ಲಗ್ಗೆರೆ ವಾರ್ಡಿನ ಕಾಂಗ್ರೆಸ್ ಅಧ್ಯಕ್ಷನ ಮೇಲೆ 67 ಲಕ್ಷ ವಂಚನೆ ಆರೋಪ — ಪೊಲೀಸ್ ಕ್ರಮ ಪ್ರಶ್ನಾರ್ಹ
ಲಗ್ಗೆರೆ ವಾರ್ಡಿನ ಕಾಂಗ್ರೆಸ್ ಅಧ್ಯಕ್ಷನ ಮೇಲೆ 67 ಲಕ್ಷ ವಂಚನೆ ಆರೋಪ — ಪೊಲೀಸ್ ಕ್ರಮ ಪ್ರಶ್ನಾರ್ಹ
ಬೆಂಗಳೂರು: ಲಗ್ಗೆರೆ ವಾರ್ಡಿನ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್. ಪಾರ್ಥ ಅಲಿಯಾಸ್ ಪಾರ್ಥಗೌಡ ವಿರುದ್ಧ 67 ಲಕ್ಷ ರೂಪಾಯಿ ವಂಚನೆ ಪ್ರಕರಣದಲ್ಲಿ ನ್ಯಾಯಾಲಯವು NBW (Non-Bailable Warrant) ಹೊರಡಿಸಿದ್ದರೂ, ಮಹಾಲಕ್ಷ್ಮಿ ಲೇಔಟ್ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ವಿಳಂಬ ಮಾಡುತ್ತಿರುವುದು ಗಂಭೀರ ಪ್ರಶ್ನೆಗೆ ಗ್ರಾಸವಾಗಿದೆ. ರಾಜಕೀಯ ಒತ್ತಡ, ಲಂಚದ ಪ್ರಭಾವವೇ ಪೊಲೀಸರ ನಿರ್ಲಕ್ಷ್ಯಕ್ಕೆ ಕಾರಣ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಮслиನಾಗುತ್ತಿವೆ.
ನಿವೃತ್ತ ಶಿಕ್ಷಣ ಉಪನಿರ್ದೇಶಕರಿಗೆ ಮೋಸ — ಕೋರ್ಟ್‌ನಲ್ಲಿ ಆರೋಪ ಸಾಬೀತು
ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕರಾದ ನೀಲಯ್ಯ ಅವರಿಗೆ ಸಂಬಂಧಿಕನಾದ ಪಾರ್ಥ ಬಿಸಿನೆಸ್ ಮಾಡುವ ನೆಪದಲ್ಲಿ RTGS ಮೂಲಕ 30 ಲಕ್ಷ ರೂಪಾಯಿ ಪಡೆದುಕೊಂಡಿದ್ದ. ಬಡ್ಡಿ ಸೇರಿಸಿ ಹಣ ನೀಡುವುದಾಗಿ ಭರವಸೆ ಕೊಟ್ಟರೂ ವರ್ಷಗಳವರೆಗೆ ಹಣ ಮರುಪಾವತಿ ಮಾಡದೆ ಸುಳ್ಳು ಹೇಳಿಕೆಗಳಿಂದ ನೀಲಯ್ಯರನ್ನು ಕಾಡುತ್ತಿದ್ದಾನೆಂದು ದೂರಿನಲ್ಲಿ ತಿಳಿಸಲಾಗಿದೆ.
2021ರಲ್ಲಿ ನೀಲಯ್ಯ ನ್ಯಾಯಾಲಯಕ್ಕೆ ಮೊರೆ ಹೋಗಿದ್ದು, ವಿಚಾರಣೆಯ ವೇಳೆ ಪಾರ್ಥ ಕೊಟ್ಟಿದ್ದ 52 ಲಕ್ಷದ ಚೆಕ್ ಬ್ಯಾಂಕ್‌ನಲ್ಲಿ ಬೌನ್ಸ್ ಆಗಿರುವುದು ಸಹ ದಾಖಲಾಗಿದೆ. ಕೋರ್ಟ್ ಮರುಮರು ಸಮನ್ಸ್ ಕಳುಹಿಸಿದರೂ ಹಾಜರಾಗದೆ ತಪ್ಪಿಸಿಕೊಂಡ ಪಾರ್ಥ ವಿರುದ್ಧ ಅಂತಿಮವಾಗಿ 67 ಲಕ್ಷ ರೂ. ಪಾವತಿಸಲು ಆದೇಶ ಹೊರಬಿತ್ತು.
NBW, ಆಸ್ತಿ ಜಪ್ತಿ ಆದೇಶವಿದ್ದರೂ ಪೊಲೀಸ್ ಕೈ ಜಾರಿ?..
ಸೆಷನ್ಸ್ ಕೋರ್ಟ್ ಕೂಡ ಪಾರ್ಥನ ಮೇಲಿನ ಆಜ್ಞೆಯನ್ನು ಮುಂದುವರಿಸಿಕೊಂಡಿದ್ದು, NBW ಜಾರಿಯಾಗಿತ್ತು. ಆತನ ಆಸ್ತಿ ಜಪ್ತಿ ಮಾಡಲು ಸಹ ಸೂಚನೆ ನೀಡಲಾಗಿತ್ತು. ಆದರೆ ಇಷ್ಟೊಂದು ಗಂಭೀರ ಕಾನೂನು ಕ್ರಮಗಳಿದ್ದರೂ, ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪಾರ್ಥನನ್ನು ಬಂಧಿಸದೆ ಬಿಡುವುದೇ ಹೆಚ್ಚು ಅನುಮಾನ ಹುಟ್ಟಿಸಿದೆ.
