ವಾಣಿಜ್ಯ ಸುದ್ದಿ 

ಹೂವು ಬೆಲೆಗಾರರ ಸಂಕಷ್ಟ ಕೇಳುವವರಿಲ್ಲ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಆನೇಕಲ್:- ಲಾಕ್ ಡೌನ್ ತೆರವು ಬಳಿಕವೂ ಪುಷ್ಪೋದ್ಯಮ ಚೇತರಿಕೆ ಕಾಣುತ್ತಿಲ್ಲ. ಹೌದು, ಮೊದಲ ಅಲೆಯಲ್ಲಿ ಇನ್ನಿಲ್ಲದಂತೆ ಪುಷ್ಪೋದ್ಯಮವನ್ನು ನೆಲ ಕಚ್ಚಿಸಿದ್ದ ಕೊರೋನಾ, ಇದೀಗ ಎರಡನೇ ಅಲೆಯಲ್ಲಿಯೂ ಚೇತರಿಕೆ ಕಾಣದಷ್ಟರ ಮಟ್ಟಿಗೆ ಮಾರುಕಟ್ಟೆ ವ್ಯವಸ್ಥೆಯನ್ನು ಮಕಾಡೆ ಮಲಗಿಸಿದೆ. ಇದರ ನಡುವೆ ಸರ್ಕಾರ ಘೋಷಣೆ ಮಾಡಿರುವ ಅಲ್ಪ ಪರಿಹಾರವು ಹೂ ಬೆಳೆಯುವ ರೈತರಿಗೆ ಸಾಲದಾಗಿದೆ. ಹೌದು, ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನಲ್ಲಿ ಲಾಕ್ ಡೌನ್ ತೆರವು ಬಳಿಕವೂ ಪುಷ್ಪೋದ್ಯಮದಲ್ಲಿ ಚೇತರಿಕೆ ಕಾಣುತ್ತಿಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ಸಂಪೂರ್ಣ ನೆಲಕಚ್ಚಿದ್ದ ಹೂ ವ್ಯಾಪಾರ ವಹಿವಾಟು ಲಾಕ್ ಡೌನ್ ತೆರವು ಬಳಿಕವೂ ನಿರೀಕ್ಷಿತ ಮಟ್ಟಕ್ಕೆ ವಹಿವಾಟು ನಡೆಯುತ್ತಿಲ್ಲ. ಈಗ ಸಭೆ ಸಮಾರಂಭಗಳು ಸರಳವಾಗಿ ಆಯೋಜನೆಗೊಳ್ಳುತ್ತಿವೆ. ಜೊತೆಗೆ ಆಷಾಢ ಮಾಸ ಇರುವುದರಿಂದ ಯಾವುದೇ ಶುಭ ಸಮಾರಂಭಗಳು ಸಹ ನಡೆಯುತ್ತಿಲ್ಲ. ಇದರಿಂದ ಹೂ ಕೇಳುವವರೆ ಇಲ್ಲದಂತಾಗಿದೆ. ಇದರ ನಡುವೆ ಮೂರನೇ…

Read More
ವಾಣಿಜ್ಯ ಸುದ್ದಿ 

ಸ್ವಯಂ ಸೇವಾ ತಂಡದ ವತಿಯಿಂದ ಪರಿಸರ ಸಂರಕ್ಷಣೆಗಾಗಿ ಮತ್ತು ಕಾಗದ ಬಳಕೆಯ ಕುರಿತಾದ ವಿನೂತನ ರೀತಿಯ ಅರಿವಿನ ಪ್ರಯತ್ನ ಮಾಡಲಾಯಿತು.

