ಹುಬ್ಬಳ್ಳಿ–ಗದಗ ಬೈಪಾಸ್ ಮೂಲಕ ವಿಜಯಪುರ ರೈಲು ಮಾರ್ಗ : ಸಚಿವ ಎಂಬಿ ಪಾಟೀಲ್ರಿಂದ ಮಹತ್ವದ ಸುಳಿವು..
ಹುಬ್ಬಳ್ಳಿ–ಗದಗ ಬೈಪಾಸ್ ಮೂಲಕ ವಿಜಯಪುರ ರೈಲು ಮಾರ್ಗ : ಸಚಿವ ಎಂಬಿ ಪಾಟೀಲ್ರಿಂದ ಮಹತ್ವದ ಸುಳಿವು..
ಬೆಂಗಳೂರಿನಿಂದ ವಿಜಯಪುರದವರೆಗೆ ಪ್ರಯಾಣಿಸುವ ರೈಲಿಗೆ ಈಗ ಸರಾಸರಿ 15 ಗಂಟೆಗಳ ಸಮಯ ಬೇಕಾಗುತ್ತದೆ. ಈ ದೀರ್ಘಾವಧಿಯನ್ನು 10 ಗಂಟೆಗಳ ಮಟ್ಟಕ್ಕೆ ಇಳಿಸಲು ಸರ್ಕಾರ ಮತ್ತು ನೈರುತ್ಯ ರೈಲ್ವೆ ಇಲಾಖೆ ಒಟ್ಟಾಗಿ ತೀವ್ರ ಪ್ರಯತ್ನ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ–ಗದಗ ಬೈಪಾಸ್ ಮಾರ್ಗಗಳನ್ನು ಬಳಸಿಕೊಂಡು ಹೊಸ ರೈಲುಗಳನ್ನು ಸಂಚರಿಸಲು ನೈರುತ್ಯ ರೈಲ್ವೆ ಅಧಿಕಾರಿಗಳು ತಾತ್ವಿಕವಾಗಿ ಒಪ್ಪಿಗೆ ಸೂಚಿಸಿರುವುದು ಮಹತ್ವದ ಬೆಳವಣಿಗೆ.
ಮೂಲಸೌಕರ್ಯಾಭಿವೃದ್ಧಿ ಸಚಿವ ಎಂಬಿ ಪಾಟೀಲ, ಈ ಕುರಿತು ಬೆಂಗಳೂರಿನ ಖನಿಜ ಭವನದಲ್ಲಿ ರೈಲ್ವೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಧಿಕಾರಿಗಳೊಂದಿಗೆ ವಿವರವಾದ ಚರ್ಚೆ ನಡೆಸಿದ್ದಾರೆ.
ಮುಖ್ಯ ಅಂಶಗಳು… ಬೆಂಗಳೂರು–ವಿಜಯಪುರ ರೈಲು ಪ್ರಯಾಣವನ್ನು 5 ಗಂಟೆಗಳಷ್ಟು ಕಡಿಮೆ ಮಾಡುವ ಗುರಿ. ಹುಬ್ಬಳ್ಳಿ–ಗದಗ ಬೈಪಾಸ್ ಮೂಲಕ ರೈಲು ಓಡಿಸಲು ಹಸಿರು ನಿಶಾನೆ. ಹೊಸ ರೈಲುಗಳನ್ನು ಮಂಜೂರು ಮಾಡಿಸಲು ರೈಲ್ವೆ ಮಂಡಳಿಗೆ ವಿನಂತಿ
ವಂದೇ ಭಾರತ್ ಬದಲು ವಂದೇ ಭಾರತ್ ಸ್ಲೀಪರ್ ಸೇವೆಗೆ ಒತ್ತಾಯ. ಜೋಡಿ ಹಳಿ, ಉಕ್ಕು ಸೇತುವೆ, ವಿದ್ಯುದ್ದೀಕರಣ ಸೇರಿದಂತೆ ಮುಖ್ಯ ಕಾಮಗಾರಿಗಳು.
