ಸುದ್ದಿ 

ರೇಣುಕಾಸ್ವಾಮಿ ಕೊಲೆ ಪ್ರಕರಣ – ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ಟ್ರಯಲ್ ಗಂಭೀರ ಹಂತಕ್ಕೆ

Taluknewsmedia.com

ರೇಣುಕಾಸ್ವಾಮಿ ಕೊಲೆ ಪ್ರಕರಣ – ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ಟ್ರಯಲ್ ಗಂಭೀರ ಹಂತಕ್ಕೆ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ನ್ಯಾಯಾಂಗ ಪ್ರಕ್ರಿಯೆ ಈಗ ಅಧಿಕೃತವಾಗಿ ವೇಗ ಪಡೆದುಕೊಂಡಿದ್ದು, ಟ್ರಯಲ್ ಹಂತದಲ್ಲಿ ದೊಡ್ಡ ಮಟ್ಟದ ಸಾಕ್ಷಿಗಳ ಪರಿಶೀಲನೆ ಆರಂಭವಾಗಲಿದೆ.

ಪ್ರಾಸಿಕ್ಯೂಷನ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 272 ಸಾಕ್ಷಿಗಳ ಬೃಹತ್ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಹಂತ ಹಂತವಾಗಿ ಎಲ್ಲರ ಹೇಳಿಕೆಗಳನ್ನು ದಾಖಲಿಸುವ ಕಾರ್ಯ ಮುಂದುವರಿಯಲಿದೆ.

ಸಾಕ್ಷಿಗಳ 10 ವಿಭಾಗಗಳ ವರ್ಗೀಕರಣ..

ಪ್ರಾಸಿಕ್ಯೂಷನ್ ಪುರಾವೆಗಳನ್ನು ಆಧರಿಸಿ ಸಾಕ್ಷಿಗಳನ್ನು ಕೆಳಗಿನ ಪ್ರಮುಖ ವಿಭಾಗಗಳಲ್ಲಿ ವಿಭಜಿಸಲಾಗಿದೆ:

ಪ್ರೈವೇಟ್ ಸಾಕ್ಷಿಗಳು: 100
ಐ witnessed: 2
ಭಾಗಶಃ ಪ್ರತ್ಯಕ್ಷ/ಸಾಂದರ್ಭಿಕ ಸಾಕ್ಷಿಗಳು: 5
ಮಹಜರ್ ಸಾಕ್ಷಿಗಳು: 62
FSL/CFSL ಸಿಬ್ಬಂದಿ: 15
ವೈದ್ಯರು: 1
ತಾಂತ್ರಿಕ ಸಾಕ್ಷಿಗಳು: 4
ಬ್ಯಾಂಕ್ ಅಧಿಕಾರಿಗಳು: 17
ಮ್ಯಾಜಿಸ್ಟ್ರೇಟ್‌ಗಳು: 2
ಪೊಲೀಸ್ ಅಧಿಕಾರಿಗಳು: 64

ಈ ಪಟ್ಟಿಯೇ ಪ್ರಕರಣದ ಗಂಭೀರತೆಯನ್ನು ಸೂಚಿಸುವಂತಿದ್ದು, ಪ್ರತಿ ವಿಭಾಗದಿಂದ ಅನೇಕ ಮುಖ್ಯ ಮಾಹಿತಿಗಳು ನ್ಯಾಯಾಲಯದ ಮುಂದಿಡಲಾಗಲಿದೆ.

ಪ್ರಮುಖ ಸಾಕ್ಷಿಗಳ ವಿವರ…

ಪ್ರಾಸಿಕ್ಯೂಷನ್ ಸಲ್ಲಿಸಿರುವ ಪಟ್ಟಿಯಲ್ಲಿ ಕೆಲವು ಪ್ರಮುಖ ಹೆಸರುಗಳೂ ಸೇರಿವೆ.

ದರ್ಶನ್ ಪತ್ನಿ ವಿಜಯಲಕ್ಷ್ಮಿ – CW-84
ರೇಣುಕಾಸ್ವಾಮಿ ಪತ್ನಿ ಸಹನಾ – CW-9
ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ – CW-7
ರೇಣುಕಾಸ್ವಾಮಿ ತಾಯಿ ರತ್ನಪ್ರಭಾ – CW-8

ಇದಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಪಾತ್ರ ವಹಿಸಿರುವ ಐವಿಟ್ನೆಸ್‌ಗಳಾದ ಕಿರಣ್ (CW-76) ಮತ್ತು ಪುನೀತ್ (CW-91) ಅವರ ಹೇಳಿಕೆಗಳು ಟ್ರಯಲ್‌ನಲ್ಲಿ ನಿರ್ಣಾಯಕವಾಗುವ ಸಾಧ್ಯತೆ ಇದೆ.

ಸಮನ್ಸ್ ಜಾರಿಯಾದ ನಂತರ, ಎಲ್ಲ ಸಾಕ್ಷಿಗಳು ಸೂಚಿಸಿದ ದಿನಾಂಕದಲ್ಲಿ ಕೋರ್ಟ್‌ಗೆ ಹಾಜರಾಗಿ ಹೇಳಿಕೆ ನೀಡಬೇಕಿದೆ. ಪ್ರತಿಯೊಬ್ಬರ ಸಾಕ್ಷ್ಯವೂ ಪ್ರಕರಣದ ದಿಕ್ಕನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿರುವುದರಿಂದ, ರೇಣುಕಾಸ್ವಾಮಿ ಹತ್ಯೆ ಕೇಸ್ ಈಗ ನ್ಯಾಯಾಲಯದಲ್ಲಿ ಅತ್ಯಂತ ಸಂವೇದನಶೀಲ ಹಂತ ಪ್ರವೇಶಿಸಿದೆ.

Related posts