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಆನೇಕಲ್ :- ಆನೇಕಲ್ ಸ್ವಯಂ ಸೇವಾ ತಂಡದ ವತಿಯಿಂದ ಶ್ರೀ ತಿಮ್ಮರಾಯ ಸ್ವಾಮಿ ಪ್ರೌಢಶಾಲೆಯಲ್ಲಿ ವಿಶ್ವ ಕಾಗದ ಚೀಲ ದಿನಾಚರಣೆಯ ಪ್ರಯುಕ್ತ( World Paper Bag Day), ಪ್ಲಾಸ್ಟಿಕ್ ಮುಕ್ತ ಪರಿಸರಕ್ಕಾಗಿ ಮತ್ತು ಪರಿಸರ ಮಾಲಿನ್ಯಕಾರಕ ವಸ್ತುಗಳ ವರ್ಜನೆಗಾಗಿ ವಿಶೇಷ ಅರಿವಿನ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ಸಮಾರಂಭದಲ್ಲಿ ಶಾಲಾ ಆವರಣದಲ್ಲಿ ಸಸಿಗಳನ್ನು ನೆಟ್ಟು,ಶಾಲಾ ಶಿಕ್ಷಕರಿಗೆ ಪೇಪರ್ ಬ್ಯಾಗ್ಗಳನ್ನು ವಿತರಿಸಲಾಯಿತು.ಈ ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣ ಅಧಿಕಾರಿಗಳದ ಶ್ರೀ ನರಸಿಂಹರಾಜು. P ಸರ್ ಮತ್ತು ಶ್ರೀ ಆನಂದ್ ಕುಮಾರ್ K99 ನ್ಯೂಸ್ ಆನೇಕಲ್,ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ಶಾಲಾ ಆಡಳಿತ ಮಂಡಳಿ ಮತ್ತು ಸ್ವಯಂ ಸೇವಾ ತಂಡದ ಸದಸ್ಯರಾದ ಆನೇಕಲ್ ರವಿ, ಆನೇಕಲ್ ನರೇಶ್,ರಘು,ನದೀಮ್, ಸತ್ಯನಾರಾಯಣ, ವಿನಯ್,ಅನಿಲ್ , ಗಣೇಶ್,ಗಿರೀಶ್,ಮುರುಳಿ, ರವಿಕುಮಾರ್, ಉಪಸ್ಥಿತರಿದ್ದರು.ಪರಿಸರ ಸಂರಕ್ಷಣೆಗಾಗಿ ಮತ್ತು ಕಾಗದ ಬಳಕೆಯ ಕುರಿತಾದ ವಿನೂತನ ರೀತಿಯ ಅರಿವಿನ…

Read More
ವಾಣಿಜ್ಯ ಸುದ್ದಿ 

ಆನೇಕಲ್ ಹಣ್ಣಿನ ಮಾರುಕಟ್ಟೆ ಬಂದ್ : ಮಂಡಿ ವ್ಯಾಪರಿಗಳಲ್ಲಿ ಹೆಚ್ಚಿದ ಆತಂಕ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಆನೇಕಲ್ : ಕೊರೊನಾ ಎರಡನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಲಾಕ್ ಡೌನ್ ಜಾರಿಗೆ ತಂದಿದೆ. ಈಗಾಗಲೇ ಈ ಲಾಕ್ ಡೌನ್ ನಿಂದಾಗಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ. ಹೀಗಾಗಿ ಸರ್ಕಾರಕ್ಕೆ ತಜ್ಞರ ಸಮಿತಿ ಇನ್ನು ಸ್ವಲ್ಪ ಕಾಲ ಲಾಕ್ ಡೌನ್ ಮುಂದುವರಿಸಲು ಸೂಚಿಸಿದೆ. ಆದರೆ ಕೊವಿಡ್ ನಿಂದ ಜಾರಿಯಾಗಿರುವ ಈ ಲಾಕ್ ಡೌನ್ ವ್ಯಾಪಾರ ವ್ಯವಹಾರಕ್ಕೆ ಸಂಕಷ್ಟ ತಂದೊಡ್ಡಿದೆ. ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಸಿಂಗೇನಾ ಅಗ್ರಹಾರದ ಹಣ್ಣಿನ ಮಾರುಕಟ್ಟೆಯಲ್ಲೂ ವ್ಯಾಪಾರ ಮಾಡಲು ಅವಕಾಶವಿಲ್ಲದೆ. ಮಂಡಿಯಲ್ಲಿನ ವ್ಯಾಪರಿಗಳು ಸಂಕಷ್ಟಕ್ಕೆ ಗುರಿಯಾಗಿದ್ದಾರೆ.ಸ್ಥಳೀಯ ರೈತರು ಸೇರಿದಂತೆ ಪಕ್ಕದ ರಾಜ್ಯಗಳಾದ ಆಂಧ್ರ ಪ್ರದೇಶ, ಮಹಾರಾಷ್ಟ್ರ ಹೀಗೆ ಬೇರೆ ಬೇರೆ ರಾಜ್ಯಗಳಿಂದ ಮಾವು, ದಾಳಿಂಬೆ, ಅನಾನಸ್ ಯಥೇಚ್ಛವಾಗಿ ಆನೇಕಲ್ ಹಣ್ಣಿನ ಮಾರುಕಟ್ಟೆಗೆ ತರಲಾಗುತ್ತಿದೆ.ಆದರೆ ಲಾಕ್ ಡೌನ್ ನಿಂದಾಗಿ ಗ್ರಾಹಕರು ಇಲ್ಲದೆ, ವ್ಯಾಪಾರ ವಹಿವಾಟು ಇಲ್ಲದೆ ನಷ್ಟ ಉಂಟಾಗುತ್ತಿದೆ.…

