ರಾಜಕೀಯ ಸುದ್ದಿ 

ದೆಹಲಿಗೆ ಆಗಮಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮೊದಲ ಪ್ರತಿಕ್ರಿಯೆ

Taluknewsmedia.com

ದೆಹಲಿಗೆ ಆಗಮಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮೊದಲ ಪ್ರತಿಕ್ರಿಯೆ

“ನಾನು ಮೊದಲು ಒಂದು ಖಾಸಗಿ ಮದುವೆ ಕಾರ್ಯಕ್ರಮಕ್ಕಾಗಿ ದೆಹಲಿಗೆ ಬಂದಿದ್ದೇನೆ. ಲೀ ಮೆರಿಡಿಯನ್ ಹೋಟೆಲ್‌ನಲ್ಲಿ ನನ್ನೊಂದಿಗೆ ಜೈಲಿನಲ್ಲಿ ಕೆಲಸ ಮಾಡಿದ ಒಬ್ಬ ಅಧಿಕಾರಿಯ ಮಗನ ಮದುವೆ ಇದೆ. ಅವರು ನನಗೆ ಅಗತ್ಯ ಸಂದರ್ಭದಲ್ಲಿ ಸಾಕಷ್ಟು ಸಹಾಯಮಾಡಿದ ಕಾರಣ, ಈ ಕಾರ್ಯಕ್ರಮಕ್ಕೆ ಹಾಜರಾಗುವುದು ನನ್ನ ಕರ್ತವ್ಯವೂ ಹೌದು.

ಇದರ ಬಳಿಕ 14ನೇ ತಾರೀಖಿನ ‘ವೋಟ್ ಫಾರ್ ಸೂರಿ’ ರ್ಯಾಲಿಯ ವ್ಯವಸ್ಥೆಗಳನ್ನೂ ನೋಡಿಕೊಳ್ಳಬೇಕು. ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಅವರಿಗೆ ವಸತಿ, ಆಹಾರ, ಸಾರಿಗೆ—ಟ್ರೈನ್‌ದಿಂದ ಬರುವವರು, ಬಸ್‌ ಕನೆಕ್ಷನ್, ಎಲ್ಲೆಲ್ಲಿ ತಂಗಬೇಕು—ಇವುಗಳನ್ನೆಲ್ಲ ಸಂಯೋಜಿಸುವ ಜವಾಬ್ದಾರಿ ನನ್ನ ಮೇಲೆ ಇದೆ. ಈ ಕಾರಣಕ್ಕಾಗಿ ಇಂದೇ ರಾತ್ರಿ ಕೆಲರೊಂದಿಗೆ ಸಭೆ ನಡೆಸಿ, ಅಗತ್ಯ ತಂಡಗಳನ್ನು ನಿಯೋಜಿಸಬೇಕಾಗಿದೆ.

ನಾಳೆ ಬೆಳಗ್ಗೆ ಕ್ಯಾಬಿನೆಟ್ ಸಭೆಯೂ ಇದೆ. ಕ್ಯಾಬಿನೆಟ್‌ ನಂತರ ಮಂತ್ರಿಗಳೊಂದಿಗೆ ಸಭೆ ನಡೆಸಿ, ಮುಂದಿನ ವಿಧಾನಸೌಧ ಅಧಿವೇಶನಕ್ಕೆ ತಯಾರಿ ಕುರಿತು ಚರ್ಚೆ ಮಾಡಬೇಕಿದೆ. ಆದ್ದರಿಂದ ನಾಳೆ ಬೆಳಗ್ಗೆ ಎಂಟು ಗಂಟೆಯ ಫ್ಲೈಟ್ ಮೂಲಕ ವಾಪಸ್ ಬರುತ್ತೇನೆ.

ಮುಖ್ಯಮಂತ್ರಿ ಬದಲಾವಣೆ ಕುರಿತು ಈಗ ಸತೀಶ್ ಜಾರ್ಕಿಹೊಳಿ ಅವರು ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ… ‘ಮುಖ್ಯಮಂತ್ರಿಯವರು ಯಾವತ್ತಾದರೂ ಸ್ಥಾನ ಬಿಡಲೇಬೇಕು, ಈಗ ಬಿಡ್ತಾರೋ, 30 ತಿಂಗಳ ನಂತರ ಬಿಡ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಬಿಡ್ತಾರೆ’ ಎಂದು ಅವರು ಹೇಳಿದ್ದಾರೆ. 30 ತಿಂಗಳು ಎಂದು ಒಂದು ಟೈಮ್‌ಲೈನ್ ಫಿಕ್ಸ್‌ ಮಾಡಿದ ರೀತಿಯಲ್ಲಿ ಮಾತನಾಡಿದ್ದಾರೆ. ಆದರೆ ಈ ವಿಷಯಕ್ಕೆ ನಾನು ಏನೂ ಹೇಳುವುದಿಲ್ಲ. ಮುಖ್ಯಮಂತ್ರಿಗಳು ಯಾರೊಂದಿಗೆ ಮಾತನಾಡುತ್ತಾರೆ, ಏನು ಮಾತನಾಡುತ್ತಾರೆ—ಅವರ ಪ್ರಶ್ನೆಗಳಿಗೆ ಅವರು ತಾವೇ ಉತ್ತರಿಸುತ್ತಾರೆ. ನಾನು ಯಾರಿಗೂ ಈ ವಿಷಯದಲ್ಲಿ ಪ್ರತಿಕ್ರಿಯೆ ನೀಡಲು ಮುಂದಾಗುವುದಿಲ್ಲ.”

Related posts