲಿಯ ದೂರುದಾರ ವ್ಯಕ್ತಿಆದ ಗಂಗಾಧರ ಮಲ್ಲಪ್ಪ ಕೋರಿ ಹುಬ್ಬಳ್ಳಿ ಕಡೆಯಿಂದ ಹಾವೇರಿ ಕಡೆಗೆ ತಾನು ಚಲಾಯಿಸುತ್ತಿದ್ದ ಟ್ರಾಕ್ಟರ್ ಇಂಜಿನ ನಂ: ಕೆಎ-35/ಟಿಬಿ-2995 ನೇದಕ್ಕೆ ಒಂದು ಟ್ರೈಲರ್ ಜೋಡಿಸಿಕೊಂಡು ಟ್ರಾಕ್ಟ‌ರ್ ಇಂಜಿನದ ಮಟಗಡ್ ಮೇಲೆ ಇದರಲ್ಲಿಯ ಮೃತನಾದ ಹಾಲೇಶ ಮತ್ತು ಗಾಯಾಳು ಆದ ಕುಂಬಳ ಚಂದ್ರಪ್ಪ ಗುಮ್ಮಗೊಳ್ ಇವರಿಗೆ ಕೂಡ್ರಿಸಿಕೊಂಡು ದಿನಾಂಕ: 25-08-2025 ರಂದು ಸಾಯಂಕಾಲ 7-30 ಗಂಟೆ ಸುಮಾರಿಗೆ ಹುಬ್ಬಳ್ಳಿ ಕಡೆಯಿಂದ ಹಾವೇರಿ ಕಡೆಗೆ ಎನ್.ಎಚ್-48 ರಸ್ತೆಯ ಬಿಸನಹಳ್ಳಿ, ಬ್ರಿಡ್ಜ್ ಮೇಲೆ ಹೋಗುತ್ತಿದ್ದಾಗ ಇದರಲ್ಲಿಯ ಆರೋಪಿಆದ ಸುರೇಶ್ ಬಿಮಣ್ಣ ತಾನು ಚಲಾಯಿಸುತ್ತಿದ್ದ ಟಾಟಾ ಇಂಟ್ರಾ ಕಂಪನಿಯ ಗುಡ್ಸ್ ಟ್ರಕ್ ವಾಹನವನ್ನಾ ಅತೀ ಜೋರಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಟ್ರ್ಯಾಕ್ಟರನ ಟ್ರೈಲರ್ ಬಲಭಾಗದ ಹಿಂದುಗಡೆ ಟಚ್ ಮಾಡಿ ಟ್ರಾಕ್ಟ‌ರ್ ಇಂಜಿನದ ಬಲಭಾಗದ ಬಟನ್ ಗಾಲಿಗೆ ಡಿಕ್ಕಿ ಮಾಡಿ ಇದರಲ್ಲಿಯ ದೂರುದಾರ ವ್ಯಕ್ತಿ ಗಂಗಾಧರ್ ಕೋರಿ ಮತ್ತು ಕುಂಬಳ ಚಂದ್ರಪ್ಪ ಗುಮ್ಮಗೋಲ್ ಇವನಿಗೆ ತೀವ್ರ ಗಾಯ ಪಡಿಸಿದ್ದು ಅಲ್ಲದೇ ಹಾಲೇಶ ಇವನಿಗೆ ಭಾರಿ ಗಾಯ ಪಡಿಸಿದ್ದಾನೆ ಹಾಲೇಶ್ ಇವರು ರಾತ್ರಿ 11-00 ಗಂಟೆಗೆ ನಡೆದ ಆಕ್ಸಿಡೆಂಟ್ ಘಟನೆಯಿಂದಾಗಿ ಮರಣ ಹೊಂದಿದ್ದಾರೆ ಈ ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದ್ದ ಪ್ರತ್ಯಕ್ಷದರ್ಶಿ ಗಂಗಾಧರ್ ಮಲ್ಲಪ್ಪ ಕೋರಿ ಇವರು ಶಿಗ್ಗಾಂವ ತಾಲೂಕಿನ ಬಂಕಾಪುರ ಪೊಲೀಸರಿಗೆ ಸ್ವಲ್ಪ ತಡವಾಗಿ ಮಾಹಿತಿ ತಿಳಿಸಿ ಬಂಕಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಪೊಲೀಸರು ಟ್ರಕ್ ಚಾಲಕನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮುಂದುವರೆಸಿದ್ದಾರೆ.

: ವರದಿ
ಪ್ರಮೋದ್ ಜನಗೇರಿ
ಹಾನಗಲ್ ತಾಲೂಕ್ ಆಲದಕಟ್ಟಿ
ತಾಲೂಕ್ ನ್ಯೂಸ್ .ಹಾವೇರಿ
6360821691
https://taluknewsmedia.com/PRAMODJANAGERI.html

Related posts