ಸಿನೆಮಾ ಸುದ್ದಿ 

ಅಕ್ಟೋಬರ್ 31ರಂದು ‘ಕೋಣ’ ಚಿತ್ರ ರಾಜ್ಯವ್ಯಾಪಿ ಪ್ರದರ್ಶನಕ್ಕೆ ಸಜ್ಜು

Taluknewsmedia.com

ಅಕ್ಟೋಬರ್ 31ರಂದು ‘ಕೋಣ’ ಚಿತ್ರ ರಾಜ್ಯವ್ಯಾಪಿ ಪ್ರದರ್ಶನಕ್ಕೆ ಸಜ್ಜು

ತನುಷಾ ಕುಪ್ಪಂಡ ನಟನೆಯ ಮತ್ತು ನಿರ್ಮಾಣದ ‘ಕೋಣ’ ಸಿನಿಮಾ ಟ್ರೇಲರ್‌ ಮೂಲಕ ಕುತೂಹಲ ಮೂಡಿಸಿದೆ

ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ನಟಿ ತನುಷಾ ಕುಪ್ಪಂಡ ನಾಯಕಿಯಾಗಿ ಹಾಗೂ ನಿರ್ಮಾಪಕಿಯಾಗಿ ಕಾಣಿಸಿಕೊಂಡಿರುವ ‘ಕೋಣ’ ಚಿತ್ರ ಅಕ್ಟೋಬರ್ 31ರಂದು ರಾಜ್ಯಾದ್ಯಂತ ಪ್ರದರ್ಶನಗೊಳ್ಳಲಿದೆ. ನಟ ಕೋಮಲ್ ಕುಮಾರ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ.

ಚಿತ್ರದ ಟ್ರೇಲರ್‌ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಸೆನ್ಸಾರ್ ಮಂಡಳಿಯಿಂದ U/A ಪ್ರಮಾಣಪತ್ರವನ್ನು ಪಡೆದಿದೆ. ಚಿತ್ರವನ್ನು ಡಾರ್ಕ್ ಕಾಮಿಡಿ ಶೈಲಿಯಲ್ಲಿ ನಿರ್ಮಿಸಲಾಗಿದೆ ಎಂದು ತಂಡ ತಿಳಿಸಿದೆ.

ಚಿತ್ರದಲ್ಲಿ ಕೀರ್ತಿರಾಜ್, ರಿತ್ವಿ ಜಗದೀಶ್, ರಾಘು ರಾಮನಕೊಪ್ಪ, ವಿಜಯ್ ಚೆಂಡೂರ್, ಮಂಜು ಪಾವಗಡ, ಕುರಿ ಸುನಿಲ್, ನಮ್ರತಾ ಗೌಡ, ವಿನಯ್ ಗೌಡ ಸೇರಿದಂತೆ ಅನೇಕ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕ ಹರಿಕೃಷ್ಣ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದು, ರಾಜ್ಯ ಪ್ರಶಸ್ತಿ ವಿಜೇತ ನಾಗೇಶ್ ಎನ್ ಸಹ ನಿರ್ದೇಶಕರಾಗಿ ಸಹಕಾರ ನೀಡಿದ್ದಾರೆ. ನೈಜ ಘಟನೆಯ ಆಧಾರದಲ್ಲಿ ಕಥೆ ರೂಪುಗೊಂಡಿದೆ.

ಸಂಗೀತವನ್ನು ಶಶಾಂಕ್ ಶೇಷಗಿರಿ, ಛಾಯಾಗ್ರಹಣವನ್ನು ವೀನಸ್ ನಾಗರಾಜಮೂರ್ತಿ, ಸಂಕಲನವನ್ನು ಉಮೇಶ್ ಆರ್.ಬಿ., ಸಾಹಸ ಸಂಯೋಜನೆಯನ್ನು ವಿನೋದ್ ಕುಮಾರ್, ನೃತ್ಯ ಸಂಯೋಜನೆಯನ್ನು ಮುರುಗ ಮಾಸ್ಟರ್, ಸಂಭಾಷಣೆಯನ್ನು ಶಶಿಕುಮಾರ್ ಅವರು ನಿರ್ವಹಿಸಿದ್ದಾರೆ.

ಕಾಮಿಡಿ, ಸಸ್ಪೆನ್ಸ್ ಹಾಗೂ ನೈಜ ಘಟನೆಗಳ ಸಮ್ಮಿಶ್ರಣವಾದ ‘ಕೋಣ’ ಸಿನಿಮಾ ಪ್ರೇಕ್ಷಕರಲ್ಲಿ ಹೊಸ ರೀತಿಯ ಅನುಭವ ನೀಡಲಿದೆ ಎಂಬ ನಿರೀಕ್ಷೆ ಇದೆ.

Related posts