Read More
ವಾಣಿಜ್ಯ ಸುದ್ದಿ 

ಲಾಕ್ಡೌನ್ಎಫೆಕ್ಟ್ : ಸಂಕಷ್ಟದಲ್ಲಿ ಜರ್ಬೇರಾ ಹೂ ಬೆಳೆಗಾರರು; ನೆರವಿಗಾಗಿ ಸರ್ಕಾರಕ್ಕೆ ಆಗ್ರಹ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಆನೇಕಲ್(ಮೇ 31): ಮಹಾಮಾರಿ ಕೊರೋನಾ ಎರಡನೇ ಅಲೆ ಇಡೀ ದೇಶವಾಸಿಗಳನ್ನೇ ಸಂಕಷ್ಟಕ್ಕೆ ದೂಡಿದೆ. ಅದರಲ್ಲೂ ರೈತಾಪಿ ವರ್ಗ ಕೊರೋನಾ ಏಟಿಗೆ ನಲುಗಿ ಹೋಗಿದ್ದಾರೆ. ಹೌದು, ಕೊರೋನಾ ಹರಡದಂತೆ ಸರ್ಕಾರವೇನೋ ಲಾಕ್ ಡೌನ್ ಘೋಷಣೆ ಮಾಡಿದೆ. ಆದ್ರೆ ಇದರಿಂದ ರೈತ ಸಮೂಹ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಜರ್ಬೇರಾ ಹೂ ಬೆಳೆಗಾರರು ಲಾಕ್ ಡೌನ್ ನಿಂದಾಗಿ ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ.ಹೌದು, ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಜರ್ಬೇರಾ ಹೂ ಬೆಳೆದಿದ್ದಾರೆ. ಕೋಟ್ಯಾಂತರ ರೂಪಾಯಿ ಬ್ಯಾಂಕುಗಳಿಂದ ಸಾಲ ಪಡೆದು ಗ್ರೀನ್ ಹೌಸ್ಗಳಲ್ಲಿ ತಾಲ್ಲೂಕಿನ ರೈತರು ತರಹೆವಾರಿ ಜರ್ಬೇರಾ ಹೂಗಳನ್ನು ಬೆಳೆದು ಹೊರ ರಾಜ್ಯಗಳಿಗೆ ರಫ್ತು ಮಾಡುತ್ತಿದ್ದರು. ವಿಶೇಷವಾಗಿ ಮೇ ಮತ್ತು ಜೂನ್ ಹಾಗೂ ನವೆಂಬರ್ ತಿಂಗಳಿನಲ್ಲಿ ಜರ್ಬೇರಾ ಹೂವಿಗೆ ಭರ್ಜರಿ ಬೇಡಿಕೆ ಇರುತ್ತಿತ್ತು.ಲಕ್ಷಾಂತರ ಲಾಭ ಸಹ ಗಳಿಸಲಾಗುತ್ತಿತ್ತು. ಆದ್ರೆ ಈ ಬಾರಿ…

Read More
ವಾಣಿಜ್ಯ ಸುದ್ದಿ 

ಕೊರೋನಾ ಎಫೆಕ್ಟ್; ರೈತನ ಬೆಳೆಗಿಲ್ಲ ಕಿಮ್ಮತ್ತು, ಮಾರುಕಟ್ಟೆ ಇಲ್ಲದೆ ಕಟಾವಿಗೆ ಬಂದ ಫಸಲು ಮಣ್ಣುಪಾಲು!

