ಸುದ್ದಿ 

ಚನ್ನಪಟ್ಟಣದ ಸಾತನೂರು ಸರ್ಕಲ್ನಲ್ಲಿ ಮ್ಯಾಗ್ನೆಟ್ ಶಾಲೆಗೆ ಸರ್ಕಾರಿ ಶಾಲೆಗಳ ವಿಲೀನ ವಿರೋಧಿಸಿ

Taluknewsmedia.com

ಮ್ಯಾಗ್ನೆಟ್​ ನೆಪದಲ್ಲಿ ಶಾಲೆಗಳನ್ನು ಮುಚ್ಚದಿರಿ

ಚನ್ನಪಟ್ಟಣದ ಸಾತನೂರು ಸರ್ಕಲ್​ನಲ್ಲಿ ಮ್ಯಾಗ್ನೆಟ್​ ಶಾಲೆಗೆ ಸರ್ಕಾರಿ ಶಾಲೆಗಳ ವಿಲೀನ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಕಾರ್ಯದರ್ಶಿ ಅಜಯ್​ ಕಾಮತ್​, ಆಶಾ ಕಾರ್ಯಕರ್ತೆಯರ ಸಂದ ಎಂ.ಉಮಾದೇವಿ, ಮುಖಂಡರಾದ ಎಚ್​.ಪಿ. ಶಿವಪ್ರಕಾಶ್​, ಸಾರ್ವಜನಿಕ ಶಿಣ ಉಳಿಸಿ ಸಮಿತಿ ಅಧ್ಯ ಮಂಜುನಾಥ್​ ಇತರರಿದ್ದರು.

ಚನ್ನಪಟ್ಟಣ: ಕನ್ನಡ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಸರ್ಕಾರ ಲಿಖಿತ ಭರವಸೆ ನೀಡಲಿ, ಇಲ್ಲದಿದ್ದರೆ ಅವುಗಳ ಉಳಿವಿಗಾಗಿ ಹೋರಾಟಕ್ಕೆ ಸಿದ್ಧವಾಗಿದ್ದೇವೆ ಎಂದು ಎಐಡಿಎಸ್​ಒ ರಾಜ್ಯ ಕಾರ್ಯದರ್ಶಿ ಅಜಯ್​ ಕಾಮತ್​ ಹೇಳಿದರು.

ನಗರದ ಸಾತನೂರು ಸರ್ಕಲ್​ನಲ್ಲಿ ಶುಕ್ರವಾರ ತಾಲೂಕಿನ ಹೊಂಗನೂರು ಮ್ಯಾಗ್ನೆಟ್​ ಶಾಲೆಗೆ ಅಕ್ಕಪಕ್ಕದ 7 ಸರ್ಕಾರಿ ಶಾಲೆಗಳ ವಿಲೀನ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೆಪಿಎಸ್​ ಮ್ಯಾಗ್ನೆಟ್​ ಶಾಲೆ ಯೋಜನೆಯಡಿ 40 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಸರ್ಕಾರದ ತೀರ್ಮಾನ ಅವೈಾನಿಕವಾಗಿದೆ. ಸಂತೆ ಮೊಗೇನಹಳ್ಳಿ, ಹೊಡಿಕೆ ಹೊಸಳ್ಳಿ, ಕನ್ನಿದೊಡ್ಡಿ, ಅಮ್ಮಳ್ಳಿದೊಡ್ಡಿ, ಸುಣ್ಣಟ್ಟ, ಮೊಗಳ್ಳಿ ದೊಡ್ಡಿ, ಚನ್ನಂಕೇಗೌಡನ ದೊಡ್ಡಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಆದೇಶ ಹೊರಡಿಸಿದ್ದು, ಈ ಶಾಲೆಗಳ ಉಳಿವಿಗಾಗಿ ವಿದ್ಯಾರ್ಥಿ ಸಂಟನೆಯ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದ್ದೇವೆ ಎಂದರು.

ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ಕೇವಲ ರಾಜ್ಯವಲ್ಲದೆ ದೇಶದೆಲ್ಲೆಡೆ ನಡೆಯುತ್ತಿದೆ. ಅಕ್ಟೋಬರ್​ 15ರಂದು, ಸರ್ಕಾರ ಬಿಡುಗಡೆ ಮಾಡಿದ ಆದೇಶದಂತೆ ಈ ಶಾಲೆಗಳ ವ್ಯವಸ್ಥೆಯೂ ಹೊರಗುತ್ತಿಗೆಯಿಂದ ನಡೆಯಬೇಕು, ತಮ್ಮ ಆದಾಯವನ್ನು ತಾವೇ ಸೃಷ್ಟಿಸಿಕೊಳ್ಳಬೇಕು ಎಂದಿದೆ. ಇದರರ್ಥ ಪಾಲಕರಿಂದಲೇ ಹಣ ವಸೂಲಿ ಮಾಡಬೇಕು ಎಂಬುದಾಗಿದೆ ಎಂದು ಆರೋಪಿಸಿದರು.

ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂದ ಎಂ. ಉಮಾದೇವಿ ಮಾತನಾಡಿ, ಸರ್ಕಾರ ಎಲ್ಲ ಸಾರ್ವಜನಿಕ ವಲಯಗಳನ್ನು ಖಾಸಗೀಕರಿಸಿ, ಈಗ ಶಿಣಕ್ಕೂ ಕೈ ಹಾಕಿದೆ. ಆಶಾ ಕಾರ್ಯಕರ್ತೆಯರು ದಿನವಿಡೀ ದುಡಿಯುತ್ತಾರೆ. ಆದರೆ,ಈವರೆಗೂ ಅವರನ್ನು ಕಾರ್ಮಿಕರೆಂದು ಪರಿಗಣಿಸಿಲ್ಲ. ಈಗ ಸರ್ಕಾರಿ ಶಾಲೆಗಳನ್ನು ಮುಚ್ಚಿದರೆ, ಈ ತಾಯಂದಿರ ಮಕ್ಕಳು ಎಲ್ಲಿಗೆ ಹೋಗಬೇಕು? ಈ ಮ್ಯಾಗ್ನೆಟ್​ ಶಾಲೆಗಳು ಅಸ್ತಿತ್ವಕ್ಕೆ ಬಂದರೆ, ಮುಂದೆ ಮಕ್ಕಳಿಗೆ ಶಿಣವು ಕನಸಿನ ಮಾತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಮುಖಂಡರಾದ ಎಚ್​.ಪಿ.ಶಿವಪ್ರಕಾಶ್​, ಸಂತೆ ಮೊಗೇನಹಳ್ಳಿಯ ಸಾರ್ವಜನಿಕ ಶಿಣ ಉಳಿಸಿ ಸಮಿತಿ ಅಧ್ಯ ಮಂಜುನಾಥ್​ ಮಾತನಾಡಿದರು.

ಎಐಡಿಎಸ್​ಒ ರಾಜ್ಯ ಉಪಾಧ್ಯೆ ಅಪೂರ್ವ, ಬೆಂಗಳೂರು ದಣ ಜಿಲ್ಲಾ ಸಂಚಾಲಕ ರೋಹಿತ್​, ರಾಜ್ಯ ಅಧ್ಯೆ ಅಶ್ವಿನಿ.ಕೆ.ಎಸ್​., ಜಿಲ್ಲಾ ಕಾರ್ಯದರ್ಶಿ ಕಲ್ಯಾಣ್​ ಕುಮಾರ್​ ಹಾಗೂ ಇತರರಿದ್ದರು.

Related posts