ಹೊಸ ರೈಲುಗಳಿಗೆ ಕೇಂದ್ರ ಮಂತ್ರಿಗಳಿಗೆ ಪತ್ರ
ಸಚಿವ ಪಾಟೀಲ ತಿಳಿಸಿದ್ದಾರೆ: “ಈಗ ಸಂಚರಿಸುತ್ತಿರುವ ರೈಲುಗಳ ಮಾರ್ಗವನ್ನು ನೇರವಾಗಿ ಬದಲಿಸಲಾಗುವುದಿಲ್ಲ. ಹೊಸ ರೈಲುಗಳನ್ನು ಮಾತ್ರ ಮಂಡಳಿ ಮಂಜೂರು ಮಾಡಬೇಕು. ಅದಕ್ಕಾಗಿ ರೈಲ್ವೆ ಸಚಿವರು ಅಶ್ವಿನಿ ವೈಷ್ಣವ್ ಹಾಗೂ ವಿ. ಸೋಮಣ್ಣ ಅವರಿಗೆ ತಕ್ಷಣವೇ ನಮ್ಮ ಕಡೆಯಿಂದ ಪತ್ರ ಬರೆಯಲಾಗುತ್ತದೆ.” ಅಧಿಕಾರಿಗಳ ಪ್ರಕಾರ, ಬೈಪಾಸ್ ಮೂಲಕ ರೈಲು ಹಾದರೆ ಎಂಜಿನ್ ಬದಲಾವಣೆಯ ಅವಶ್ಯಕತೆ ಇರುವುದಿಲ್ಲ, ಇದರಿಂದಲೇ ಪ್ರಯಾಣ ಸಮಯ ಗಣನೀಯವಾಗಿ ಕಡಿಮೆಯಾಗಲಿದೆ.
ಜೋಡಿ ಹಳಿ – ಉಕ್ಕು ಸೇತುವೆ – ವಿದ್ಯುದ್ದೀಕರಣ
ವಂಡಾಳ–ಆಲಮಟ್ಟಿಯ ಮಧ್ಯೆ ಉಳಿದಿರುವ ಜೋಡಿ ಹಳಿ ಕಾಮಗಾರಿ 2026 ಫೆಬ್ರವರಿಯಲ್ಲಿ ಪೂರ್ಣಗೊಳ್ಳಲಿದೆ. ಕೃಷ್ಣಾ ನದಿಯ ಮೇಲೆ ನಿರ್ಮಾಣವಾಗುತ್ತಿರುವ ಅರ್ಧ ಕಿಲೋಮೀಟರ್ ಉದ್ದದ ಬೃಹತ್ ಉಕ್ಕಿನ ಸೇತುವೆ ಕೂಡ ಅಂತಿಮ ಹಂತದಲ್ಲಿದೆ. ಮಾರ್ಚ್ ವೇಳೆಗೆ ಎರಡೂ ಹಳಿಗಳ ವಿದ್ಯುದ್ದೀಕರಣ ಕಮ್ಮಟ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಹಾಲಿ ರೈಲುಗಳ ವೇಗ ಹೆಚ್ಚಳ.ಹೊಸ ರೈಲುಗಳನ್ನು ಸೇರಿಸುವ ಅವಕಾಶ. ಪ್ರಯಾಣಿಕರಿಗೆ ಉತ್ತಮ ಅನುಭವ
ವಂದೇ ಭಾರತ್ ಸ್ಲೀಪರ್ ಸೇವೆಗೆ ಆಸಕ್ತಿ
ವಿಜಯಪುರ ಮಾರ್ಗದಲ್ಲಿ ಸಾಮಾನ್ಯ ವಂದೇ ಭಾರತ್ ರೈಲು ಸಾಧ್ಯವಿಲ್ಲವೆಂದು ಇಲಾಖೆ ತಿಳಿಸಿದರೂ, ವಂದೇ ಭಾರತ್ ಸ್ಲೀಪರ್ ಕೋಚ್ ಸೇವೆ ಪ್ರಾಯೋಗಿಕವಾಗಿರಬಹುದು ಎಂದು ಸೂಚಿಸಲಾಗಿದೆ. ಇದರ ಕುರಿತು ಕೂಡ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಿರುವುದಾಗಿ ಪಾಟೀಲ ಹೇಳಿದರು.