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಆನೇಕಲ್: ಮಾಹಾಮಾರಿ ಕೊರೋನಾ ರೈತರ ಬದುಕಿಗೆ ಕೊಳ್ಳಿ ಇಟ್ಟಿದೆ. ಹೌದು, ಮಹಾಮಾರಿ ಕೊರೋನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ತಿಂಗಳುಗಟ್ಟಲೆ ಲಾಕ್ ಡೌನ್ ಘೋಷಿಸಿದೆ. ಇದರ ಪರಿಣಾಮವಾಗಿ ರೈತರು ಬೆಳೆದ ಹೂ, ತರಕಾರಿ ಹಣ್ಣಿಗೆ ಮಾರುಕಟ್ಟೆ ಇಲ್ಲದೆ ಪರದಾಡುವಂತಾಗಿದೆ. ಉತ್ತಮ ಫಸಲು ಬಂದು ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಭಾರಿ ನಷ್ಟ ಉಂಟಾಗಿದ್ದು, ಬೇರೆ ದಾರಿ ಇಲ್ಲದೆ ತಾನು ಬೆಳೆದ ಬೆಳೆಗಳನ್ನೇ ನಾಶಪಡಿಸುತ್ತಿದ್ದಾರೆ.ಹೌದು, ಹೀಗೆ ಕಟಾವಿಗೆ ಬಂದ ಟೊಮ್ಯಾಟೊ ಫಸಲನ್ನು ಸ್ವತಃ ರೈತರೇ ಮಣ್ಣಿನ‌ ಗುಂಡಿಗೆ ಕಿತ್ತೆಸೆಯುತ್ತಿದ್ದಾರೆ. ನಳನಳಿಸುತ್ತಿರುವ ಸೇವಂತಿ ಹೂವನ್ನು ರೈತರೇ ನಾಶ ಮಾಡುತ್ತಿದ್ದಾರೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನಲ್ಲಿ ಬಹುತೇಕ ರೈತರು ತಮ್ಮ ಬೆಳೆಯನ್ನು ತಾವೇ ಮಣ್ಣುಪಾಲು ಮಾಡಿದ್ದಾರೆ.ಆನೇಕಲ್ ತಾಲ್ಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ರಾಗಿ ಬೆಳೆಯನ್ನು ಪ್ರಧಾನವಾಗಿ ಬೆಳೆಯುತ್ತಾರೆ. ಇದರ ನಡುವೆ ಬಹುತೇಕ ರೈತರು…

Read More
ವಾಣಿಜ್ಯ 

ಕಾರೋನದಿಂದ ನಿತ್ಯ 150ಟನ್ ತರಕಾರಿ ಕಸಕ್ಕೆ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಆನೇಕಲ್ (ಮೇ.04): ಮಾರುಕಟ್ಟೆಗಳಲ್ಲಿ ಕೇವಲ 6 ಗಂಟೆಗಳ ಕಾಲ ಮಾತ್ರ ತರಕಾರಿ ಮಾರಾಟಕ್ಕೆ ಅವಕಾಶ ನೀಡಿರುವುದು ಹಾಗೂ ಗ್ರಾಹಕರಿಗೆ ಮಾರುಕಟ್ಟೆಗೆ ಹೋಗಿ ಬರಲು ಸಾರಿಗೆ ವ್ಯವಸ್ಥೆ ಇಲ್ಲದ ಪರಿಣಾಮ ಮಾರುಕಟ್ಟೆಗೆ ಬರುವ ತರಕಾರಿ ಮಾರಾಟವಾಗದೇ ಹಾಗೆಯೇ ಉಳಿಯುತ್ತಿರುವುದರಿಂದ ರೈತರಿಗೆ ಲಕ್ಷಾಂತರ ರು. ನಷ್ಟವಾಗುತ್ತಿದೆ. ದುಬಾರಿ ಬಾಡಿಗೆ ತೆತ್ತು ವಾಹನಗಳಲ್ಲಿ ತರಕಾರಿ ತರುವ ರೈತರಿಗೆ ಸಗಟು ವ್ಯಾಪಾರಿಗಳು ಕೊಳ್ಳುವವರಿಲ್ಲ ಎಂದು ಹೇಳಿ ಕಡಿಮೆ ಬೆಲೆಯಲ್ಲಿ ಖರೀದಿ ಮಾಡುವ ಸ್ಥಿತಿ ನಿರ್ಮಾಣವಾಗಿದೆ.ನಗರದ ಸಿಂಗೇನ ಅಗ್ರಹಾರ ಮಾರುಕಟ್ಟೆಗೆ ಪ್ರತಿನಿತ್ಯ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 300 ಟನ್‌ ನಷ್ಟು ತರಕಾರಿ ಬರುತ್ತಿದ್ದು, ಇದರಲ್ಲಿ ಸುಮಾರು 120-150 ಟನ್‌ ಮಾತ್ರ ಮಾರಾಟವಾಗುತ್ತಿದೆ.ತರಕಾರಿ ತಿಪ್ಪೆಗೆ ಎಸೆದು, ರಸ್ತೆಗೆ ಚೆಲ್ಲಿ ರೈತ ಆಕ್ರೋಶ150 ಟನ್‌ ತರಕಾರಿ ಕಸಕ್ಕೆ:ಆನೇಕಲ್‌ ತಾಲೂಕಿನ ಸಿಂಗೇನ ಅಗ್ರಹಾರ ತರಕಾರಿ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯದ ಕೊರತೆ ಮತ್ತು…

