ಪ್ರಾಶಸ್ತ್ಯದ ಮತ : ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆಗೆ ಅನುಗುಣವಾಗಿ ‘ಪ್ರಾಶಸ್ತ್ಯ’ದ ಮತಗಳನ್ನು ಚಲಾಯಿಸ ಬೇಕು. ಮೊದಲ ಪ್ರಾಶಸ್ತ್ಯದ ಅಭ್ಯರ್ಥಿಯ ಹೆಸರಿನ ಮುಂದೆ ‘1’ ಎಂದು ನಮೂದಿಸಬೇಕು. ಉಳಿದ ಅಭ್ಯರ್ಥಿಗಳಿಗೆ ಎಷ್ಟು ಪ್ರಾಶಸ್ತ್ಯ ನೀಡಬೇಕು ಎಂಬುದನ್ನು ಅವರ ಹೆಸರಿನ ಮುಂದೆ 2, 3, 4, ಇತ್ಯಾದಿ ಅಂಕಿಗಳಲ್ಲಿ ನಮೂದಿಸಬಹುದು. ಒಬ್ಬ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಉಳಿದ ಅಭ್ಯರ್ಥಿಗಳಿಗೆ ಮತ ನೀಡದೆಯೂ ಇರಬಹುದು. ಯಾವುದೇ ಅಭ್ಯರ್ಥಿ (ನೋಟಾ ಸೇರಿದಂತೆ) ಹೆಸರಿನ ಮುಂದೆ ‘1’ ಎಂದು ಸೂಚಿಸದಿದ್ದರೆ ಅಥವಾ ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳ ಹೆಸರಿನ ಎದುರು ‘1’ ಎಂದು ನಮೂದಿಸಿದರೆ ಮತ ಅಸಿಂಧು ಆಗಲಿದೆ. ಮತವನ್ನು ಅಂಕಿಗಳಲ್ಲಿಯೇ ನಮೂದಿಸಬೇಕು.
Bidar, Gulbarga, Raichur and Koppal districts and Bellary Districts including Harapanahalli taluk of Davanagere District
ಒಟ್ಟು ಮತದಾರರ ಸಂಖ್ಯೆ : ಈಶಾನ್ಯ ಪದವೀಧರ ಕ್ಷೇತ್ರದಲ್ಲಿ 99,121 ಪುರುಷ, 57,483 ಮಹಿಳೆ ಹಾಗೂ 19 ಇತರರು ಸೇರಿದಂತೆ ಒಟ್ಟು 1,56,623 ಮತದಾರರಿದ್ದಾರೆ.