ಸುದ್ದಿ 

ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ – ರಾಜ್ಯಾದ್ಯಂತ ಸಂಘಟನೆ ಬಲವರ್ಧನೆ: ರಾಜ್ಯಾಧ್ಯಕ್ಷ ಡಾ. ಕೆ.ಎಂ. ಸಂದೇಶ್

Taluknewsmedia.com

ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ – ರಾಜ್ಯಾದ್ಯಂತ ಸಂಘಟನೆ ಬಲವರ್ಧನೆ: ರಾಜ್ಯಾಧ್ಯಕ್ಷ ಡಾ. ಕೆ.ಎಂ. ಸಂದೇಶ್

ಚಿಕ್ಕಬಳ್ಳಾಪುರ: ಜ್ಞಾನ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶವನ್ನು ಜನಸಾಮಾನ್ಯರ ನಡುವೆ ಪರಿಣಾಮಕಾರಿಯಾಗಿ ಹರಡುತ್ತಿರುವ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಂಘಟನೆ ಇಂದು ರಾಜ್ಯದ ಮಟ್ಟದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಿಕೊಂಡು ಬಲಿಷ್ಠ ವೇದಿಕೆಯಾಗಿ ಪರಿಣಮಿಸುತ್ತಿದೆ ಎಂದು ರಾಜ್ಯಾಧ್ಯಕ್ಷ ಡಾ. ಕೆ.ಎಂ. ಸಂದೇಶ್ ಹೇಳಿದ್ದಾರೆ.

ನಗರದ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಜಿಲ್ಲೆಯ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದ ಅವರು, “ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಚಿಂತನೆಗಳನ್ನು ಸಮಾಜದ ಎಲ್ಲ ದಿಕ್ಕುಗಳಿಗೂ ತಲುಪಿಸುವ ಕಾರ್ಯವನ್ನು ನಮ್ಮ ಸಂಘಟನೆ ನಿರಂತರವಾಗಿ ಮುಂದುವರೆಸುತ್ತಿದೆ. ಇದರಿಂದ ಜನರಲ್ಲಿ ಜಾಗೃತಿ, ಹಕ್ಕು ಅರಿವು ಮತ್ತು ಸಾಮಾಜಿಕ ಹೊಣೆಗಾರಿಕೆಯ ಮನೋಭಾವ ಹೆಚ್ಚುತ್ತಿದೆ” ಎಂದು ಹೇಳಿದರು.

ಡಾ. ಸಂದೇಶ್ ಅವರು ಮುಂದುವರೆದು,
“ಅಂಬೇಡ್ಕರ್ ಅವರ ಅಪ್ರತಿಮ ಅಧ್ಯಯನ, ತ್ಯಾಗ, ಪರಿಶ್ರಮ ಮತ್ತು ಮಾನವತೆಯ ನಿಷ್ಠೆಯಿಂದಲೇ ನಮ್ಮ ಸಂವಿಧಾನ ಎಲ್ಲ ವರ್ಗಗಳ ಜನರು ಸಮಾನವಾಗಿ ಬದುಕಲು ಮಾರ್ಗ ಕಲ್ಪಿಸಿದೆ. ಆದರೆ, ಇಂದಿಗೂ ಕೆಲವೊಂದು ಮನುವಾದಿ ಚಿಂತನೆಗಳು ಅಂಬೇಡ್ಕರ್ ಅವರನ್ನು ಕೇವಲ ಶೋಷಿತ ಸಮುದಾಯದ ನಾಯಕ ಎಂದು ಸೀಮಿತಗೊಳಿಸಲು ಯತ್ನಿಸುತ್ತಿವೆ. ಅವರ ವ್ಯಕ್ತಿತ್ವದ ವಿಶಾಲತೆ, ಸಾಮರ್ಥ್ಯ ಮತ್ತು ದೂರದೃಷ್ಟಿಯನ್ನು ಸಮಾಜದ ಎಲ್ಲ ವಲಯಗಳಿಗೆ ತಲುಪಿಸುವ ಜವಾಬ್ದಾರಿ ನಮ್ಮದು” ಎಂದು ಹೇಳಿದರು.

ಸಂಘಟನೆಯ ವಿಸ್ತರಣೆಯ ಭಾಗವಾಗಿ ಜಿಲ್ಲಾ ಮಟ್ಟದಲ್ಲಿ ಹೊಸ ಪದಾಧಿಕಾರಿಗಳನ್ನು ಪ್ರಕಟಿಸಲಾಯಿತು.

ಜಿಲ್ಲಾಧ್ಯಕ್ಷರು: ನಾಗರಾಜು
ಉಪಾಧ್ಯಕ್ಷರು: ರಾಜಣ್ಣ
ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷರು: ವಿನೋದ್ ಕುಮಾರ್
ಉಪಾಧ್ಯಕ್ಷರು: ಶ್ರೀನಿವಾಸ್
ಗೌರಿಬಿದನೂರು – ಮಂಚೇನಹಳ್ಳಿ ತಾಲೂಕು ಅಧ್ಯಕ್ಷರು: ಎ. ಅರುಣ್ ಕುಮಾರ್
ಉಪಾಧ್ಯಕ್ಷರು: ಬಾಲು

ಈ ನೇಮಕಾತಿಗಳು ಸಂಘಟನೆಯ ಮೂಲಭೂತ ಬಲವನ್ನು ಹೆಚ್ಚಿಸುವ ಜೊತೆಗೆ, ಮುಂದಿನ ದಿನಗಳಲ್ಲಿ ಅಂಬೇಡ್ಕರ್ ತತ್ವಶಾಸ್ತ್ರವನ್ನು ಗ್ರಾಮ–ನಗರಗಳಿಗೆ ತಲುಪಿಸುವ ಕಾರ್ಯತಂತ್ರಕ್ಕೆ ಹೊಸ ವೇಗ ನೀಡಲಿವೆ ಎಂದು ಡಾ. ಸಂದೇಶ್ ತಿಳಿಸಿದ್ದಾರೆ.

Related posts