Read More
ವಾಣಿಜ್ಯ ವಿಶೇಷ ಸುದ್ದಿ 

ಅನೇಕಲ್ ತಾಲ್ಲೂಕಿನ ಜಿಗಳ ಗ್ರಾಮದಲ್ಲಿ ಸುಗ್ಗಿ ಹಬ್ಬದ ಸಡಗರ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಆನೇಕಲ್: ಗ್ರಾಮೀಣ ಸೊಗಡಿನ ಕಾರ್ಯಕ್ರಮಗಳಾದ ಜಾತ್ರೆ, ಉತ್ಸವ, ಹಬ್ಬಗಳು ಜನರು ಪರಸ್ಪರ ಅರಿತುಕೊಳ್ಳಲು ಕಷ್ಟ, ಸುಖಗಳಿಗೆ ಸ್ಪಂದಿಸಲು ಉತ್ತಮ ವೇದಿಕೆಗಳಾಗಿವೆ ಎಂದು ನಿವೃತ್ತ ಐಪಿಎಸ್‌ ಅಧಿಕಾರಿ ಕೆ.ವಿ.ಆರ್‌. ಟ್ಯಾಗೋರ್‌ ತಿಳಿಸಿದರು.ಅವರು ತಾಲ್ಲೂಕಿನ ಜಿಗಳ ಗ್ರಾಮದಲ್ಲಿ ಭಾರತೀಯ ಕಿಸಾನ್‌ ಸಂಘದ ದಕ್ಷಿಣ ಪ್ರಾಂತ್ಯ ಆನೇಕಲ್‌ ಘಟಕದಿಂದ ಆಯೋಜಿಸಿದ್ದ ಸುಗ್ಗಿ ಹಬ್ಬ-2021 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಗ್ರಾಮಗಳಲ್ಲಿ ಈ ಹಿಂದೆ ಸುಗ್ಗಿ ಕಾಲ ಮುಗಿಯುತ್ತಿದ್ದಂತೆ ಹಬ್ಬಗಳ ಕಾಲ ಪ್ರಾರಂಭವಾಗುತ್ತಿತ್ತು. ಪ್ರತಿಯೊಂದು ಹಬ್ಬ, ಉತ್ಸವಗಳಲ್ಲೂ ಗ್ರಾಮದ ಎಲ್ಲರೂ ಒಗ್ಗೂಡಿ ಕೆಲಸ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಉತ್ಸವಗಳ ಸೊಗಡು ಮಾಯವಾಗುತ್ತಿದೆ. ಪರಸ್ಪರ ವಿಶ್ವಾಸ, ಸಹಕಾರ, ಮನೋಭಾವನೆ ಮೂಡಲು ಉಪಯುಕ್ತವಾಗಿವೆ. ನಗರೀಕರಣದ ಪ್ರಭಾವದಿಂದಾಗಿ ಗ್ರಾಮೀಣ ಸಂಸ್ಕೃತಿ ಕಣ್ಮರೆಯಾಗುತ್ತಿದೆ. ಗ್ರಾಮೀಣ ಸಂಸ್ಕೃತಿ, ಪರಂಪರೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಕೋಲಾಟ, ಹಗ್ಗಜಗ್ಗಾಟ, ರಂಗೋಲಿ ಸ್ಪರ್ಧೆ, ಭಜನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಸುಗ್ಗಿ…

