ಟಿ.ಬಿ. ಡ್ಯಾಂನಲ್ಲಿ ಡಿ.20ರಿಂದ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ. 33 ಗೇಟ್‌ಗಳ ಅಳವಡಿಕೆಗೆ 3 ತಂಡಗಳ ನಿಯೋಜನೆ..
ಟಿ.ಬಿ. ಡ್ಯಾಂನಲ್ಲಿ ಡಿ.20ರಿಂದ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ. 33 ಗೇಟ್‌ಗಳ ಅಳವಡಿಕೆಗೆ 3 ತಂಡಗಳ ನಿಯೋಜನೆ
– ಸಚಿವ ಶಿವರಾಜ ತಂಗಡಗಿ ಸೂಚನೆ
ತುಂಗಭದ್ರಾ ಜಲಾಶಯದ 33 ಹಳೆಯ ಕ್ರಸ್ಟ್ ಗೇಟ್‌ಗಳನ್ನು ಹಂತ ಹಂತವಾಗಿ ಬದಲಾಯಿಸುವ ಮಹತ್ವದ ಕಾಮಗಾರಿ ಡಿಸೆಂಬರ್ 20ರಿಂದ ಆರಂಭವಾಗಲಿದೆ. 52 ಕೋಟಿ ರೂ. ವೆಚ್ಚದ ಈ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
33 ಕ್ರಸ್ಟ್ ಗೇಟ್‌ಗಳನ್ನು ಸಂಪೂರ್ಣ ಬದಲಾಯಿಸಲು ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣ
ಒಂದು ತಿಂಗಳಲ್ಲಿ 6 ಗೇಟ್‌ಗಳ ವೇಗದಲ್ಲಿ ಬದಲಾವಣೆ – 3 ವಿಶೇಷ ತಂಡಗಳ ರಚನೆ
ರೈತರು ಎರಡನೇ ಬೆಳೆ ನೀರನ್ನು ತ್ಯಾಗ ಮಾಡಿರುವುದರಿಂದ ಕಾಮಗಾರಿಗೆ ಗತಿಮಾಡುವ ಸೂಚನೆ..
2026ರ ಮುಂಗಾರು ವೇಳೆಗೆ ನೀರು ಸಂಗ್ರಹಕ್ಕೆ ತೊಂದರೆ ಆಗದಂತೆ ಸಮಯಕ್ಕೆ ಸರಿಯಾಗಿ ಕಾಮಗಾರಿ ಪೂರ್ಣಗೊಳಿಸುವ ಗುರಿ
ಸಚಿವ ಶಿವರಾಜ ತಂಗಡಗಿ ಹೇಳಿಕೆ..
ಮುನಿರಾಬಾದ್‌ನ ನೀರಾವರಿ ನಿಗಮ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಾ…
“ತುಂಗಭದ್ರಾ ಜಲಾಶಯ ಲಕ್ಷಾಂತರ ರೈತರ ಬದುಕಿನ ನಂಬಿಕೆ. 19ನೇ ಗೇಟ್ ಸೇರಿದಂತೆ ಎಲ್ಲಾ 33 ಕ್ರಸ್ಟ್ ಗೇಟ್‌ಗಳನ್ನು ಬದಲಾಯಿಸುವ ಭರವಸೆ ರೈತರಿಗೆ ನೀಡಿದ್ದೇವೆ. ಆ ಮಾತನ್ನು ಉಳಿಸಿಕೊಳ್ಳಲು ಕೆಲಸವನ್ನು ವೇಗವಾಗಿ ಮುಂದುವರಿಸಬೇಕು,” ಎಂದು ಹೇಳಿದರು.
ರೈತರು ಎರಡನೇ ಬೆಳೆಗೆ ನೀರು ತ್ಯಜಿಸಿರುವುದು ಗಮನಿಸಿ, ಅವರ ಹಿತವನ್ನು ಮೊದಲಿಗಾಗಿರಿಸಿ ಕಾರ್ಯ ನಿರ್ವಹಿಸುವಂತೆ ಅವರು ಅಧಿಕಾರಿಗಳಿಗೆ ಮನವಿ ಮಾಡಿದರು.
ಅಧಿಕಾರಿಗಳ ಪ್ರಸ್ತುತ ಮಾಹಿತಿ…
ಜಲಾಶಯದಲ್ಲಿ ಇದುವರೆಗೆ 23 ಟಿಎಂಸಿ ನೀರು ಬಳಕೆಯಾಗಿದೆ
ಪ್ರಸ್ತುತ ನೀರಿನ ಮಟ್ಟ 1621.72 ಅಡಿ
ಕ್ರಸ್ಟ್ ಗೇಟ್ ಅಳವಡಿಕೆ ಪ್ರಾರಂಭಿಸಲು ಅಗತ್ಯ ಮಟ್ಟ 1613 ಅಡಿ
ಹೆಚ್ಚುವರಿ ನೀರನ್ನು ಬಳಕೆ ಮಾಡಿದ ನಂತರ ಗೇಟ್ ಬದಲಾವಣೆ ಕಾರ್ಯ ನಿರ್ವಹಿಸಲಾಗುವುದು
ಗುತ್ತಿಗೆದಾರರ ಮಾಹಿತಿ…
ಪಶ್ಚಿಮ ಬಂಗಾಳದ ಪರಾಕ್ ಬ್ಯಾರೇಜ್‌ನಲ್ಲಿ 124 ಗೇಟ್‌ಗಳ ಅಳವಡಿಕೆ ಮಾಡಿದ ಅನುಭವ ಹೊಂದಿರುವ ಕಂಪನಿ ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಕೆಆರ್‌ಎಸ್ ಮತ್ತು ನಾರಾಯಣಪುರ ಜಲಾಶಯಗಳ ಗೇಟ್ ಬದಲಾವಣೆ ಕಾರ್ಯವನ್ನು ತಾವು ಯಶಸ್ವಿಯಾಗಿ ನಿರ್ವಹಿಸಿದ್ದೇವೆ ಎಂದು ಪ್ರತಿನಿಧಿಗಳು ತಿಳಿಸಿದರು.
ಈ ಬಾರಿ ತುಂಗಭದ್ರಾ ಜಲಾಶಯದಲ್ಲಿ 3 ತಂಡಗಳನ್ನು ರಚಿಸಿ, ತಿಂಗಳಿಗೆ 6 ಗೇಟ್‌ಗಳ ವೇಗದಲ್ಲಿ ಕಾರ್ಯ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಸಭೆಯಲ್ಲಿ ಉಪಸ್ಥಿತರಿದ್ದವರು….
ಮುಖ್ಯ ಎಂಜಿನಿಯರ್ ಪ್ರೀತಿ ಪತ್ತಾರ, ಟಿಬಿ ಬೋರ್ಡ್ ಕಾರ್ಯಪಾಲಕ ಎಂಜಿನಿಯರ್ ಚಂದ್ರಶೇಖರ, ಎಂ.ಎಸ್. ಗೋಡೆಕರ್, ಯಲ್ಲಪ್ಪ, ವಿನಾಯಕ ಬಿ., ಬಸಪ್ಪ ಜಾನಕರ್, ಲಿಂಗರಾಜ್, ರಾಘವೇಂದ್ರ ಸೇರಿದಂತೆ ಅನೇಕ ತಾಂತ್ರಿಕ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

