ಸುದ್ದಿ 

ನಕಲಿ ಜಾತಿ ಪ್ರಮಾಣಪತ್ರ ಪ್ರಕರಣ: ಕೋಲಾರ MLA ಕೊತ್ತೂರು ಮಂಜುನಾಥ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ದೊಡ್ಡ ಹಿನ್ನಡೆ – ಮುಂದೇನು?

Taluknewsmedia.com

ನಕಲಿ ಜಾತಿ ಪ್ರಮಾಣಪತ್ರ ಪ್ರಕರಣ: ಕೋಲಾರ MLA ಕೊತ್ತೂರು ಮಂಜುನಾಥ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ದೊಡ್ಡ ಹಿನ್ನಡೆ – ಮುಂದೇನು?

ಪರಿಶಿಷ್ಟ ಜಾತಿಗೆ ಮೀಸಲಾದ ಮುಳಬಾಗಿಲು ಕ್ಷೇತ್ರದಲ್ಲಿ 2013ರ ಚುನಾವಣೆಯಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಬಳಸಿದ್ದಾರೆ ಎಂಬ ಆರೋಪದ ಮೇಲೆ ದಾಖಲಾಗಿದ್ದ ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಕೋಲಾರದ ಶಾಸಕ ಕೊತ್ತూరు ಮಂಜುನಾಥ್ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಹೀಗಾಗಿ, ಈ ಪ್ರಕರಣದ ತನಿಖೆ ಮುಂದುವರಿಯಲು ದಾರಿ ಸುವ್ಯವಸ್ಥೆಯಾಗಿದೆ.

ಮುಖ್ಯ ಅಂಶಗಳು.. ಕೋಲಾರ ಶಾಸಕ ಕೊತ್ತೂರು ಮಂಜುನಾಥ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ

ಎಫ್‌ಐಆರ್‌ ರದ್ದುಪಡಿಸಬೇಕೆಂಬ ಮನವಿ ವಜಾ

ಹೈಕೋರ್ಟ್‌ಗೆ – “ವಿಚಾರಣೆಯನ್ನು ಸಾಧ್ಯವಾದಷ್ಟು ಬೇಗ ಮುಗಿಸಿ” ಎನ್ನುವ ನಿರ್ದೇಶನ

ಮುಂದಿನ ವಿಚಾರಣೆ 2026ರ ಜನವರಿ 14ಕ್ಕೆ

ಸುಪ್ರೀಂ ಕೋರ್ಟ್ ನೀಡಿದ ಆದೇಶ ಏನು?..

ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಅಲೋಕ್ ಅರಾಧೆ ನೇತೃತ್ವದ ಪೀಠ ಶುಕ್ರವಾರ ನೀಡಿದ ಆದೇಶದಲ್ಲಿ: ಹೈಕೋರ್ಟ್ ನೀಡಿದ್ದ ತಾತ್ಕಾಲಿಕ ತಡೆಾಜ್ಞೆ (stay) ತೆರವುಗೊಳಿಸಲಾಗಿದೆ. ಎಫ್‌ಐಆರ್‌ ರದ್ದುಪಡಿಸುವಂತೆ ಕೇಳಿದ್ದ ಮಂಜುನಾಥ್ ಅರ್ಜಿ ಸಂಪೂರ್ಣವಾಗಿ ತಳ್ಳಲ್ಪಟ್ಟಿದೆ ಮಂಜುನಾಥ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ಹೈಕೋರ್ಟ್ ಸಾಧ್ಯವಾದಷ್ಟು ಬೇಗ ಮುಗಿಸಬೇಕೆಂದು ಸೂಚಿಸಲಾಗಿದೆ

ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಪರಿಸ್ಥಿತಿ

ರಾಜ್ಯ ಸರ್ಕಾರದ ಪರ ವಾದಿಸಿದ ವಿಶೇಷ ವಕೀಲ ಸಿ. ಜಗದೀಶ್ ನ್ಯಾಯಪೀಠಕ್ಕೆ ಹೀಗೆ ಮಾಹಿತಿ ನೀಡಿದರು:

ಮಂಜುನಾಥ್ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿರುವರು ಆದರೆ ಅದರಲ್ಲಿರುವ 19 ಕಚೇರಿ ದೋಷಗಳನ್ನು ಇನ್ನೂ ಸರಿಪಡಿಸಿಲ್ಲ

ವಿಚಾರಣೆಗೆ ತಾನೇ ಹಾಜರಾಗದೇ ವಿಳಂಬ ಉಂಟುಮಾಡುತ್ತಿದ್ದಾರೆ ಮುಂದಿನ ವಿಚಾರಣೆ 2026 ಜನವರಿ 14ಕ್ಕೆ ನಿಗದಿ ಈ ಮಾಹಿತಿ ಗಮನಿಸಿದ ಸುಪ್ರೀಂ ಕೋರ್ಟ್, ಅರ್ಜಿದಾರರ ವರ್ತನೆ ಕಾನೂನು ಪ್ರಕ್ರಿಯೆಯ ದುರ್ಬಳಕೆಗೆ ದಾರಿ ಮಾಡುತ್ತದೆ ಎಂದು ಎಚ್ಚರಿಸಿದೆ.

ನ್ಯಾಯಾಲಯದ ಗಂಭೀರ ಟೀಕೆ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ: “ಹೈಕೋರ್ಟ್ ವಿಚಾರಣೆಯನ್ನು ಮುಂದುವರಿಸುತ್ತಿದೆ. ಆದರೆ ಅರ್ಜಿದಾರರು ಸಹಕರಿಸದೆ ತೊಂದರೆ ಸೃಷ್ಟಿಸುತ್ತಿದ್ದಾರೆ. ಇಂತಹ ಕ್ರಮಗಳನ್ನು ಸಹಿಸಲಾಗದು.” ಇದರಿಂದ, ಮಂಜುನಾಥ್‌ಗೆ ಕಾನೂನು ಹೋರಾಟ ಇನ್ನೂ ಗಟ್ಟಿಯಾದ ಹಂತಕ್ಕೆ ಪ್ರವೇಶಿಸಿದೆ.

Related posts