ತುಮಕೂರು–ರಾಯದುರ್ಗ ರೈಲು ಯೋಜನೆಯ ಹಲವು ಭಾಗಗಳ ಕಾಮಗಾರಿಗಳು ವೇಗ ಪಡುತ್ತಿವೆ.
ತುಮಕೂರು–ಊರುಕೆರೆ 10 ಕಿ.ಮೀ ಹಳಿ ಈ ವರ್ಷದಲ್ಲೇ ಪೂರ್ಣ ದೊಡ್ಡಹಳ್ಳಿ–ಪಾವಗಡ 20 ಕಿ.ಮೀ ಭಾಗ 2026 ಜನವರಿಯಿಂದ ರೈಲು ಸಂಚಾರಕ್ಕೆ ಸಿದ್ಧ ಮಡಕಶಿರಾ–ಪಾವಗಡ ಭಾಗ 2026 ಡಿಸೆಂಬರ ಮಧುಗಿರಿ–ಪಾವಗಡ ಲೈನ್ 2028 ಫೆಬ್ರವರಿಯಲ್ಲಿ ಪೂರ್ಣಗೊಳ್ಳಲಿದೆ. ಭಾರೀ ಕೈಗಾರಿಕಾ ವಲಯವಾಗಿರುವ ಈ ಪ್ರದೇಶದಲ್ಲಿ ಹೊಸ ರೈಲು ಮಾರ್ಗಗಳು ಸಾವಿರಾರು ಕಾರ್ಮಿಕರಿಗೆ ಸಂಚಾರ ಸುಲಭ ಮಾಡಲಿವೆ.
ಚತುಷ್ಪಥ ರೈಲುಮಾರ್ಗ: ಬೆಂಗಳೂರು–ತುಮಕೂರು ಮತ್ತು ಬೆಂಗಳೂರು–ಮೈಸೂರು ಈಗ ಇರುವ ಜೋಡಿ ಹಳಿಯನ್ನು ನಾಲ್ಕು ಹಳಿಗಳ ಮಾರ್ಗವಾಗಿ ವಿಸ್ತರಿಸುವ ಪ್ರಸ್ತಾವನೆಯ ಕಾರ್ಯಸಾಧ್ಯತಾ ವರದಿ ಶೀಘ್ರದಲ್ಲೇ ಬರುತ್ತಿದೆ.
ಬೆಂಗಳೂರು–ಮೈಸೂರು ವರದಿ: 2026ರ ಮೇ ತಿಂಗಳಲ್ಲಿ ಪ್ರಾಥಮಿಕ ವಿಶ್ಲೇಷಣೆಯಂತೆ, ಚತುಷ್ಪಥ ಮಾರ್ಗ ಆರ್ಥಿಕವಾಗಿ ಲಾಭದಾಯಕವಾಗಿದ್ದು ಪ್ರಯಾಣಿಕರಿಗೆ ವೇಗ–ಸೌಕರ್ಯ ಎರಡನ್ನೂ ಒದಗಿಸಲಿದೆ.
ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗದ ಪರಿಣಾಮವನ್ನು ಡೆಹ್ರಾಡೂನ್ ವನ್ಯಜೀವಿ ಸಂಸ್ಥೆ ಅಧ್ಯಯನಗೊಳಿಸುತ್ತಿದ್ದು, 2026 ಜೂನ್‌ನಲ್ಲಿ ವರದಿ ಲಭ್ಯವಾಗಲಿದೆ. ನಂತರ ಈ ಬಹುನಿರೀಕ್ಷಿತ ಯೋಜನೆಗೆ ಹಸಿರು ನಿಶಾನೆ ಸಿಗುವ ನಿರೀಕ್ಷೆ ಇದೆ.