Read More
ವಾಣಿಜ್ಯ ಸುದ್ದಿ 

ತಂಬಾಕಿಗೆ ಉತ್ತಮ ಬೆಲೆ ಇಲ್ಲದೆ ರೈತರು ಕಂಗಾಲು

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಚಿಲ್ಕುಂದ : ತಂಬಾಕಿಗೆ ಉತ್ತಮ ಬೆಲೆ ಇಲ್ಲದೆ ರೈತರು ಕಂಗಾಲು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಮತ್ತು ಹುಣಸೂರು ತಾಲೂಕಿನ ವಾಣಿಜ್ಯ ಬೆಳೆಯಾಗಿ ತಂಬಾಕು ( ವರ್ಜಿನಿಯ ) ನ್ನು ಹೆಚ್ಚಿನ ಪ್ರಮಾಣದ ಜನರು ಬೆಳೆಯುತ್ತಾರೆ ಆದರೆ ಪ್ರಸಕ್ತ ವರ್ಷ ಕರೊನಾ ಸಂಕಷ್ಟದಲ್ಲಿ ರೈತರು ತಂಬಾಕನ್ನು ಬೆಳದಿದ್ದು ಈಗ ಮಾರುಕಟ್ಟೆಯಲ್ಲಿ ಸರಿಯಾದ ದರ ಸಿಗದೆ ಕಂಗಾಲಾಗಿದ್ದಾರೆ, ಮೈಸೂರು ಜಿಲ್ಲೆಯ ತಂಬಾಕಿಗೆ ಏಷ್ಯಾದಲ್ಲಿ ಅತ್ಯಂತ ಬೇಡಿಕೆ ಇದ್ದು ಆದರೆ ಇಂದು ತಂಬಾಕನ್ನೇ ಖರೀದಿಸಲು ಖರೀದಿದಾರರು ಹಿಂದೇಟು ಹಾಕುತ್ತಿದ್ದು ಇದರ ನೇರ ಪರಿಣಾಮ ರೈತ ಮೇಲೆ ಬಿದ್ದಿದೆ. ಸರಿ ಸಮಾರು 1 ಕೆಜಿ ತಂಬಾಕನ್ನು ಉತ್ಪಾದಿಸಲು 130 ರಿಂದ 150 ರೂ.ಗಳು ವ್ಯಯವಾಗಳಿದ್ದು ಆದರೆ ಮಾರುಕಟ್ಟೆಯಲ್ಲಿ 100 ರಿಂದ 150 ಒಳಗೆ ತಂಬಾಕು ಮಾರಾಟವಾಗುತಿದ್ದು ಕನಿಷ್ಠ ತಾವು ಬೆಳದ ಕೂಲಿಗೂ ಸಮಾವಾಗುತ್ತಿಲ್ಲ ಈಗಿನ ದರ ಎಂದು…

Read More
ತಂತ್ರಜ್ಞಾನ ವಾಣಿಜ್ಯ 

ಅಕಾಲಿಕ ಮಳೆ, ದುಪ್ಪಟ್ಟು ಕೂಲಿ ಹಿನ್ನೆಲೆ:ರಾಗಿ ಕಟಾವಿಗೆ ಯಂತ್ರಗಳ ಮೊರೆಹೋದ ರೈತ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಆನೇಕಲ್(ಡಿ.04): ರಾಗಿ ಕಣಜ ಖ್ಯಾತಿಯ ಆನೇಕಲ್ ತಾಲ್ಲೂಕಿನ ರೈತರು ರಾಗಿಯನ್ನು ಪ್ರಧಾನ ಬೆಳೆಯನ್ನಾಗಿ ಬೆಳೆಯುತ್ತಾರೆ. ಅದರಲ್ಲೂ ರಾಗಿ ಬಿತ್ತನೆ, ಕಟಾವು ಒಕ್ಕಣೆಯನ್ನು ಸಾಂಪ್ರದಾಯಿಕ ಪದ್ದತಿಯಲ್ಲಿ ರೈತರು ಮಾಡುತ್ತಿದ್ದರು. ಆದ್ರೆ ಈ ಬಾರಿ ರಾಗಿ ಕಟಾವು ಮಾಡಲು ಯಂತ್ರಗಳ ಮೊರೆ ಹೋಗಿದ್ದು, ರೈತರಿಗೆ ಹೆಚ್ಚು ಉಪಯುಕ್ತವಾಗಿದೆ. ಹೌದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕು ರಾಗಿ ಕಣಜ ಎಂದೇ ಖ್ಯಾತಿ ಗಳಿಸಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚಿನ ಪ್ರಮಾಣದಲ್ಲಿ ರಾಗಿ ಬೆಳೆಯುವ ಆನೇಕಲ್ ತಾಲ್ಲೂಕಿನ ಬಹುತೇಕ ರೈತರು ಇಂದಿಗೂ ಸಾಂಪ್ರದಾಯಿಕ ಪದ್ದತಿಯಲ್ಲಿ ರಾಗಿ ಬಿತ್ತನೆ, ಕುಂಟೆ, ಕಳೆ ಕೀಳುವಿಕೆ, ಕಟಾವು ಒಕ್ಕಣೆ ಮಾಡುವುದು ಕಂಡುಬರುತ್ತಿತ್ತು. ಆದ್ರೆ ಈ ಬಾರಿ ಅಕಾಲಿಕ ಮಳೆ ಮತ್ತು ಕೃಷಿ ಕಾರ್ಮಿಕರ ಅಭಾವ. ಸಿಕ್ಕರು ದುಬಾರಿ ಕೂಲಿಯಿಂದಾಗಿ ರಾಗಿ ಕಟಾವಿಗೆ ಯಂತ್ರಗಳ ಮೊರೆ ಹೋಗಿದ್ದು, ಯಂತ್ರಗಳಿಂದ ರಾಗಿ ಕಟಾವು ಮಾಡುವುದರಿಂದ ಕಡಿಮೆ…

