ತಂತ್ರಜ್ಞಾನ ಸಿನೆಮಾ 

ಆನೇಕಲ್ ನ ಯುವ ಪ್ರತಿಭೆ ಮನು ಕಾಟ್ ರವರು ನಿರ್ದೇಶಿಸಿರುವ ” ಜಂಗಮವಾಣಿ ” ಶಾರ್ಟ್ ಮೂವಿ!

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಆನೇಕಲ್ :- ಆನೇಕಲ್ ಗೂ ಕಲೆಗೂ ಅದೇನೋ ಬಿಡದ ನಂಟು. ಇದು ವಿದ್ಯಾಕಾಶಿಯೂ ಹೌದು. ಕಲೆಯ ಬೀಡೂ ಹೌದು. ಅದಕ್ಕೆ ಸಾಕ್ಷಿ ಎಂಬತೆ ಯುವ ಪ್ರತಿಭೆ ನಿರ್ದೇಶಿಸಿರುವ ‘ಜಂಗಮವಾಣಿ’ ಎನ್ನುವ ಶಾರ್ಟ್ ಸಿನೆಮಾವೊಂದನ್ನು ಮಾಡಿದ್ದಾರೆ. ಅಗತ್ಯಕ್ಕಿಂತ ಹೆಚ್ಚಾಗಿ ಬಳಸುವ ಮೊಬೈಲ್ ನಿಂದ ಏನೆಲ್ಲಾ ಅನಾಹುತಗಳು ಸಮಸ್ಯೆಗಳುಆಗುತ್ತದೆ ಎಂಬುದು ಈ ಚಿತ್ರದ ಮೂಲಕ ಯುವ ಪೀಳಿಗೆಗೆ ತಿಳಿಸಿಕೊಟ್ಟಿದ್ದಾರೆ . ಅಂದಹಾಗೆ ಈ ಸಿನೆಮಾಗೆ ಯುವ ಕತೆಗಾರ ಮನು ಕಾಟ್ ಅವರು ಕಥೆ ಬರೆಯುವುದರ ಜೊತೆ ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಮಾಡಿ ನಿರ್ಮಾಣವನ್ನು ಸಹ ಮಾಡಿದ್ದಾರೆ. ಈ ಕಿರುಚಿತ್ರದ ಮುಖ್ಯ ಪಾತ್ರಧಾರಿಯಾಗಿ ಪ್ರೇರಣಾ, ರಾಮಸ್ವಾಮಿ ಹಾಗೂ ಚಿತ್ರದಲ್ಲಿ ನಟಿಸಿದ್ದಾರೆ. ಸಂತೋಷ್, ವೆಂಕಿ ಹಾಗೂ ನಿರಂಜನ್ ದೇಶಪಾಂಡೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರ ನೋಡಿ ಶುಭ ಕೋರಿದರು. ಕಿರಣ್ ಕ್ಯಾಮೆರ, ಜಿತಿನ್ ಸಂಗೀತ ಚಿತ್ರಕ್ಕಿದೆ.

