ಸುದ್ದಿ 

ಮಗ ಪಾಲನೆ ಮಾಡದ ಕಾರಣ ವೃದ್ಧ ತಂದೆಗೆ ಆಸ್ತಿ ಹಿಂತಿರುಗಿಸಿದ ತುಮಕೂರು ನ್ಯಾಯಾಲಯ

Taluknewsmedia.com

ಮಗ ಪಾಲನೆ ಮಾಡದ ಕಾರಣ ವೃದ್ಧ ತಂದೆಗೆ ಆಸ್ತಿ ಹಿಂತಿರುಗಿಸಿದ ತುಮಕೂರು ನ್ಯಾಯಾಲಯ

ತುಮಕೂರು: ವೃದ್ಧ ತಂದೆಯನ್ನು ನೋಡಿಕೊಳ್ಳದೆ ನಿರ್ಲಕ್ಷ್ಯ ತೋರಿದ ಮಗನಿಗೆ ದೊಡ್ಡ ಹೊಡೆತ ನೀಡಿರುವಂತಾಗಿ, ತುಮಕೂರು ಉಪ ವಿಭಾಗಾಧಿಕಾರಿ ನ್ಯಾಯಾಲಯವು 2020ರಲ್ಲಿ ನಡೆದ ದಾನಪತ್ರವನ್ನು ರದ್ದುಪಡಿಸಿ, ಆಸ್ತಿಯನ್ನು ಮರಳಿ ತಂದೆಯ ಹೆಸರಿಗೆ ವರ್ಗಾಯಿಸಲು ಮಹತ್ವದ ಆದೇಶ ಹೊರಡಿಸಿದೆ.

ತಂದೆಯ ಆರೈಕೆಯ ಭರವಸೆ ಪಾಲಿಸದ ಮಗ..

ಗಾಂಧಿನಗರದ ಟಿಕೆ ಶಿವಪ್ರಸಾದ್ ಅವರು ತಮ್ಮ ಮನೆ ಮತ್ತು ಎರಡು ನಿವೇಶನಗಳನ್ನು 2020ರಲ್ಲಿ ತಮ್ಮ ಚಿಕ್ಕ ಮಗ ಟಿ.ಎಸ್. ಪೃಥ್ವಿಪ್ರಸಾದ್ ಅವರಿಗೆ ದಾನಪತ್ರದ ಮೂಲಕ ಹಸ್ತಾಂತರಿಸಿದ್ದರು.
ಮಗನು “ಪಾಲನೆ–ಪೋಷಣೆ, ವೈದ್ಯಕೀಯ ವೆಚ್ಚ ಎಲ್ಲವನ್ನೂ ನೋಡಿಕೊಳ್ಳುತ್ತೇನೆ” ಎಂದು ಭರವಸೆ ನೀಡಿದ್ದರಿಂದ ತಂದೆ ದಾನಪತ್ರಕ್ಕೆ ಒಪ್ಪಿದ್ದರು.

ಆದರೆ ಆಸ್ತಿ ಸಿಕ್ಕ ನಂತರ ಮಗನ ನಡವಳಿಕೆಯಲ್ಲಿ ಬದಲಾವಣೆಯಾಗಿ ನಿಂದನೆ, ಹಿಂಸೆ ಹಾಗೂ ಸಂಪೂರ್ಣ ನಿರ್ಲಕ್ಷ್ಯ ಎದುರಿಸಬೇಕಾಯಿತು. ಇದರಿಂದ ಬೇಸತ್ತ ಶಿವಪ್ರಸಾದ್ ಅವರು ‘ಪಾಲಕರ ಪೋಷಣೆ ಮತ್ತು ಹಿರಿಯ ನಾಗರಿಕರ ಸಂರಕ್ಷಣಾ ಕಾಯ್ದೆ, 2007’ರಡಿ ದಾನಪತ್ರ ರದ್ದುಗೊಳಿಸುವಂತೆ ಮನವಿ ಸಲ್ಲಿಸಿದರು.

ಕೋರ್ಟ್‌ನ ಸ್ಪಷ್ಟ ತೀರ್ಪು: ದಾನಪತ್ರ ಅಮಾನ್ಯ
ಉಪ ವಿಭಾಗಾಧಿಕಾರಿ ನಾಹಿದಾ ಜಮ್ ಜಮ್ ಅವರು ಪ್ರಕರಣದ ವಿಚಾರಣೆ ನಡೆಸಿ,ಮಗನು ನೀಡಿದ್ದ ಆರೈಕೆಯ ಭರವಸೆ ಪಾಲಿಸದಿರುವುದು. ವೃದ್ಧ ತಂದೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಷ್ಟ ಅನುಭವಿಸಿರುವುದು ಎಂದು ಸ್ಪಷ್ಟವಾದ ಕಾರಣಗಳ ಆಧಾರದಲ್ಲಿ 2020ರ ದಾನಪತ್ರ ಮಾನ್ಯವಲ್ಲ ಎಂದು ತೀರ್ಮಾನಿಸಿದರು.

ಖಾತಾ ಮತ್ತೆ ತಂದೆಯ ಹೆಸರಿಗೆ…

ಕೋರ್ಟ್ ಆದೇಶದಂತೆ, ಇಬ್ಬರೂ ಸ್ವತ್ತುಗಳ ಖಾತಾವನ್ನು ಮರಳಿ ಶಿವಪ್ರಸಾದ್ ಅವರ ಹೆಸರಿಗೆ ಬದಲಾಯಿಸಲು ಮಹಾನಗರ ಪಾಲಿಕೆ ಆಯುಕ್ತರಿಗೆ ವಿಶೇಷ ನಿರ್ದೇಶನ ನೀಡಲಾಗಿದೆ.

ಹಿರಿಯರ ಹಕ್ಕುಗಳ ರಕ್ಷಣೆ — ಮಹತ್ವದ ತೀರ್ಪು..

ಈ ತೀರ್ಪು ಹಿರಿಯರ ಪಾಲನೆ–ಪೋಷಣೆಯ ಜವಾಬ್ದಾರಿಯನ್ನು ನಿರ್ಲಕ್ಷಿಸುವ ಕುಟುಂಬ ಸದಸ್ಯರಿಗೆ ಕಾನೂನು ಎಚ್ಚರಿಕೆಯಂತಾಗಿದೆ.

Related posts