Read More
ವಾಣಿಜ್ಯ 

ಮಿಶ್ರ ಬೇಸಾಯ ಆದಾಯದ ಮೂಲ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಆನೇಕಲ್ : ವೃತ್ತಿಯಲ್ಲಿ ಶಿಕ್ಷಕರು ಪ್ರವೃತ್ತಿಯಲ್ಲಿ ಕೃಷಿಕರು. ವೃತ್ತಿ ಮತ್ತು ಪ್ರವೃತ್ತಿ ಸರಿದೂಗಿಸಿಕೊಂಡು ಕಠಿಣ ಶ್ರಮದ ಮೂಲಕ ಮಿಶ್ರ ಬೆಳೆಯನ್ನು ಸಾವಯವ ಕೃಷಿಯ ಮೂಲಕ ಬೆಳೆದು ಉತ್ತಮ ಆದಾಯಗಳಿಸುವ ನಿಟ್ಟಿನಲ್ಲಿ ದಾಪುಗಾಲಿಡುತ್ತಿರುವ ಆನೇಕಲ್‌ ತಾಲ್ಲೂಕಿನ ಬಿದರಗುಪ್ಪೆಯ ಶಿಕ್ಷಕ ಬಿ.ಎಂ.ಹರೀಶ್‌ ಎಲ್ಲರಿಗೂ ಮಾದರಿಯಾಗಿದ್ದಾರೆ. ಆನೇಕಲ್‌ ತಾಲ್ಲೂಕಿನ ಸರ್ಜಾಪುರದ ಎಸ್‌.ವಿ.ಪಿ.ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿರುವ ಬಿ.ಎಂ.ಹರೀಶ್ ಅವರು ಕೃಷಿ ಕುಟುಂಬದಿಂದ ಬಂದವರು. ಹಾಗಾಗಿ ಪಾರಂಪರಿಕವಾಗಿ ಎರಡು ಎಕರೆ ಕೃಷಿ ಜಮೀನು ಇವರಿಗಿತ್ತು. ಇವರ ಕುಟುಂಬ ರಾಗಿ ಮತ್ತು ಕೆಲವು ತೋಟದ ಬೆಳೆಗಳನ್ನು ಬೆಳೆಯುವಲ್ಲಿ ನಿರತರಾಗಿತ್ತು. ಆದಾಯದ ಬಗ್ಗೆ ಯಾವುದೇ ಭರವಸೆ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಹರೀಶ್‌ ಅವರು ವೈಜ್ಞಾನಿಕವಾಗಿ ಮಿಶ್ರ ಬೆಳೆಯನ್ನು ಬೆಳೆಯಲು ತೀರ್ಮಾನ ಕೈಗೊಂಡು ವಿವಿಧ ಫಾರ್ಮ್‌ಗಳನ್ನು ಸುತ್ತಿ ತಮ್ಮದೇ ಆದ ವಿಧಾನ ಅಳವಡಿಸಿಕೊಂಡು ಕೇವಲ 10ತಿಂ ಗಳುಗಳಲ್ಲಿ ತಮ್ಮ ಜಮೀನಿನ ಚಹರೆಯನ್ನೇ ಬದಲಾಯಿಸಿ…

Read More