ಸ್ಪಷ್ಟ ಮೂಲಗಳ ಪ್ರಕಾರ, ಪಾರ್ಥನನ್ನು ಬಂಧಿಸಲು ಹೋದ ಪೊಲೀಸರು ಲಂಚಕ್ಕೆ ಮಣಿದು ಮುಕ್ತಗೊಳಿಸಿದ್ದಾರೆಂಬ ವದಂತಿಗಳು ಹರಿದಾಡುತ್ತಿವೆ.
ರಾಜಕೀಯ ನಾಯಕರಿಂದ ಪೋಲಿಸರಿಗೆ ನೇರ ಒತ್ತಡ ಹೊರಿಸಲಾಗಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ.
“ಕೋರ್ಟ್ ಆದೇಶ ಇದ್ದಾಗಲೂ ಪೊಲೀಸರು ಕ್ರಮ ಕೈಗೊಂಡಿಲ್ಲ. ಕಾಂಗ್ರೆಸ್ ಪಕ್ಷದ ನಂಟು, ರಾಜಕೀಯ ಒತ್ತಡ — ಇವೆಲ್ಲದರ ಬೆಂಬಲದಿಂದ ಪಾರ್ಥ ಬಂಧನ ತಪ್ಪಿಸಿಕೊಂಡಿದ್ದಾನೆ” ಎಂದು ಹಣ ಕಳೆದುಕೊಂಡಿರುವ ನೀಲಯ್ಯ ಆರೋಪಿಸಿದ್ದಾರೆ.
‘ಕಾಂಗ್ರೆಸ್ ಸರ್ಕಾರ ನಮ್ಮದು, ನನ್ನ ಮೇಲೆ ಯಾರಿಗೂ ಅಧಿಕಾರ ಇಲ್ಲ’ ಎಂಬ ದರ್ಪ?
ಕೋವಿಡ್ ಸಮಯದಲ್ಲಿ ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಸೇರಿದ ಪಾರ್ಥ, ಈಗ ಸರ್ಕಾರದ ಹತ್ತಿರವಾಗಿರುವುದನ್ನು ತೋರಿಸಿ ಬೆದರಿಕೆ ಹಾಕುತ್ತಾನೆಂದು ಸ್ಥಳೀಯರು ಹೇಳುತ್ತಿದ್ದಾರೆ.
ದೊಡ್ಡ ರೌಡಿಗಳ ಹೆಸರಿನಲ್ಲಿ ಬೆದರಿಕೆ..
ವಿಧಾನಸೌಧದಲ್ಲಿ ನಾಯಕರ ಜೊತೆಗೆ ತೆಗೆದ ಸೆಲ್ಫಿ ತೋರಿಸಿ ಧಮ್ಮು ಇವುಗಳನ್ನು ಬಳಸಿಕೊಂಡು ವಂಚನೆ ಪ್ರಕರಣದಲ್ಲಿರುವುದನ್ನು ದಿಟವಾಗಿ ಮುಚ್ಚಿಟ್ಟಿದ್ದಾನೆ ಎಂಬ ಮಾತು ಕೇಳಿಬರುತ್ತಿದೆ.
ನೀಲಯ್ಯರ ಅಕ್ರೋಶ…
“ಸಮಾಜದಲ್ಲಿ ಗೌರವ ಉಳಿಸಿಕೊಳ್ಳ ಬೇಕೆಂದರೆ ಪಾರ್ಥ ಮೊದಲು ಕೋರ್ಟ್ ಆದೇಶದಂತೆ 67 ಲಕ್ಷ ಹಣ ಜಮಾ ಮಾಡಲಿ. ರಾಜಕೀಯ ಬಲದಿಂದ ಕಾನೂನು ತಪ್ಪಿಸಿಕೊಳ್ಳುವುದು ನಾಚಿಕೆಗೇಡಿತನ” ಎಂದು ನೀಲಯ್ಯ ವ್ಯಥೆ ವ್ಯಕ್ತಪಡಿಸಿದ್ದಾರೆ.
ಪ್ರಕರಣಕ್ಕೆ ನ್ಯಾಯ ಸಿಗುತ್ತಾ? ಪೊಲೀಸ್ ಕ್ರಮ ಯಾವಾಗ?
ನ್ಯಾಯಾಲಯದ NBW ಇದ್ದರೂ ಬಂಧನವಾಗದಿರುವುದು, ಜನಸಾಮಾನ್ಯರಲ್ಲಿ ಕಾನೂನಿನ ಮೇಲೆ ಇರುವ ನಂಬಿಕೆಗೆ ಹೊಡೆತ ನೀಡುತ್ತಿದೆ. ಪೋಲಿಸ್ ಇಲಾಖೆಯ ನಿರ್ಲಕ್ಷ್ಯವೇ?
ಅಥವಾ ರಾಜಕೀಯ ಒತ್ತಡವೇ?
ಈ ಪ್ರಶ್ನೆಗೆ ಸ್ಪಷ್ಟ ಉತ್ತರವಾಗಬೇಕಾಗಿದೆ.
67 ಲಕ್ಷ ವಂಚನೆ ಮಾಡಿದ ಆರೋಪಿಯ ಬಂಧನ ಇನ್ನೂ ಆಗದಿರುವುದು — ಈಗ ಸಾರ್ವಜನಿಕರ ಕಣ್ಣು ಪೊಲೀಸ್ ಇಲಾಖೆಯ ಮುಂದಿನ ಕ್ರಮದತ್ತ ಹರಿದಿದೆ.