Read More
ತಂತ್ರಜ್ಞಾನ 

ಬನ್ನೇರುಘಟ್ಟ ಆನ್ಲೈನ್ ಟಿಕೆಟ್ ಬುಕಿಂಗ್

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಕೋವಿಡ್‌ ಹರಡುವಿಕೆ ತಡೆಗಟ್ಟುವ ಸಲುವಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ. ಹೊಸ ವರ್ಷ ಮತ್ತು ರಜಾ ದಿನಗಳ ಹಿನ್ನೆಲೆಯಲ್ಲಿ ಜನದಟ್ಟಣೆ ತಡೆಯುವ ಸಲುವಾಗಿ ಆನ್‌ಲೈನ್‌ ಮೂಲಕ ಮುಂಗಡ ಟಿಕೆಟ್‌ ಕಾಯ್ಡಿರಿಸಲು ಪ್ರವಾಸಿಗರು ಆದ್ಯತೆ ನೀಡಬೇಕು ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಹಣಾಧಿಕಾರಿ ವನಶ್ರೀ ವಿಪಿನ್‌ಸಿಂಗ್‌ ತಿಳಿಸಿದ್ದಾರೆ. www.bannerghattabio*ogica*park.org ವೆಬ್‌ಸೈಟ್‌ ಮೂಲಕ ಮುಂಗಡ ಟಿಕೆಟ್‌ ಕಾಯ್ದಿರಿಸಿಕೊಳ್ಳಲು ಅವಕಾಶವಿದೆ. ಆನ್‌ಲೈನ್‌ ಮೂಲಕ ಟಿಕೆಟ್‌ ಕಾಯ್ದಿರಿಸಿದರೆ ಉದ್ಯಾನ ಬಳಿ ನೂಕುನುಗ್ಗಲು ಮತ್ತು ಜನದಟ್ಟಣೆ ತಡೆಯಲು ಸಾಧ್ಯ .ಜನವರಿ 3ರವರೆಗೂ ಉದ್ಯಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುವ ನಿರೀಕ್ಷೆಯಿದೆ.ಪ್ರವಾಸಿಗರು ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಉದ್ಯಾನ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು. ಉದ್ಯಾನಕ್ಕೆ ಭೇಟಿ ನೀಡುವ ಪ್ರವಾಸಿಗರು ಬ್ಯಾರಿಕೇಡ್‌ಗಳನ್ನು ಮುಟ್ಟಬಾರದು. ಕೈಗಳನ್ನು ಸ್ವಚ್ಛಗೊಳಿಸಬೇಕು, ತಾಪಮಾನ ಪರಿಶೀಲನೆಗೆ ಸಹಕರಿಸಬೇಕು. ಮಾರ್ಗಸೂಚಿ ಫಲಕಗಳಲ್ಲಿ…

Read More
ತಂತ್ರಜ್ಞಾನ ವಾಣಿಜ್ಯ 

ಅಕಾಲಿಕ ಮಳೆ, ದುಪ್ಪಟ್ಟು ಕೂಲಿ ಹಿನ್ನೆಲೆ:ರಾಗಿ ಕಟಾವಿಗೆ ಯಂತ್ರಗಳ ಮೊರೆಹೋದ ರೈತ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಆನೇಕಲ್(ಡಿ.04): ರಾಗಿ ಕಣಜ ಖ್ಯಾತಿಯ ಆನೇಕಲ್ ತಾಲ್ಲೂಕಿನ ರೈತರು ರಾಗಿಯನ್ನು ಪ್ರಧಾನ ಬೆಳೆಯನ್ನಾಗಿ ಬೆಳೆಯುತ್ತಾರೆ. ಅದರಲ್ಲೂ ರಾಗಿ ಬಿತ್ತನೆ, ಕಟಾವು ಒಕ್ಕಣೆಯನ್ನು ಸಾಂಪ್ರದಾಯಿಕ ಪದ್ದತಿಯಲ್ಲಿ ರೈತರು ಮಾಡುತ್ತಿದ್ದರು. ಆದ್ರೆ ಈ ಬಾರಿ ರಾಗಿ ಕಟಾವು ಮಾಡಲು ಯಂತ್ರಗಳ ಮೊರೆ ಹೋಗಿದ್ದು, ರೈತರಿಗೆ ಹೆಚ್ಚು ಉಪಯುಕ್ತವಾಗಿದೆ. ಹೌದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕು ರಾಗಿ ಕಣಜ ಎಂದೇ ಖ್ಯಾತಿ ಗಳಿಸಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚಿನ ಪ್ರಮಾಣದಲ್ಲಿ ರಾಗಿ ಬೆಳೆಯುವ ಆನೇಕಲ್ ತಾಲ್ಲೂಕಿನ ಬಹುತೇಕ ರೈತರು ಇಂದಿಗೂ ಸಾಂಪ್ರದಾಯಿಕ ಪದ್ದತಿಯಲ್ಲಿ ರಾಗಿ ಬಿತ್ತನೆ, ಕುಂಟೆ, ಕಳೆ ಕೀಳುವಿಕೆ, ಕಟಾವು ಒಕ್ಕಣೆ ಮಾಡುವುದು ಕಂಡುಬರುತ್ತಿತ್ತು. ಆದ್ರೆ ಈ ಬಾರಿ ಅಕಾಲಿಕ ಮಳೆ ಮತ್ತು ಕೃಷಿ ಕಾರ್ಮಿಕರ ಅಭಾವ. ಸಿಕ್ಕರು ದುಬಾರಿ ಕೂಲಿಯಿಂದಾಗಿ ರಾಗಿ ಕಟಾವಿಗೆ ಯಂತ್ರಗಳ ಮೊರೆ ಹೋಗಿದ್ದು, ಯಂತ್ರಗಳಿಂದ ರಾಗಿ ಕಟಾವು ಮಾಡುವುದರಿಂದ ಕಡಿಮೆ…

Read More